ವಿನೋದ್ ಪ್ರಭಾಕರ್ ಅಭಿನಯದ ‘ವರದ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಫೆ.18ರಂದು ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಕುರಿತು ನಿರ್ದೇಶದ ಉದಯ್ ಪ್ರಕಾಶ್, ‘ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಪಕ್ಕಾ ಮಾಸ್ ಚಿತ್ರ. ಒಳ್ಳೆಯ ರೀತಿಯಲ್ಲಿ ಸಿನಿಮಾ ತೆರೆ ಮೇಲೆ ಮೂಡುತ್ತಿದೆ’ ಎಂದರು.
ವಿನೋದ್ ಪ್ರಭಾಕರ್ (Vinod Prabhakar) ಅಭಿನಯದ ‘ವರದ’ (Varada) ಚಿತ್ರದ ಟ್ರೇಲರ್ (Trailer) ಬಿಡುಗಡೆ ಆಗಿದೆ. ಫೆ.18ರಂದು ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಕುರಿತು ನಿರ್ದೇಶದ ಉದಯ್ ಪ್ರಕಾಶ್ (UdayPrakash), ‘ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಪಕ್ಕಾ ಮಾಸ್ ಚಿತ್ರ. ಒಳ್ಳೆಯ ರೀತಿಯಲ್ಲಿ ಸಿನಿಮಾ ತೆರೆ ಮೇಲೆ ಮೂಡುತ್ತಿದೆ’ ಎಂದರು. 'ರಾಬರ್ಟ್' ಸಿನಿಮಾ ನಂತರ ನನ್ನ ಅಭಿನಯದ 'ವರದ' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳ ಜೊತೆಗೆ, ಕೌಟುಂಬಿಕ ದೃಶ್ಯಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ತಂದೆ-ಮಗನ ಬಾಂಧವ್ಯ ಈ ಚಿತ್ರದ ಹೈಲೆಟ್. ನನ್ನ ತಂದೆ ಪಾತ್ರದಲ್ಲಿ ಖ್ಯಾತ ನಟ ಚರಣ್ ರಾಜ್ (Charan Raj) ಅಭಿನಯಿಸಿದ್ದಾರೆ ಎಂದು ವಿನೋದ್ ಪ್ರಭಾಕರ್ ಹೇಳಿದರು.
ನಾನು ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷಗಳಾಯಿತು. ಆರಂಭದಲ್ಲಿ ತುಂಬಾ ಕಷ್ಟದ ದಿನಗಳನ್ನು ನೋಡಿದ್ದೀನಿ. ಈಗ ಒಂದು ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ತಲುಪಿದ್ದೇನೆ. ನಿರ್ದೇಶನವನ್ನು ನಾನೇ ಮಾಡಿದ್ದೀನಿ. ನಮ್ಮ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅಮಿತ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಅಭಿನಯ ಚೆನ್ನಾಗಿದೆ . ತಂತ್ರಜ್ಞರ ಕಾರ್ಯವಂತು ಅದ್ಭುತ. ಇದೇ ಹದಿನೆಂಟರಂದು ನಮ್ಮ ಚಿತ್ರ ರಾಜ್ಯಾದ್ಯಂತ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಉದಯ್ ಪ್ರಕಾಶ್ ತಿಳಿಸಿದರು.
Vinod Prabhakar Varada: ವರದ ಚಿತ್ರದ ವಿಶೇಷ ಹಾಡು ರಿಲೀಸ್ ಮಾಡಿದ ಗಣೇಶ್
ಚಿತ್ರದ ಟ್ರೇಲರ್ ನೋಡಿ ಖುಷಿಯಾಗಿದೆ. ಚಿತ್ರವನ್ನು ನೋಡುವ ಕಾತುರದಲ್ಲಿದ್ದೀನಿ. ನಾನು ಈ ಚಿತ್ರದಲ್ಲಿ 'ವರದ'ನ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದೀನಿ ಎಂದು ನಾಯಕಿ ಅಮಿತ (Amitha) ಹೇಳಿದರು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿಲ್ ಸಿದ್ದು (Anil Siddu), ಎಂ.ಕೆ.ಮಠ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಎಂ.ಕೆ.ಮಠ, ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಚಿತ್ರದ ಕುರಿತು ಮಾತನಾಡಿದರು. ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್. ಕೆ.ಕಲ್ಯಾಣ್ , ನಂದೀಶ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕರಾಮ್ ಸಂಭಾಷಣೆ ಬರೆದಿದ್ದಾರೆ.
ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ವಿನೋದ್ ಪ್ರಭಾಕರ್, ಚರಣ್ ರಾಜ್, ಅಮಿತ, ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರ್ಮಾಪಕನಾದ Vinod Prabhakar; ಟೈಗರ್ ಟಾಕೀಸ್‌ನಲ್ಲಿ 'ಲಂಕಾಸುರ' ತಯಾರಿ!
ನೋವು ತೋಡಿಕೊಂಡಿದ್ದ ವಿನೋದ್: ಇತ್ತೀಚೆಗಷ್ಟೇ 'ವರದ' ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಕುರಿತಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿನೋದ್ ಪ್ರಭಾಕರ್ ನೋವು ತೋಡಿಕೊಂಡಿದ್ದರು. ‘ಕೋವಿಡ್ ಕಾರಣಕ್ಕೆ ನಿರ್ಮಾಪಕರು ಸಿನಿಮಾ ಮಾಡಲು ಅಂಜುವ ಸನ್ನಿವೇಶ ಇದೆ. ನಾನು ಮೊದಲಿಂದಲೂ ನಿರ್ಮಾಪಕ ನಟ. ನನಗೆ ಕತೆ ಹೇಳಲು ಬರುವ ಹೊಸ ನಿರ್ಮಾಪಕರಲ್ಲಿ ಮೊದಲು ಕೇಳೋದೇ ಬಜೆಟ್ ಎಷ್ಟು ಅಂತ. 25 ಲಕ್ಷ ರು. ನಿಂದ 50 ಲಕ್ಷ ರು.ವರೆಗಿನ ಬಜೆಟ್‌ನಲ್ಲಿ ಸಿನಿಮಾ ಮಾಡಿ ಅಂತಲೇ ಹೇಳುತ್ತೇನೆ. ನನ್ನನ್ನು ಹಾಕಿಕೊಂಡು ಮಾಡಿದ ಸಿನಿಮಾ ಎಷ್ಟು ರಿಟರ್ನ್ಸ್ ಕೊಡಬಲ್ಲದು ಅನ್ನೋದು ನನಗೆ ಗೊತ್ತು. ನಾನ್ಯಾವತ್ತೂ ನಿರ್ಮಾಪಕರಿಗೆ ಹೊರೆಯಾಗಲ್ಲ. ಈ 'ವರದ' ಚಿತ್ರದಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ’ ಎಂದಿದ್ದರು.

