ಬಿಸಿ ಬಿಸಿ ಬಿರಿಯಾನಿಯಲ್ಲಿ ಅರ್ಧ ಸೇದಿದ ಸಿಗರೇಟ್ ಪತ್ತೆ; ವಿಡಿಯೋ ವೈರಲ್
ಬಿರಿಯಾನಿಯಲ್ಲಿ ಚಿಕನ್, ಮಟನ್, ಫಿಶ್, ಪ್ರಾನ್ಸ್....ಹೀಗೆ ವೆರೈಟಿ ಇರುತ್ತದೆ...ಇದ್ಯಾವುದು ಸಿಗರೇಟ್ ಬಿರಿಯಾನಿ?
ರುಚಿ ರುಚಿಯಾಗಿ ಏನಾದರೂ ತಿನ್ನಬೇಕು ಅನಿಸಿದಾಗ ಹೋಟೆಲ್ ಕಡೆ ಮುಖ ಮಾಡುತ್ತೀವಿ ಆದರೆ ಹೋಟೆಲ್‌ನಲ್ಲಿ ಈ ರೀತಿ ಘಟನೆ ನಡೆದಾಗ ಅಯ್ಯೋ ಮನೆಯಲ್ಲಿ ಮಾಡ್ಕೊಂಡು ತಿನ್ನಬೇಕಿತ್ತು ಅನಿಸೋದು ಗ್ಯಾರಂಟಿ. ನಾನ್ ವೆಜ್ ಹೋಟೆಲ್‌ಗಳಲ್ಲಿ ಅತಿ ಹೆಚ್ಚು ಮಾರಾಟವಾಗುವುದು ಚಿಕನ್ ಅಥವಾ ಮಟನ್ ಬಿರಿಯಾನಿ, ಅದರೆ ಈ ಹೋಟೆಲ್‌ನಲ್ಲಿ ಗ್ರಾಹಕನಿಗೆ ಸಿಗರೇಟ್ ಬಿರಿಯಾನಿ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿತ್ತು ಪ್ರತಿಯೊಬ್ಬರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಹೌದು! ಹೈದರಾಬಾದ್‌ನ ಪ್ರಸಿದ್ಧ ಹೋಟೆಲ್‌ನಲ್ಲಿ ಹುಡುಗರ ಗುಂಪು ಊಟಕ್ಕೆ ಎಂದು ಹೋಗಿದ್ದಾರೆ. ಪ್ರತಿಯೊಬ್ಬರು ತಮಗೆ ಇಷ್ಟವಾದ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಬಿರಿಯಾನಿ ಸಖತ್ ಫೇಮಸ್ ಹೀಗಾಗಿ ಬಿರಿಯಾನಿ ಆರ್ಡರ್ ಮಾಡಿಕೊಂಡಿದ್ದಾನೆ. ತಮ್ಮ ತಟ್ಟೆಗೆ ಬಿರಿಯಾನಿಯನ್ನು ಬಡಸಿಕೊಂಡ ಮೇಲೆ ತಿನ್ನುವಾದ ಅದರಲ್ಲಿ ಅರ್ಧ ಸೇದಿರುವ ಸಿಗರೇಟ್ ಕೈಗೆ ಸಿಕ್ಕಿದೆ. ಗಾಬರಿಕೊಂಡು ಗ್ರಾಹಕ ತಕ್ಷಣವೇ ಹೋಟೆಲ್ ಮಾಲೀಕರನ್ನು ಕರೆದು ದೂರು ನೀಡಿದ್ದಾರೆ. ಈ ಸಂಪೂರ್ಣ ಘಟನೆಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ತಾವು ಮಾಡಿದ ತಪ್ಪಿಗೆ ರೆಸ್ಟೋರೆಂಟ್ ಆಡಳಿತ ಮಂಡಳಿ ಗ್ರಾಹಕರಲ್ಲಿ ಕ್ಷಮೆ ಕೇಳುವುದನ್ನು ನೋಡಬಹುದು.
ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವಣ್ಣ ಆಂಡ್ ಗೀತಕ್ಕ; ಫ್ಯಾಮಿಲಿ ಫೋಟೋ ವೈರಲ್
'ಹಿಂದೂಸ್ ಯಾವುದೇ ಕಾರಣಕ್ಕೂ 'Bawarchi Biryani' ಆರ್‌ಟಿಸಿ ರಸ್ತೆ, ಹೈದರಾಬಾದ್‌ನಲ್ಲಿ ಇರುವ ಹೋಟೆಲ್‌ಗೆ ಹೋಗಬಾರದು. ಇಲ್ಲಿ ಅರ್ಥ ಸೇದಿರುವ ಸಿಗರೇಟ್‌ನ ಸೇರಿಸಿ ಬಿರಿಯಾನಿ ಮಾಡಿದ್ದಾರೆ. ಏನು ಎಕ್ಸಟ್ರಾ ರುಚಿ ನೀಡಲು ಈ ಪ್ರಯತ್ನನಾ? ದಯವಿಟ್ಟು ಯಾರೂ ಇಲ್ಲಿಗೆ ಹೋಗಬಾರದು' ಎಂದು ತತ್ವಮ್ ಅಸಿ X ಅಕೌಂಟ್‌ನಿಂದ ಪೋಸ್ಟ್ ಆಗಿದೆ. ನಾವು ಈ ಹೋಟೆಲ್‌ಗೆ ಹೋಗಿದ್ದೀವಿ ಇದುವರೆಗೂ ಈ ಅನುಭವ ಆಗಿಲ್ಲ, ಇಲ್ಲಿ ಬಿರಿಯಾಗಿ ರುಚಿಯಾಗಿ ಇರುತ್ತದೆ ಈ ಮೋಸ ಮಾಡಲ್ಲ ಎಂದು ಹಲವರು ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ.