Asianet Suvarna News Asianet Suvarna News

ಸ್ಕ್ರಿಪ್ಟ್‌ ಮಾಡಲು ಹೋಗಿ ಹೀರೋ ಆದ 'ಕಾಣದಂತೆ ಮಾಯಾವಾದನು' ವಿಕಾಸ್!

ದುನಿಯಾ ವಿಜಯ್‌ ನಟನೆಯ ‘ಜಯಮ್ಮನ ಮಗ’ ವಿಕಾಸ್‌ ಹೀರೋ ಆಗಿದ್ದೇ ಒಂದು ಕುತೂಹಲ. ಚಿತ್ರಕತೆ, ನಿರ್ದೇಶನ ಅಂತ ಇದ್ದವರನ್ನು ಮೊದಲ ಬಾರಿಗೆ ಹೀರೋ ಮಾಡಿದ್ದು ‘ಕಾಣದಂತೆ ಮಾಯವಾದನು’ ಸಿನಿಮಾ.

Vikas talks about Kannada movie kaanadante maayavadanu
Author
Bangalore, First Published Jan 30, 2020, 8:43 AM IST

ಜ.31ರಂದು ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರದ ನಿರ್ದೇಶಕರು ರಾಜ್‌ ಪತ್ತಿಪಾಟಿ. ಸಿನಿಮಾ ತೆರೆಗೆ ಬರುತ್ತಿರುವ ಹೊತ್ತಿನಲ್ಲಿ ತಾನು ಈ ಚಿತ್ರಕ್ಕೆ ನಾಯಕನಾಗಿದ್ದು ಹೇಗೆಂದು ವಿಕಾಸ್‌ ನೆನಪಿಸಿಕೊಂಡಿದ್ದಾರೆ.

ಆರು ಅವತಾರಗಳಲ್ಲಿ ಶರಣ್; ಪಾತ್ರದ ಸೀಕ್ರೆಟ್ ರಿವೀಲ್‌!

ಸಾಮಾನ್ಯವಾಗಿ ವಿಕಾಸ್‌ ಅವರು ಬೇರೆ ಬೇರೆ ಚಿತ್ರಗಳ ಕತೆ, ಸ್ಕಿ್ರಪ್ಟ್‌ ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ. ಜತೆಗೆ ಒಂದಿಷ್ಟುಚಿತ್ರಗಳಲ್ಲಿ ಸಣ್ಣ ಪುಟ್ಟಪಾತ್ರಗಳಲ್ಲೂ ನಟಿಸಿದ್ದಾರೆ. ಈ ನಡುವೆ ‘ಜಯಮ್ಮನ ಮಗ’ ಚಿತ್ರವನ್ನು ನಿರ್ದೇಶಿಸಿ, ಯಶಸ್ಸು ಕಂಡವರು. ಅವರಿಗೆ ನಿರ್ದೇಶನ ಮಾಡುವ ಸಾಕಷ್ಟುಅವಕಾಶಗಳು ಬರುತ್ತಿದ್ದಾಗಲೇ ‘ಕಾಣದಂತೆ ಮಾಯವಾದನು’ ಚಿತ್ರಕ್ಕೆ ಚಿತ್ರಕತೆ ಮಾಡುವ ಸಲುವಾಗಿ ನಿರ್ದೇಶಕ ರಾಜ್‌ ಪತ್ತಿಪಾಟಿ ವಿಕಾಸ್‌ ಅವರನ್ನು ಕರೆದಿದ್ದಾರೆ. ಚಿತ್ರಕ್ಕೆ ಸ್ಕಿ್ರಪ್ಟ್‌ ಮಾಡುವ ಸಲು ಕತೆ ಹಾಗೂ ಚಿತ್ರತಂಡದ ಜತೆ ನಾಲ್ಕೈದು ತಿಂಗಳು ಟ್ರಾವಲ್‌ ಮಾಡಿದ ವಿಕಾಸ್‌ ಅವರೇ ನಿರ್ದೇಶಕರಿಗೆ ಸೂಕ್ತ ಅನಿಸಿದೆ. ತೆರೆ ಹಿಂದೆ ಕೂತು ತಮ್ಮ ಕತೆಯನ್ನು ಅರ್ಥ ಮಾಡಿಕೊಂಡ ವಿಕಾಸ್‌ ಅವರೇ ತಮ್ಮ ಚಿತ್ರಕ್ಕೆ ಹೀರೋ ಆಗಬೇಕೆಂದು ನಿರ್ಧರಿಸಿ, ಚಿತ್ರಕಥೆ ಫೈನಲ್‌ ಆದ ಮೇಲೆ ನಾಯಕನ ಹುಡುಕಾಟಕ್ಕಿಳಿದಾಗ ‘ಇದೊಂದು ಹೊಸ ರೀತಿಯ ಕತೆ. ಇದಕ್ಕೆ ಹೊಸಬರೇ ಬೇಕು. ಇಮೇಜ್‌ಗಳ ಹೊರತಾಗಿರುವ ಹೀರೋಗಳು ಇಲ್ಲಿ ನಟಿಸಿದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವೇ ಹೀರೋ ಆಗಿ’ ಎಂದು ವಿಕಾಸ್‌ ಅವರಿಗೆ ನಾಯಕನ ಪಟ್ಟದ ಅಹ್ವಾನ ಕೊಟ್ಟಿದ್ದು ನಿರ್ದೇಶಕರು.

'ಓಲ್ಡ್ ಮಾಂಕ್' ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ

ತಾನು ನಿರ್ದೇಶಕ, ‘ಜಯಮ್ಮನ ಮಗ’ ಚಿತ್ರದ ನಂತರ ಒಂದಿಷ್ಟುಸಿನಿಮಾ ನಿರ್ದೇಶಿಸುವ ಅವಕಾಶಗಳು ಬಂದಿವೆ. ಎಲ್ಲವನ್ನೂ ಬಿಟ್ಟು ಹೀರೋ ಆಗುವುದು ಹೇಗೆ ಎನ್ನುವ ಯೋಚನೆ ಬಂದರೂ ವಿಕಾಸ್‌, ಹೀರೋ ಆಗಿದ್ದು ಚಿತ್ರದ ಕತೆಗಾಗಿ. ‘ಕತೆ ತುಂಬಾ ಚೆನ್ನಾಗಿ ಮಾಡಿಕೊಂಡಿದ್ದರು. ನಾನೇ ತೊಡಗಿಸಿಕೊಂಡ ಕತೆಗೆ ನಾನೇ ಹೀರೋ ಅವಕಾಶ ಬಂದಾಗ ಇಲ್ಲ ಎನ್ನದೆ ಒಪ್ಪಿಕೊಂಡೆ. ಹಾಗೆ ಚಿತ್ರಕ್ಕೆ ಸ್ಕಿ್ರಪ್ಟ್‌ ಬರೆಯಲು ಬಂದವವು ಅದೇ ಚಿತ್ರಕ್ಕೆ ಹೀರೋ ಆದೆ’ ಎನ್ನುತ್ತಾರೆ ವಿಕಾಸ್‌. ಇಲ್ಲಿ ವಿಕಾಸ್‌ ಅವರಿಗೆ ನಾಯಕಿಯಾಗಿ ಸಿಂಧು ಲೋಕನಾಥ್‌ ನಟಿಸಿದ್ದಾರೆ. ಚಂದ್ರಶೇಖರ್‌ ನಾಯ್ಡು, ಸೋಮ್‌ ಸಿಂಗ್‌ ಹಾಗೂ ಪುಷ್ಪ ಸೋಮ್‌ ಸಿಂಗ್‌ ಅವರು ನಿರ್ಮಾಣದ ಈ ಚಿತ್ರದ್ದು ಎರಡು ಆತ್ಮಗಳು ಪ್ರೇಮ ಕತೆ ಎನ್ನಬಹುದು. ಜ.31ರಂದು ತೆರೆಗೆ ಬರುತ್ತಿದ್ದು, ಸುಜ್ಞಾನ್‌ ಅವರ ಛಾಯಾಗ್ರಹಣ ಇದೆ. ಈ ಚಿತ್ರಕ್ಕೆ ವಿಜಯ್‌ ಗುಮ್ಮಿನೇನಿ ಸಂಗೀತ ನೀಡಿದ್ದಾರೆ. ಅಚ್ಯುತಕುಮಾರ್‌, ವಿನಯಪ್ರಸಾದ್‌, ಸುಚೇಂದ್ರ ಪ್ರಸಾದ್‌, ರಾಘವ್‌ ಉದಯ್‌, ಭಜರಂಗಿ ಲೋಕಿ, ಧರ್ಮಣ್ಣ, ಸೀತಾ ಕೋಟೆ, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ಚಿತ್ರದಲ್ಲಿ ನಟಿಸಿದ್ದಾರೆ.

Follow Us:
Download App:
  • android
  • ios