'ಮಾಲ್ಗುಡಿ  ಡೇಸ್' ಎಂದಾಕ್ಷಣ ನೆನಪಾಗುವುದು ಆರ್ ಕೆ ನಾರಾಯಣ್ ಹಾಗೂ ಶಂಕರ್ ನಾಗ್.  ಮತ್ತೆ 'ಮಾಲ್ಗುಡಿ ಡೇಸ್' ತೆರೆ ಮೇಲೆ ಬರಲಿದೆ. ನಾಯಕನಾಗಿ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ನಟಿಸಲಿದ್ದಾರೆ.  'ಅಪ್ಪೆ ಟೀಚರ್' ತುಳು ಚಿತ್ರ ನಿರ್ದೇಶಕ ಕಿಶೋರ್ ಮೂಡುಬಿದ್ರೆ ನಿರ್ದೇಶನ ಮಾಡುತ್ತಿದ್ದಾರೆ. 

ಮಾಲ್ಗುಡಿ ಎಂಬ ಊರಿನಲ್ಲಿ ವರ್ತಮಾನದಲ್ಲಿ ನಡೆಯುವ ಕತೆಯೇ ಈ ಸಿನಿಮಾ. ವಿಜಯ್ ರಾಘವೇಂದ್ರ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಮಾಲ್ಗುಡಿ ಡೇಸ್' ಚಿತ್ರದ ಪೋಸ್ಟರ್ ಲಾಂಚ್ ಆಗಿದೆ. ಪುನೀತ್ ರಾಜ್‌ಕುಮಾರ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

ಒಳುಡುಪಿಂದಲೇ ಸದ್ದು ಮಾಡಿದ್ದ ದಿಶಾ ಹೊಸ ಅವತಾರ ಕಂಡವರು ದಂಗು!

 

'ಮಾಲ್ಗುಡಿ ಡೇಸ್' ಚಿತ್ರದಲ್ಲಿ ನಟಿಸಲು ಆಸಕ್ತಿ ಇದೆಯಾ? ಹಾಗಾದ್ರೆ ಚಿತ್ರತಂಡ ಅವಕಾಶ ಕಲ್ಪಿಸುತ್ತಿದೆ. ಕಥಾ ನಾಯಕಿ ಹಾಗೂ ಇತರ ಪಾತ್ರಗಳಿಗೆ ಆಡಿಶನ್ ಕರೆಯಲಾಗಿದೆ.  ಸ್ಪಷ್ಟವಾಗಿ ಕನ್ನಡ ಓದಲು, ಮಾತನಾಡಲು ಬರಬೇಕು. ಎತ್ತರ 5.4 ಅಡಿ ಮೇಲಿರಬೇಕು. ಕನ್ನಡ ಚಿತ್ರಗಳ ಮೇಲೆ ಅಭಿಮಾನ, ಪ್ರೀತಿಯಿರಬೇಕು. ಶಾಸ್ತ್ರೀಯ ನೃತ್ಯ ಪ್ರಕಾರವೊಂದು ಗೊತ್ತಿರಬೇಕು. ಈ ಅರ್ಹತೆಗಳಿದ್ದರೆ ಸ್ವವಿವರಗಳೊಂದಿಗೆ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ.  

ಈ ಚಿತ್ರಕ್ಕಾಗಿ ವಿಜಯ್ ರಾಘವೇಂದ್ರ ಇದೇ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಮಾಡಲು ಮುಂದಾಗಿದ್ದಾರೆ. 22 ಕೆಜಿ ತೂಕ ಇಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ನಿತ್ಯವೂ ಜಿಮ್‌ನಲ್ಲಿ ಎರಡು ತಾಸು ವರ್ಕೌಟ್ ಮಾಡುತ್ತಿದ್ದಾರೆ. ಈಗಾಗಲೇ 8 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 

Vijay Raghavendra Malgudi days team invites public to take part in acting