Asianet Suvarna News Asianet Suvarna News

ದರ್ಶನ್-ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರ್ಲಿ ಬಯಸಿದ ಅಭಿಮಾನಿ ರೇಣುಕಾಸ್ವಾಮಿ ನಟನಿಂದಲೇ ಹತ್ಯೆ?

ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಇದೀಗ ನಟನಿಂದಲೇ ಹತ್ಯೆಯಾಗಿದ್ದಾನೆ. ದರ್ಶನ್-ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಲಿ ಎಂದು ಬಯಸಿದ್ದ ರೇಣುಕಾಸ್ವಾಮಿ ದುರಂತ ಅಂತ್ಯಕಂಡಿದ್ದಾನೆ. 
 

Murder Case Renukaswamy fan of Darshan who wanted Actor and Vijayalakshmi family to be well ckm
Author
First Published Jun 11, 2024, 2:01 PM IST

ಬೆಂಗಳೂರು(ಜೂ.11) ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಬಂಧಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ದರ್ಶನ್ ಅಭಿಮಾನಿಯಾಗಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಟನಿಂದಲೇ ಕೊಲೆಯಾಗಿರುುವುದು ದುರಂತ. ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಲಿ ಎಂದು ಬಯಿಸಿದ್ದೇ ರೇಣುಕಾಸ್ವಾಮಿಗೆ ಮುಳುವಾಗಿದೆ. ತನ್ನ ನೆಚ್ಚಿನ ನಟನ ಬದುಕು ಸುಂದರವಾಗಿರಬೇಕು ಅನ್ನೋ ಕನಸಿನೊಂದಿಗೆ ಸಂದೇಶ ಕಳುಹಿಸಿ ಇದೀಗ ಬೀದಿ ಹೆಣವಾದ ರೇಣುಕಾಸ್ವಾಮಿ ಅತ್ಯಂತ ಸಭ್ಯ ವ್ಯಕ್ತಿ ಎಂದು ಆತನ ಬಲ್ಲವರು ಹೇಳಿದ್ದಾರೆ.

ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಂಸಾರದ ನಡುವೆ ಪವಿತ್ರಾ ಗೌಡ ಆಗಮನ ರೇಣುಕಾಸ್ವಾಮಿಗೆ ಇಷ್ಟವಿರಲಿಲ್ಲ. ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡ ತಕ್ಷಣವೇ ನೋವಿನಿಂದ ರೇಣುಕಾಸ್ವಾಮಿ ಪ್ರತಿಕ್ರಿಯಿಸುತ್ತಿದ್ದ ಅನ್ನೋ ಮಾಹಿತಿಯನ್ನು ಆತನ ಆಪ್ತರು ಹೇಳುತ್ತಿದ್ದಾರೆ. ದರ್ಶನ್ -ವಿಜಯಲಕ್ಷ್ಮಿ ಸಂಸಾರದಲ್ಲಿ ಹುಳಿ ಹಿಂಡಲು ನಡುವೆ ಬರಬೇಡ. ಅವರು ಸಂಸಾರ ಚೆನ್ನಾಗಿರಲಿ. ನೀನು ದೂರವಿರು ಎಂದು ಪವಿತ್ರಾ ಗೌಡಾ ಪೋಸ್ಟ್‌ಗಳಿಗೆ ರೇಣುಕಾಸ್ವಾಮಿ ಕಮೆಂಟ್ ಮಾಡುತ್ತಿದ್ದ.

ದರ್ಶನ್ ಅರೆಸ್ಟ್, ಪ್ರಬಂಧ ಬರೆಸಿ ಬಿಟ್ಟುಬಿಡಿ, ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್!

ದರ್ಶನ್ ಕುರಿತು, ದರ್ಶನ್ ಜೊತೆಗೆ ಪವಿತ್ರಾ ಗೌಡ ಹಾಕಿರುವ ಬಹುತೇಕ ಪೋಸ್ಟ್‌ಗಳಿಗೆ ರೇಣುಕಾಸ್ವಾಮಿ ಕಮೆಂಟ್ ಮಾಡಿದ್ದ. ಬಹುತೇಕ ಎಲ್ಲಾ ಕಮೆಂಟ್‌ಗಳ ಸಾರಾಂಶ ಒಂದೆ. ನಟಿ ಪವಿತ್ರಾ ಗೌಡ ದರ್ಶನ್ ಸಂಸಾದಂದ ದೂರವಿರಲು ಮನವಿ ಮಾಡಿದ್ದ. ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಸಾರದಲ್ಲಿ ಯಾವುದೇ ಅಡೆ ತಡೆ ಇರಬಾರದು ಎಂದು ಬಯಸಿದ್ದ.  ಆದರೆ ರೇಣುಕಾಸ್ವಾಮಿ ಇದೇ ನಡೆ ದರ್ಶನ್ ಹಾಗೂ ಗ್ಯಾಂಗ್‌ಗೆ ಆಕ್ರೋಶ ತರಿಸಿತ್ತು

ದರ್ಶನ್ ಎರಡನೇ ಪತ್ನಿ ಎಂದೇ ಪವಿತ್ರಾ ಗೌಡ ಗುರುತಿಸಿಕೊಂಡಿದ್ದಾಳೆ. ದರ್ಶನ್‌ನಿಂದ ದೂರವಿರುವಂತೆ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡಿರುವ ಸಂದೇಶದಿಂದ ದರ್ಶನ್ ಗ್ಯಾಂಗ್ ಉರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಚಿತ್ರದುರ್ಗದ ನಿವಾಸಿಯಾಗಿರುವ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆ ತಂದು ಕಾಮಾಕ್ಷಿಪಾಳ್ಯದ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ. ತೀವ್ರ ಹಲ್ಲೆ ನಡೆಸಿ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಲಾಗಿದೆ. ಬಳಿಕ ಮೋರಿಗೆ ಎಸೆದು ಪರಾರಿಯಾಗಿದ್ದಾರೆ.

ದರ್ಶನ್ ಅರೆಸ್ಟ್ ಕೇಸ್; ಶೆಡ್‌ನಲ್ಲಿ ಕೂಡಿ ಹಾಕಿ ರೇಣುಕಾಸ್ವಾಮಿ ಹತ್ಯೆ, ಮೃತದೇಹ ಮೋರಿಗೆ ಎಸೆದು ಪರಾರಿ!
 

Latest Videos
Follow Us:
Download App:
  • android
  • ios