‘ಅಮ್ಮನ ಕಂಗಳ ಶಾಶ್ವತ ಬೆಳಕು ನೀನು’... ಮಗನ ಹುಟ್ಟುಹಬ್ಬಕ್ಕೆ ಶುಭಕೋರಿದ ವಿಜಯ ರಾಘವೇಂದ್ರ
ಪುತ್ರ ಶೌರ್ಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟ ವಿಜಯ್ ರಾಘವೇಂದ್ರ ಪುಟ್ಟ ಕಂದ ಶೌರ್ಯ ಹಾಗೂ ಪತ್ನಿಯ ಫೋಟೊ ಶೇರ್ ಮಾಡಿ ಮಗನಿಗೆ ಮುದ್ದಾಗಿ ವಿಶ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಮುದ್ದಿನ ಮಗ ಶೌರ್ಯ ಇಂದು ಅಂದರೆ ಡಿಸೆಂಬರ್ 31 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ಹಾಗೂ ತಂದೆ ವಿಜಯ್ ರಾಘವೇಂದ್ರ ಮಗನ ಮುದ್ದಾದ ಫೋಟೊ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಮಗನಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳನ್ನು ಕೋರಿದ್ದಾರೆ ಚಿನ್ನಾರಿಮುತ್ತ.
ವಿಜಯ ರಾಘವೇಂದ್ರಗೆ ಜೋಡಿಯಾದ ಡಾಕ್ಟರ್ ಅಶ್ವಿನಿ; ಚಿನ್ನಾರಿ ಮುತ್ತನಿಗೆ ಹೊಸ ಗೃಹಮಂತ್ರಿ!
ವಿಜಯ್ ರಾಘವೇಂದ್ರ ತಮ್ಮ ಪತ್ನಿ ಸ್ಪಂದನಾ ಪುಟ್ಟ ಶೌರ್ಯನನ್ನು ಕೈಯಲ್ಲಿ ಹಿಡಿದು, ಮಗುವಿನ ಕಣ್ಣುಗಳನ್ನ ದಿಟ್ಟಿಸಿ ನೋಡುತ್ತಿರುವ, ತಾಯ್ತನದ ಸುಂದರವಾದ ಫೋಟೊ ಒಂದನ್ನು ಶೇರ್ ಮಾಡಿದ್ದು, ಅದರ ಜೊತೆಗೆ ಅಮ್ಮನ ಕಂಗಳ ಶಾಶ್ವತ ಬೆಳಕು ನೀನು ಕಂದ, ಜನುಮ ದಿನದ ಪ್ರೀತಿಯ ಶುಭಾಷಯಗಳು ಮಗನೆ ಎಂದು ಶುಭ ಕೋರಿದ್ದಾರೆ. ಶೌರ್ಯ ಈ ವರ್ಷ 16ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಸದ್ಯ ನ್ಯೂ ಇಯರ್ ಸೆಲೆಬ್ರೇಶನ್ ಹಾಗೂ ಬರ್ತ್ ಡೇ ಸೆಲೆಬ್ರೇಶನ್ ಗಾಗಿ ದುಬೈಗೆ ತೆರಳಿದ್ದಾರೆ.
ನಾಲ್ಕು ದಿನದ ಹಿಂದೆಯೇ ವಿಜಯ್ ರಾಘವೇಂದ್ರ ಮಗ ಶೌರ್ಯ, ತಮ್ಮ ಸಹೋದರಿಯ ಮಗಳು ಹಾಗೂ ಇತರರೊಂದಿಗೆ ದುಬೈಗೆ ತೆರಳಿದ್ದಾರೆ. ಅಲ್ಲಿ ಡೆಸರ್ಟ್ ಸಫಾರಿ, ಮರುಭೂಮಿಯಲ್ಲಿ ಜೀಪ್ ರೈಡ್ ಮಾಡಿದ್ದಾರೆ. ಜೊತೆಗೆ ಹೊಸ ವರ್ಷದವರೆಗೂ ಇದೇ ನಮ್ಮ ಮನೆ ಎಂದು ಬರೆದುಕೊಂಡಿದ್ದರು. ಹಾಗಾಗಿ ಮಗನ ಹುಟ್ಟು ಹಬ್ಬವನ್ನು ಸಹ ಈ ವರ್ಷ ವಿಜಯ್ ದುಬೈನಲ್ಲಿಯೇ ಅದ್ಧೂರಿಯಾಗಿ ಆಚರಿಸಲಿದ್ದಾರೆ.
ಶೌರ್ಯ ಹುಟ್ಟು ಹಬ್ಬದ ದಿನ ಅಮ್ಮನನ್ನು ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದು, ಈಗಾಗಲೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಮ್ಮನ ಫೋಟೊಗಳನ್ನು ಶೇರ್ ಮಾಡಿ, ಐ ಮಿಸ್ ಯೂ ಅಮ್ಮ, ಅಮ್ಮ ನೀನು ಇವತ್ತು ನನ್ನ ಜೊತೆ ಇಲ್ಲಿ ಇರಬೇಕಿತ್ತು ಅಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಶೌರ್ಯನಿಗೆ ವಿಶ್ ಮಾಡುತ್ತಾ, ಅಳಬೇಡ, ಅಮ್ಮ ಯಾವಾಗ್ಲೂ ನಿನ್ನ ಜೊತೆ ಇರುತ್ತಾರೆ ಎಂದ್ ಹಾರೈಸಿದ್ದಾರೆ. ಜೊತೆಗೆ ಪ್ರೀತಿಯ ಚಿಕ್ಕಪ್ಪ ಶ್ರೀಮುರಳಿ, ಚಿಕ್ಕಮ್ಮ, ಸಹೋದರ ಅಗಸ್ತ್ಯ, ಮಾವ ಎಲ್ಲರೂ ಕೂಡ ಶೌರ್ಯನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.