Asianet Suvarna News Asianet Suvarna News

ಪವಿತ್ರ ಗೌಡ ಹಾಕಿದ್ದ ಕರ್ಮ ರಿಟರ್ನ್ಸ್ ವಿಡಿಯೋಗೆ ವಿಜಯಲಕ್ಷ್ಮಿ ಅಭಿಮಾನಿಗಳಿಂದ ತಿರುಗೇಟು

ನಟ ದರ್ಶನ್ ಬಂಧನ ಬಳಿಕ ಅಭಿಮಾನಿಗಳ ಪರ ವಿರೋಧ ತಾರಕಕ್ಕೇರಿದೆ. ದರ್ಶನ್‌ನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇತ್ತ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ಅಭಿಮಾನಿಗಳು ದರ್ಶನ್ 2ನೇ ಪತ್ನಿ ಎಂದೇ ಗುರುತಿಸಿಕೊಂಡಿರುವ ಪವಿತ್ರಾ ಗೌಡಾಗೆ  ಕರ್ಮ ರಿಟರ್ನ್ಸ್ ವಿಡಿಯೋ ಹಾಕಿ ತಿರುಗೇಟು ನೀಡಿದ್ದಾರೆ.  

Vijaya Lakshmi share Karma Returns Video to hit back Pavithra Gowda After Husband Actor Darshan arrest ckm
Author
First Published Jun 11, 2024, 7:38 PM IST

ಬೆಂಗಳೂರು(ಜೂ.11) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ವಿಚಾರಣೆಗಳು ತೀವ್ರಗೊಂಡಿದೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಭಿಮಾನಿಗಳ ಬಳಗ ಇದೀಗ ದರ್ಶನ್ 2ನೇ ಪತ್ನಿ ಪವಿತ್ರಾ ಗೌಡಗೆ ತಿರುಗೇಟು ನೀಡಿದ್ದಾರೆ.. ಈ ಹಿಂದೆ ವಿಜಯಲಕ್ಷ್ಮಿಗೆ ಟಾಂಗ್ ನೀಡಿದ್ದ ಪವಿತ್ರಾ ಗೌಡ ಸ್ಟೋರಿ ವಿಡಿಯೋವನ್ನು ವಿಜಯಲಕ್ಷ್ಮಿ ಫ್ಯಾನ್ಸ್ ಇನ್‌ಸ್ಟಾಗ್ರಾಂ ಸ್ಟೋರಿಯಾಗಿ ಹಾಕಿಕೊಂಡಿದ್ದಾರೆ. ಈ ಮೂಲಕ ಪವಿತ್ರಾ ಗೌಡಾಗೆ ತಿರುಗೇಟು ನೀಡಿದ್ದಾರೆ.  

ಕರ್ಮಾ ಬ್ಯಾಗೇಜ್ ತರ. ನೀವು ಏನು ಫೀಲ್ ಮಾಡುತ್ತೀರಾ, ಅದೇ ಸಿಗುತ್ತದೆ. ಹಿಂದೆ ಹೇಳ್ತಾ ಇದ್ರು ನೀವು ಏನು ಕರ್ಮಾ ಮಾಡ್ತಾ ಇದ್ದೀರಾ ಮುಂದಿನ ಜನ್ಮಕ್ಕೂ ಅದರ ಪರಿಣಾಣ ಇರಲಿದೆ ಹೇಳುತ್ತಾ ಇದ್ದರು. ಇದೀಗ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂದು ನಟ ದರ್ಶನ್ ಸಂದರ್ಶನದಲ್ಲಿ ಹೇಳಿದ್ದರು. ಈ ವಿಡಿಯೋವನ್ನು ಪವಿತ್ರಾ ಗೌಡ ಮೇ ತಿಂಗಳಲ್ಲಿ ಹಂಚಿಕೊಂಡಿದ್ದರು. ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. 

ಮೇ ತಿಂಗಳಲ್ಲಿ ವಿಜಯಲಕ್ಷ್ಮಿ ಹಾಗೂ ದರ್ಶನ್ ವಿವಾಹ ವಾರ್ಷಿಕೋತ್ಸವಕ್ಕೆ ನಿರ್ಮಾಪಕಿ ಶೈಲಜಾ ನಾಗ್ ಇನ್‌ಸ್ಟಾಗ್ರಾಂ ಮೂಲಕ ಶುಭಕೋರಿದ್ದರು. ವಿಜಯಲಕ್ಷ್ಮಿ ಹಾಗೂ ದರ್ಶನ್ ಫೋಟೋ ಹಾಕಿ ಶುಭಾಶಯ ತಿಳಿಸಿದ್ದರು. ಈ ಫೋಟೋ ಸ್ಕ್ರೀನ್‌ಶಾಟ್‌ನ್ನು ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ವಿಜಯಲಕ್ಷ್ಮಿ ಸ್ಟೋರಿ ಹಂಚಿಕೊಂಡ ಕೆಲವೇ ಹೊತ್ತಲ್ಲಿ, ಪವಿತ್ರಾ ಗೌಡ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ದರ್ಶನ್ ಅವರ ಕರ್ಮ ರಿಟರ್ನ್ಸ್ ಹೇಳಿಕೆಯ ವಿಡಿಯೋ ಸ್ಟೋರಿ ಹಂಚಿಕೊಂಡು ವಿಜಯಲಕ್ಷ್ಮಿಗೆ ಟಾಂಗ್ ನೀಡಿದ್ದರು.

ಪವಿತ್ರಾ ಗೌಡ ವಿಚಾರವಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಅಂದು ಪವಿತ್ರಾ ಗೌಡ ಶೇರ್ ಮಾಡಿದ್ದ ಅದೇ ಕರ್ಮ ರಿಟರ್ನ್ಸ್ ವಿಡಿಯೋವನ್ನು ವಿಜಯಲಕ್ಷ್ಮಿ ಅಭಿಮಾನಿಗಳು ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಪವಿತ್ರಾ ಗೌಡಗೆ ತಿರುಗೇಟು ನೀಡಿದ್ದಾರೆ. 

 

 

ಇತ್ತ ನಟ ದರ್ಶನ್‌ ಬಂಧಿಸಿದ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ದರ್ಶನನ್ನು 6 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2 ಆರೋಪಿಯಾಗಿದ್ದಾರೆ. ಇತ್ತ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾಗಿರುವ ರೇಣುಕಾಸ್ವಾಮಿ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

ದರ್ಶನ್-ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರ್ಲಿ ಬಯಸಿದ ಅಭಿಮಾನಿ ರೇಣುಕಾಸ್ವಾಮಿ ನಟನಿಂದಲೇ ಹತ್ಯೆ?
 

Latest Videos
Follow Us:
Download App:
  • android
  • ios