Asianet Suvarna News Asianet Suvarna News

ಮದುವೆಯಾಗದಿದ್ರೂ 'ಮುದ್ದು ಹೆಂಡ್ತಿ' ಆಗಿದ್ದ ಪ್ರವಿತ್ರಾ ಗೌಡಗೆ ಪ್ರೀತಿಯ 'ಸುಬ್ಬ'ನಾಗಿದ್ದ ದರ್ಶನ್!

ನಟ ದರ್ಶನ್‌ ತನ್ನ ಹೆಂಡತಿ ವಿಜಲಕ್ಷ್ಮಿ ಅವರಿಗೆ ಏನೆಂದು ಕರೆಯುತ್ತಿದ್ದರೋ ಗೊತ್ತಿಲ್ಲ. ಆದರೆ, ತನ್ನ ಗೆಳತಿ ಪವಿತ್ರ ಗೌಡಗೆ ಮಾತ್ರ ಮುದ್ದು ಹೆಂಡ್ತಿ ಎಂದು ಕರೆಯುತ್ತಿದ್ದರು.

Vijayalakshmi husband Darshan call Pavithra gowda to Muddu hendti for illegal relationship sat
Author
First Published Sep 13, 2024, 12:11 PM IST | Last Updated Sep 13, 2024, 4:16 PM IST

ಬೆಂಗಳೂರು (ಸೆ.10): ನಟ ದರ್ಶನ್ ಅಧಿಕೃತವಾಗಿ ಪಂಚಭೂತಗಳ ಸಾಕ್ಷಿಯಾಗಿ ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿದ್ದು, ಅವರಿಬ್ಬರ ಸಂಸಾರಕ್ಕೆ ಒಬ್ಬ ಮಗನೂ ಇದ್ದಾನೆ. ಆದರೆ, ಮನೆಯಲ್ಲಿ ಹೆಂಡತಿ ಇದ್ದಾಗ್ಯೂ ಹೊರಗೆ ನಟಿ ಪವಿತ್ರಾಗೌಡ ಅವರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ. ಕಳೆದ 10 ವರ್ಷಗಳಿಂದ ಲೀವ್ ಇನ್ ಸಂಬಂಧದಲ್ಲಿರುವ ದರ್ಶನ್ ಪವಿತ್ರಾ ಗೌಡಗೆ ಮುದ್ದು ಹೆಂಡ್ತಿ ಎಂದೇ ಕರೆಯುತ್ತಿದ್ದನು.

ನಟ ದರ್ಶನ್ ತನ್ನ ಸ್ನೇಹಿತ ಕೊಡಿಸಿದ್ದ ಸಿಮ್ ಕಾರ್ಡ್‌ ಅನ್ನು ಉಪಯೋಗಿಸುತ್ತಿದ್ದನು. ಜೊತೆಗೆ, ಅಭಿಮಾನಿಯೊಬ್ಬ ಕೊಟ್ಟ ಐಪೋನ್-15 ಅನ್ನು ಬಳಕೆ ಮಾಡುತ್ತಿದ್ದನು. ಇನ್ನು ಪವಿತ್ರಾಗೌಡ ಒಟ್ಟು ಮೂರು ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದಳು. ಪವಿತ್ರಾಳ ಎಲ್ಲ ನಂಬರ್‌ಗಳನ್ನೂ ಪವಿ, ಪವೀ, ಪವೀ... ಎಂದು ಸೇವ್ ಮಾಡಿಕೊಂಡಿದ್ದನು. ಇನ್ನು ಪವಿತ್ರಾ ಗೌಡ ದರ್ಶನ್ ಮೊಬೈಲ್ ನಂಬರ್ ಅನ್ನು ಡಿ ಎಂದು ಸೇವ್ ಮಾಡಿಕೊಂಡಿದ್ದಳು. ಇಬ್ಬರು ಮಾತನಾಡುವಾಗ, ಮೆಸೇಜ್ ಮಾಡುವಾಗ ಪವಿತ್ರಾ ಗೌಡ ಪ್ರೀತಿಯಿಂದ ದರ್ಶನ್‌ಗೆ 'ಸುಬ್ಬ' ಎಂದು ಕರೆದರೆ, ದರ್ಶನ್ ಪವಿತ್ರಾ ಗೌಡಗೆ 'ಮುದ್ದು ಹೆಂಡ್ತಿ' ಎಂದು ಕರೆಯುತ್ತಿದ್ದನು ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಜೈಲಿನಲ್ಲಿದ್ದರೂ ಕರಗಲಿಲ್ಲ ಕೊಬ್ಬು: ಮೀಡಿಯಾಗಳಿಗೆ ಮಿಡಲ್ ಫಿಂಗರ್ ತೋರಿಸಿದ ದರ್ಶನ್

ರಚಿರಾ ರಾಮ್ ಇಲ್ಲದಿದ್ದರೆ ಪವಿತ್ರಾಗೌಡ ನಾಯಕಿ ಆಗಬೇಕಿತ್ತು:  ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದಲ್ಲಿ ನಟಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಈ ಸಿನಿಮಾಗೆ ಆಡಿಷನ್ ಮಾಡುವಾಗ ರಚಿತಾ ರಾಮ್ ಆಯ್ಕೆಯಾಗಿದ್ದರು. ಆದರೆ, ಸ್ವಲ್ಪ ತಡವಾಗಿ ಸಿನಿಮಾಗೆ ಆಡಿಷನ್‌ಗೆ ಹೋಗಿದ್ದ ನಟಿ ಪವಿತ್ರಾಗೌಡ ತಮ್ಮ ಮಾಡೆಲಿಂಗ್ ಮಾಹಿತಿಯನ್ನು ನಟ ದರ್ಶನ್ ಮ್ಯಾನೇಜರ್‌ಗೆ ನೀಡಿದ್ದರು. ಸಿನಿಮಾಗೆ ತಮ್ಮನ್ನು ರೆಫರ್ ಮಾಡಲು ಮ್ಯಾನೇಜರ್ ಬಳಿ ದರ್ಶನ್ ಮೊಬೈಲ್ ನಂಬರ್ ಅನ್ನು ಪಡೆದುಕೊಂಡಿದ್ದಳು. ಇದಾದ ನಂತರ ದರ್ಶನ್‌ಗೆ ಕಾಲ್ ಮಾಡಿದ ಪವಿತ್ರಾ ಗೌಡ, ಬುಲ್ ಬುಲ್ ಸಿನಿಮಾಗೆ ನಟಿಯಾಗಿ ಆಯ್ಕೆ ಮಾಡಿಕೊಳ್ಳಲು ಮನವಿ ಮಾಡುತ್ತಾಳೆ.ಆದರೆ, ದರ್ಶನ್ ಈಗಾಗಲೇ ಆಡಿಷನ್ ಮುಕ್ತಾಯವಾಗಿದೆ. ಮುಂದಿನ ಸಿನಿಮಾಗಳಿಗೆ ಆಡಿಷನ್ ಮಾಡಿದರೆ ಖಂಡಿತಾ ಮಾಹಿತಿ ನಿಮ್ಮ ಹೆಸರನ್ನು ರೆಫರ್ ಮಾಡುವುದಾಗಿಯೂ ಹೇಳುತ್ತಾರೆ.

ಕನ್ನಡದ ಒಬ್ಬ ಸ್ಟಾರ್ ನಟ ಇಷ್ಟೊಂದು ಮುಕ್ತವಾಗಿ. ಆತ್ಮೀಯವಾಗಿ ಮಾತನಾಡುವುದನ್ನು ಗಮನಿಸಿದ ಪವಿತ್ರಾ ಗೌಡ, ಇದನ್ನು ಸಲುಗೆಯಾಗಿ ಪಡೆದುಕೊಂಡು ಆಗಾಗ ಕರೆ ಮಾಡಿ ಯಾವುದಾದರೂ ಸಿನಿಮಾಗೆ ರೆಫರ್ ಮಾಡುವಂತೆ ಫೋನ್ ಕಾಲ್ ಮತ್ತು ಮೆಸೇಜ್ ಮಾಡಿದ್ದಾಳೆ. ನಂತರ ಇದೇ ರೀತಿ ಮಾತನಾಡುತ್ತಾ ಸಲುಗೆ ಬೆಳೆಸಿಕೊಂಡು ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಆವರ ಆತ್ಮೀಯತೆ ಹಲವಾರು ಬಾರಿ ಭೇಟಿಗೆ ವೇದಿಕೆ ಮಾಡಿಕೊಂಡಿದೆ. ಕೆಲವು ಭೇಟಿಗಳ ನಂತರ ಕಾರಿನಲ್ಲಿ ಲಾಂಗ್ ರೈಡ್ ಹೋಗಿ ಬಂದಿದ್ದಾರೆ. ಆಗ ಆತ್ಮೀಯತೆ, ಸಲುಗೆ ಪ್ರೀತಿಗೆ ತಿರುಗಿದೆ. ಪ್ರೀತಿ ಹೆಚ್ಚಾದಾಗ ಪವಿತ್ರಾ ಗೌಡ ವಾಸವಿದ್ದ ಮನೆಗೆ ದರ್ಶನ್ ಆಗಾಗ ಹೋಗಿ ಬರಲು ಆರಂಭಿಸಿದ್ದಾನೆ. ನಂತರ ಇವರಿಬ್ಬರ ನಡುವೆ ಪ್ರೀತಿಯನ್ನು ದಾಟಿದ ಸಂಬಂಧ ಶುರುವಾಗಿದ್ದು, ಆಗ 1.75 ಕೋಟಿ ರೂ. ಖರ್ಚು ಮಾಡಿ ದರ್ಶನ್ ತನ್ನ ಮನೆಯಿಂದ 1.5 ಕಿ.ಮೀ. ದೂರದಲ್ಲಿ ಆರ್.ಆರ್. ನಗರದಲ್ಲಿ ಒಂದು ಮನೆಯನ್ನು ಖರೀದಿ ಮಾಡಿ ಕೊಡುತ್ತಾನೆ. ಅಲ್ಲಿಂದ ಇವರಿಬ್ಬರ ನಡುವೆ ಅಧಿಕೃತವಾಗಿ ಪ್ರತ್ಯೇಕ ಜೀವನ ಆರಂಭವಾಗುತ್ತದೆ.

ಏ ಬ್ರೋ.., ಆ್ಯಕ್ಚುವಲಿ ಸೋನಲ್ ಯಾವತ್ತೂ ನಂಗೆ ಹುಡ್ಗಿ ಅಂತ ಅನ್ನಿಸ್ಲೇ ಇಲ್ಲ; ನಟ ದರ್ಶನ್!

ದರ್ಶನ್ ಜೊತೆಗೆ ಮಾತು ಬಿಟ್ಟಿದ್ದ ಪವಿತ್ರಾಗೌಡ: ಇನ್ನೇನು ದರ್ಶನ್ ಜೊತೆಗೆ ಪ್ರತ್ಯೇಕ ಸಂಸಾರವನ್ನೂ ಆರಂಭಿಸುವ ಮುನ್ನ ಪವಿತ್ರಾಗೌಡ ನೇರವಾಗಿ ವಿಜಯಲಕ್ಷ್ಮಿಗೆ ಕರೆ ಮಾಡಿ ನಿನ್ನ ಗಂಡ ನನ್ನ ಹತ್ತಿರ ಬರುತ್ತಿದ್ದಾನೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಳು. ಆದರೆ, ಇತ್ತ ದರ್ಶನ್‌ಗೆ ಹತ್ತಿರವೂ ಆಗಿದ್ದಳು. ನಂತರ ಕಳೆದ ವರ್ಷ ದರ್ಶನ್ ತನ್ನ ಗೆಳೆಯ ತುಂಬಾ ಆತ್ಮೀಯನೆಂಬಂತೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಳು. ಇದಕ್ಕೆ ಪ್ರತಿಯಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಪವಿತ್ರಾಗೌಡ ಮತ್ತು ಆಕೆಯ ಮೊದಲ ಪತಿ ಅಜಯ್ ಸಿಂಗ್ ಜೊತೆಗಿರುವ ಫೋಟೋ, ಅವರ ಮಗಳನ್ನು ತೋರಿಸಿದ್ದಳು. ಇದರಿಂದ ಇಬ್ಬರ ನಡುವೆ ಒಂದು ಸುತ್ತಿನ ಜಡೆ ಜಗಳವೂ ನಡೆದಿತ್ತು. ಇದರೆ ಆಸುಪಾಸಿನ ದಿನಗಳಲ್ಲಿ ನಟ ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿಯೊಂದಿಗೆ ದುಬೈಗೆ ಹೋಗಿ ಅದ್ಧೂರಿಯಾಗಿ 22ನೇ ವರ್ಷದ ವಿವಾಹ ವಾರ್ಷಿಕೋತ್ಸವ ಮಾಡಿಕೊಂಡು ಬಂದಿದ್ದನು. ಇದರಿಂದ ಕೋಪಗೊಂಡಿದ್ದ ಪವಿತ್ರಾಗೌಡ ದರ್ಶನ್ ಜೊತೆಗೆ ಮಾತು ಬಿಟ್ಟಿದ್ದಳು. ಇಬ್ಬರೊಂದಿಗೆ ಸಣ್ಣ ಜಗಳವೂ ಆಗಿತ್ತು ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios