ವಿಜಯಲಕ್ಷ್ಮೀ ಜೊತೆ ಬಳ್ಳಾರಿ ಜೈಲಿನಲ್ಲಿ ಮಾತುಕತೆ ಬಳಿಕ ದರ್ಶನ್ ಮುಖ ಏನ್ ಹೇಳ್ತಿತ್ತು..!?

ರೇಣುಕಾಸ್ವಾಮಿ ಕೊಲೆಯಾದಾಗ ಗರ್ಭಿಣಿಯಾಗಿದ್ದ ಪತ್ನಿ ಸಹನಾ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಭೂಮಿಗೆ ಬಂದಿರುವ ಆತನ ಕಂದ ಅಪ್ಪನನ್ನು ಫೋಟೋದಲ್ಲಿ ಮಾತ್ರ ನೋಡಲು ಸಾಧ್ಯ. ಕೊಲೆಗೆ ಕಾರಣವೇನೇ ಇರಲಿ, ಕಾರಣರಾದವರು ಯಾರೇ ಆಗಿರಲಿ, ಆದರೆ..

Vijayalakshmi talks with darshan in Bellary jail and returns to Bengaluru srb

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ (Darshan) ಅವರಿಗೆ ಯಾಕೋ ಟೈಮೇ ಸರಿಯಿಲ್ಲ! ಬೇಲ್ ಅರ್ಜಿ ವಜಾ ಆದ ಬಳಿಕ ದರ್ಶನ್ ಆಪ್ತರಿಗೆ ಮುಂದೆ ಅದೇನು ಮಾಡಬೇಕೆಂದೇ ಯಾರಿಗೂ ತೋಚುತ್ತಿಲ್ಲ ಎನ್ನಿಸುತ್ತಿದೆ. ಮತ್ತೆ ಬಳ್ಳಾರಿ ಜೈಲಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Darshan wife Vijayalakshmi) ಹಾಗೂ ಕುಟುಂಬಸ್ಥರು ಭೇಟಿ ನೀಡಿದ್ದರು. ನಟ ದರ್ಶನ್ ಜೊತೆಗೆ ಪತ್ನಿ ಹಾಗೂ ಫ್ಯಾಮಿಲಿ ಆಪ್ತರು ಸುದೀರ್ಘ ಚರ್ಚೆ ನಡೆಸಿದ್ದಾರೆ. 

ಚರ್ಚೆಯ ವಿಷಯವೇನು ಎಂಬ ಕುತೂಹಲ ಎಲ್ಲರಿಗೂ ಸಹಜ.. ಜಾಮೀನು, ಅರೋಗ್ಯ  ಹಾಗೂ ಚಿಕಿತ್ಸೆ ಬಗ್ಗೆ ವಿಜಯಲಕ್ಷ್ಮಿ ಹಾಗು ಕುಟುಂಬಸ್ಥರು ಸುದೀರ್ಘ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಮುಂದಿನ ನಡೆ ಹೇಗಿರಬೇಕು, ಏನೇನು ಮಾಡಬೇಕು ಅಥವಾ ಏನು ಮಾಡಬಾರದು ಎಂಬೆಲ್ಲ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಆದರೆ, ಚರ್ಚೆಯ ಎಲ್ಲ ವಿವರಣೆ ಸಿಗಲು ಅಸಾಧ್ಯ ಅಲ್ಲವೇ? 

ಮಹಾ ಸಂಕಷ್ಟಕ್ಕೆ ಸಿಕ್ಕ ಕಲರ್ಸ್ ಕನ್ನಡ, ಬಿಗ್ ಬಾಸ್ ಪ್ರಸಾರ ನಿಲ್ಲಿಸಬೇಕೆಂದು ದೂರು..!?

 ಅರ್ಧ ಗಂಟೆಗಳ ಕಾಲ ಮಾತುಕತೆ ಬಳಿಕ ಎರಡು ಬ್ಯಾಗ್ ಹಿಡಿದು ನಟ ದರ್ಶನ್ ಅವರು  ಹೈಸೆಕ್ಯೂರಟಿ ಸೆಲ್‌ಗೆ  ವಾಪಾಸ್ ಹೋಗಿದ್ದಾರೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ಕೂಡ ಜೈಲಿನಿಂದ ಹೊರಟು ಹೋಗಿದ್ದಾರೆ. ಪತ್ನಿ ಮತ್ತು ಕುಟುಂಬಸ್ಥರ ಜೊತೆ ಮನಃಪೂರ್ವಕವಾಗಿ ಮಾತನಾಡಿದ ಖುಷಿ ದರ್ಶನ್ ಮುಖದಲ್ಲಿ ಎದ್ದು ಕಾಣುತ್ತಿತ್ತು ಎನ್ನಲಾಗಿದೆ.

ನಟ ದರ್ಶನ್ ಜೊತೆಗೆ ಜೈಲು ಸೇರಿದ್ದ ನಾಲ್ಕು ಮಂದಿಗೆ ಈಗಾಗಲೇ ನ್ಯಾಯಾಲಯ ಶರತ್ತುಬದ್ಧ ಜಾಮೀನು ನೀಡಿದೆ. ಆದರೆ, ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನುಳಿದರಿಗೆ ಸದ್ಯಕ್ಕೆ ಜಾಮೀನು ಸಿಗುತ್ತಿಲ್ಲ. ಒಂದು ಕೊಲೆಯ ಆರೋಪಿಗಳಾಗಿ ಜೈಲು ಸೇರಿರುವ ಅವರೆಲ್ಲರೂ ಆದ್ಯಾವಾಗ ಹೊರಗೆ ಬರುತ್ತಾರೋ ಗೊತ್ತಾಗುತ್ತಿಲ್ಲ. ಆದರೆ, ನಟ ದರ್ಶನ್ ಆಪ್ತರು ಹಾಗೂ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ, ಕಾಯುತ್ತಿರುವವರ ಪಾಲಿಗೆ ಇನ್ನೂ ಒಳ್ಳೇ ಸಮಯ ಬಂದಿಲ್ಲ!

ರೇಣುಕಾಸ್ವಾಮಿ ಕೊಲೆಯಾದಾಗ ಗರ್ಭಿಣಿಯಾಗಿದ್ದ ಪತ್ನಿ ಸಹನಾ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಭೂಮಿಗೆ ಬಂದಿರುವ ಆತನ ಕಂದ ಅಪ್ಪನನ್ನು ಫೋಟೋದಲ್ಲಿ ಮಾತ್ರ ನೋಡಲು ಸಾಧ್ಯ. ಕೊಲೆಗೆ ಕಾರಣವೇನೇ ಇರಲಿ, ಕಾರಣರಾದವರು ಯಾರೇ ಆಗಿರಲಿ, ಆದರೆ, ಹುಟ್ಟುವಾಗಲೇ ತಂದೆಯನ್ನು ಕಳೆದುಕೊಂಡ ತಬ್ಬಲಿಯಾಗಿ ರೇಣುಕಾಸ್ವಾಮಿ ಮಗ ಹುಟ್ಟಿರುವುದಂತೂ ಸತ್ಯ. ಒಟ್ಟಾರೆಯಾಗಿ ಈಗ ಆ ಕೊಲೆಯಲ್ಲಿ ಆರೋಪಿಗಳಾಗಿರುವ ದರ್ಶನ್ & ಟೀಮ್ ಜೈಲು ಸೇರಿದ್ದಾರೆ.

ಅಮೂಲ್ಯ ಅಣ್ಣ ದೀಪಕ್ ಅಂತಿಮ ದರ್ಶನ ಪಡೆದ ಸೀತಾರಾಮ ವೈಷ್ಣವಿ ಗೌಡ, ಸಿನಿ ತಾರೆಯರು

ನಟ ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳಿಗೆ ಯಾವತ್ತೂ ಬೇಲು ಸಿಗುತ್ತೋ ಏನೋ! ಈಗಾಗಲೇ ಬೇಲು ಪಡೆದಿರುವವರೂ ಕೂಡ ಕರೆದಾಗ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಜೈಲಿನಿಂದ ಹೊರಗೆ ಬಂದಿರುವ ಅವರಿಗೂ ಸಂಪೂರ್ಣ ಸ್ವಾತಂತ್ರ್ಯವಿಲ್ಲ, ಕರೆದಾಗ ಹೋಗಬೇಕಾದ ತಲೆನೋವಂತೂ ಇದ್ದೆ ಇದೆ. ಈ ಕೇಸ್‌ ಅದೆಲ್ಲಿಗೂ ಹೋಗಿ ತಲುಪುತ್ತೋ ಏನೋ! ಅವರಲ್ಲಿ ಯಾರು ಅಪರಾಧಿಗಳು, ಯಾರು ನಿರಪರಾಧಿಗಳು ಎಂದು ಸಾಬೀತು ಆಗುತ್ತೋ, ಅದ್ಯಾವಾಗ ಆಗುತ್ತೋ, ಯಾವುದಕ್ಕೂ ಸದ್ಯ ಉತ್ತರವಿಲ್ಲ. 
 

Latest Videos
Follow Us:
Download App:
  • android
  • ios