ಮೂರು ತಿಂಗಳು ಜೈಲಿನಲ್ಲಿ ಕಳೆದರೂ ನಟ ದರ್ಶನ್ ಅಹಂಕಾರ ಕಡಿಮೆಯಾಗಿಲ್ಲ. ವಕೀಲರನ್ನು ಭೇಟಿ ಮಾಡಲು ಬರುವಾಗ ನಟ ದರ್ಶನ್ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿ ಮಧ್ಯದ ಬೆರಳು ತೋರಿಸಿ ಹುಸಿ ನಗೆ ಬೀರಿದ್ದಾರೆ.

ಬಳ್ಳಾರಿ (ಸೆ.12): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬರೋಬ್ಬರಿ ಮೂರು ತಿಂಗಳು ಜೈಲಿನಲ್ಲಿ ಕಳೆದಿದ್ದರೂ ನಟ ದರ್ಶನ್ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ದರ್ಶನ್‌ನನ್ನು ಭೇಟಿ ಮಾಡಲು ಬಂದ ವಕೀಲರನ್ನು ಭೇಟಿಯಾಗಲು ಹೈಸೆಕ್ಯೂರಿಟಿ ಜೈಲಿನಿಂದ ಹೊರಗೆ ಬರುವಾಗ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿ ಕೈಗಳ ಮಧ್ಯದ ಬೆರಳನ್ನು ತೋರಿಸಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದಿದೆ.

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಏನೆಲ್ಲಾ ವರದಿಗಳು ಪ್ರಸಾರ ಆಗುತ್ತಿವೆ ಎಂಬುದನ್ನು ನೋಡಲು ಟಿವಿಯನ್ನು ತರಿಸಿಕೊಂಡಿದ್ದಾರೆ. ಆದರೆ, ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡುತ್ತಿರುವುದನ್ನು ಕಂಡು ಪುನಃ ಕೆರಳಿದಂತಾಗಿದ್ದಾರೆ. ಇನ್ನು ಗುರುವಾರ ಬೆಳಗ್ಗೆ ಆತನ ಪತ್ನಿ ವಿಜಯಲಕ್ಷ್ಮಿ ಬಂದಾಗ ಫುಲ್ ಸಾಫ್ಟ್ ಆಗಿ ನಡೆದುಕೊಂಡಿದ್ದರು. ಆದರೆ, ಮಧ್ಯಾಹ್ನದ ವೇಲೆ ವಕೀಲರು ಭೇಟಿ ಮಾಡಲು ಬಂದಾಗ, ಹೈ ಸೆಕ್ಯೂರಿಟಿ ಜೈಲಿನಿಂದ ಸಂದರ್ಶಕರ ಕೊಠಡಿಗೆ ಬರುವಾಗ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿ, ಮಿಡಲ್ ಫಿಂಗರ್ ತೋರಿಸಿ ಅಸಭ್ಯ ವರ್ತನೆ ತೋರಿದ್ದಾರೆ ಎಂದು ತಿಳಿದುಬಂದಿದೆ.

ನಟ ದರ್ಶನ್ ಜಾಮೀನು ಅರ್ಜಿ ಹಾಕಿಲ್ಲ, ಪೆರೋಲ್ ಪಡೆದು ಶೂಟಿಂಗ್ ಮುಗಿಸಲು ಪ್ಲಾನ್ ಮಾಡಿದಾರಾ ಹೇಗೆ?

ಇನ್ನು ಮಾಧ್ಯಮಗಳ ಕ್ಯಾಮರಗಳು ವಿಡಿಯೋ ಶೂಟಿಂಗ್ ಮಾಡುವುದನ್ನು ನೋಡಿ ಟೀಜ್ ಮಾಡಿದ್ದಾರೆ. ಜೊತೆಗೆ, ತನ್ನ ಎರಡೂ ಕೈಗಳ ಮಧ್ಯದ ಬೆರಳನ್ನು ತೋರಿಸುತ್ತಾ ಪೊಲೀಸರ ಜೊತೆಗೆ ನಡೆದುಕೊಂಡು ಬರುವಾಗ ತನ್ನ ಎರಡೂ ಕೈಗಳ ಮಧ್ಯದ ಬೆರಳನ್ನು ತೋರಿಸಿದ್ದೂ ಅಲ್ಲದೇ, ಆತನ ಮೇಲೆ ಕ್ಯಾಮೆರಾಗಳ ಕಣ್ಣು ಫೋಕಸ್ ಆಗುತ್ತಿದ್ದಂತೆ ಹುಸಿ ನಗೆಯನ್ನೂ ಬೀರಿದ್ದಾನೆ. ಈ ಅಸಭ್ಯ ವರ್ತನೆಯಿಂದ ಆತನಿಗೆ ಜೈಲಿನಲ್ಲಿದ್ದರೂ ಕೊಬ್ಬು ಕರಗಿಲ್ಲವೇ ಎಂಬ ಅರ್ಥಗಳು ಬರುತ್ತಿವೆ.

View post on Instagram