ನನ್ನ ಮಗ ಓದ್ಕೊಂಡು ದುಡಿಯುತ್ತಿದ್ದಾನೆ ಅವನ ವಯಸ್ಸಿನಲ್ಲಿ ನಾನು ಏನೂ ಮಾಡಿಲ್ಲ: ವಿನೋದ್ ರಾಜ್

ತಾಯಿಯ ಸ್ಮಾರಕವನ್ನು ದೇಗುಲವಾಗಿ ನಿರ್ಮಾಣ ಮಾಡಿದ ವಿನೋದ್ ರಾಜ್. ವಿವಾಹ ವಾರ್ಷಿಕೋತ್ಸವದಂದು ಮಾಡಿದ್ದು ಡಬಲ್ ಸ್ಪೆಷಲ್....
 

Vinod raj 25th wedding anniversary build temple to his mother leelavathi vcs

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅಮ್ಮನಿಗಾಗಿ ವಿನೋದ್ ರಾಜ್ ತಮ್ಮ ಭೂಮಿಯಲ್ಲಿ ಭವ್ಯಾವಾದ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಡಾ.ಎಂ ಲೀಲಾವರತಿ ದೇಗುಲ ಎಂದು ನಾಮಕರಣ ಹೆಸರಿಟ್ಟಿದ್ದಾರೆ. ಡಿಸೆಂಬರ್ 5ರಂದು ವಿನೋದ್ ರಾಜ್‌ ಮತ್ತು ಅನು ವೈವಾಹಿಕ ಜೀವನಕ್ಕೆ ಕಾಲಿಟ್ಟು 25 ವರ್ಷಗಳಾದ ಪ್ರಯುಕ್ತ ಅಂದೇ ಸ್ಮಾರಕ ಪೂಜೆ ಮಾಡಿದ್ದಾರೆ. ಡಿಸೆಂಬರ್ 8ಕ್ಕೆ ಲೀಲಾವತಿ ಅಮ್ಮ ಅಗಲಿ ವರ್ಷ ಕಳೆಯುತ್ತದೆ. ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಕಾಣೀಸಿಕೊಂಡಿದ್ದಾರೆ ವಿನೋದ್. 

'ತಾಯಿಗೋಸ್ಕರ ದೇಗುಲ ಕಟ್ಟಿರುವ ಮಗ ಎಂದುಬಿಟ್ಟು ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಎಲ್ಲರೂ ಕೊಟ್ಟಿರುವ ಈ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ ಅಲ್ಲದೆ ಅಮ್ಮನ ಈ ಆಸ್ಥಾನವನ್ನು ನಾನು ಹೇಗೆ ಉಳಿಸಿಕೊಂಡು ನಡೆಸಿಕೊಂಡು ಹೋಗಬೇಕು ಎಂದು ಯೋಚನೆ ಮಾಡಬೇಕು. ನನ್ನ ಮಗನಿಗೆ ಯಾವುದೇ ರೀತಿಯಲ್ಲಿ ಭಾರವನ್ನು ಕೊಡುವುದಿಲ್ಲ ಆತ ಚೆನ್ನಾಗಿ ಓದುತ್ತಿದ್ದಾನೆ ಹಾಗೂ ಕೆಲಸಕ್ಕೆ ಹೋಗುತ್ತಿದ್ದಾನೆ. ಜೀವನದಲ್ಲಿ ಯಾವುದಕ್ಕೂ ಬೇಸರ ಮಾಡಿಕೊಂಡಿಲ್ಲ ನನ್ನ ಮಡದಿ. ನಮ್ಮ ಜೀವನ ಹೀಗಿದೆ ಪರಿಸ್ಥಿತಿ ಹೀಗಿದೆ ವ್ಯವಸಾಯ ಭೂಮಿ ಇಷ್ಟಿದೆ ಅಂತ ಮೊದಲೇ ಹೇಳಿದ್ದೆ. ಕೆಲ ಸಮಯದ ಹಿಂದೆ ನನಗೆ ಸಿನಿಮಾಗಳು ಬರುವುದು ಕಡಿಮೆ ಆಯ್ತು ಅಮ್ಮನವರಿಗೂ ಕಡಿಮೆ ಆಯ್ತು ಏಕೆಂದರೆ ವಯೋಸಮಸ್ಯೆಗಳು ಶುರುವಾಯ್ತು. ತಮಿಳು ನಾಡಿನಲ್ಲಿ ಅಕೆ ಇದ್ದುಕೊಂಡು ಚೆನ್ನಾಗಿ ನೋಡಿಕೊಂಡಿದ್ದಾಳೆ ಇಲ್ಲಿ ನಾನು ಇದ್ದುಕೊಂಡು ನೋಡಿಕೊಂಡಿದ್ದೀನಿ. ನನ್ನ ಮಗನ ವಯಸ್ಸಿನಲ್ಲಿ ಆಗ ನಾನು ಏನೂ ಸಂಪಾದನೆ ಮಾಡಿಲ್ಲ ಈಗ ಅವನು ಸಂಪಾದನೆ ಮಾಡುತ್ತಿದ್ದಾನೆ ಅದೇ ನನಗೆ ಹೆಮ್ಮೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ವಿನೋದ್ ರಾಜ್ ಮಾತನಾಡಿದ್ದಾರೆ.

ಶಿಶಿರ್‌ನ ಸೇಫ್‌ ಮಾಡಲು ಶೋಭಾ ಶೆಟ್ಟಿ ಹೊರ ಬಂದಿದ್ದಾ?; ತ್ರಿವಿಕ್ರಮ್- ಗೌತಮಿ ಕೋಡ್‌ ವರ್ಡ್‌ನಲ್ಲಿದೆ ದೊಡ್ಡ ರಹಸ್ಯ

'ಅಜ್ಜಿ ಹೇಳಿದ ಹಾಗೆ ನಾನು ನಡೆದುಕೊಳ್ಳುತ್ತೀನಿ ಅವರ ಮಾತಿನಂತೆ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ. ಅಪ್ಪಾಜಿ ಅಜ್ಜಿಯನ್ನು ಹೇಗೆ ನೋಡಿಕೊಂಡರು ಅವರಂತೆ ನೋಡಿಕೊಳ್ಳಬೇಕು ಅನ್ನೋ ಆಸೆ ಆಗಿದೆ ನೋಡೋಣ'ಎಂದು ವಿನೋದ್ ರಾಜ್ ಪುತ್ರಿ ಹೇಳಿದ್ದಾರೆ.

ಬಿಸಿ ಬಿಸಿ ಬಿರಿಯಾನಿಯಲ್ಲಿ ಅರ್ಧ ಸೇದಿದ ಸಿಗರೇಟ್ ಪತ್ತೆ; ವಿಡಿಯೋ ವೈರಲ್

'ನನ್ನ ಮದುವೆ ದಿನ ಸ್ಮಾರಕ ಉದ್ಘಾಟನೆ ಆಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಇದು ನನಗೆ ಒಂದು ಸರ್ಪ್ರೈಸ್ ಆಗಿದೆ. ನಮ್ಮ 25ವೇ ವಾರ್ಷಿಕೋತ್ಸವದಂದು ನಮ್ಮ ಅತ್ತೆನೇ ಜೊತೆಗೆ ಇದ್ದು ಆಚರಿಸುತ್ತಿದ್ದಾರೆ ಅನಿಸುತ್ತದೆ. ಅಮ್ಮನೇ ದೇವರು ಎಂದು ಹೇಳುತ್ತೀವಿ ಆದರೆ ಈಗಿನ ಕಾಲದಲ್ಲಿ ಅಮ್ಮನಿಗೆ ದೇಗುಲ ಕಟ್ಟುವುದು ತುಂಬಾ ದೊಡ್ಡ ವಿಷಯ..ಇಷ್ಟೋಂದು ಚೆನ್ನಾಗಿ ಆಗಿರುವುದು ಖುಷಿಯಾಗುತ್ತದೆ. ನಮ್ಮ ಪಾಲಿಗೆ ಲೀಲಾವತಿ ಅಮ್ಮನೇ ದೇವರು'ಎಂದು ವಿನೋದ್ ರಾಜ್ ಪತ್ನಿ ಮಾತನಾಡಿದ್ದಾರೆ.

Latest Videos
Follow Us:
Download App:
  • android
  • ios