ಬಿಕೆ ಶಿವರಾಂ ಪುತ್ರಿ ಸ್ಪಂದನಾ ಇನ್ನಿಲ್ಲ. ನಿವಾಸಕ್ಕೆ ಭೇಟಿ ನೀಡಿದ ಜಯಮಾಲಾ ಭಾವುಕ. 

ಅಧಿಕಾರಿ ಬಿಕೆ ಶಿವರಾಂ ಮುದ್ದಿನ ಮಗಳು, ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪ್ರೀತಿಯ ಪತ್ನಿ ಸ್ಪಂದನಾ ಹೃದಯಾಘಾತದಿಂದ ಅಗಲಿದ್ದಾರೆ. ಬಾಂಕಾಕ್‌ನಲ್ಲಿ ಸಹೋದರಿಯರ ಜೊತೆ ಸಮಯ ಕಳೆಯುತ್ತಿದ್ದ ಸ್ಪಂದನಾ ಶಾಪಿಂಗ್ ಮುಗಿಸಿಕೊಂಡು ಮನೆಗೆ ಬಂದವರೇ ರಾತ್ರಿ ಮಲಗಿದವರು ರಾತ್ರಿ ಎದ್ದಿಲ್ಲ. ಬೆಳಗ್ಗೆ 6 ಗಂಟೆವರೆಗೂ ಸ್ಪಂದನಾ ಮಲಗುವುದಕ್ಕೆ ಕಷ್ಟ ಪಡುತ್ತಿದ್ದರಂತೆ 6 ನಂತರ ರಾಘು ಸ್ವಲ್ಪ ಆರೋಗ್ಯ ವಿಚಾರಿಸಿ ಮಲಗಿಸಿದ್ದಾರಂತೆ. ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರುವವರೆಗೂ ನಿಜಕ್ಕೂ ಏನಾಗಿತ್ತು ಅನ್ನೋ ಮಾಹಿತಿ ತಿಳಿಯಬೇಕಿದೆ. 

ಸಿನಿಮಾ ಸ್ನೇಹಿತರು, ರಾಜಕೀಯ ಗಣ್ಯರು ಮತ್ತು ಕುಟುಂಬಸ್ಥರು ಬಿಕೆ ಶಿವರಂ ನಿವಾಸಕ್ಕೆ ಭೇಟಿ ನೀಡಿ ವಿಚಾರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಆಗಮಿಸಿದ ಹಿರಿಯ ನಟಿ ಜಯಮಾಲಾ 'ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಎರಡೂ ಕುಟುಂಬದವರು ನಮಗೆ ಬೇಕಾದವರು. ಇವರಿಬ್ಬರನ್ನು ನೋಡಿದಾಗ ಆದರ್ಶ ದಂಪತಿಗಳು ಅಂತ ಎಲ್ಲರೂ ಹೇಳುತ್ತಿದ್ದರು. ನಿಜಕ್ಕೂ ಆದರ್ಶನ ದಂಪತಿಗಳ ರೀತಿನೇ ಬದುಕಬೇಕು ಎಂದು ಹಲವು ಜನರು ಮಾತನಾಡಿಕೊಂಡಿದ್ದಾರೆ. ಅವರಿಬ್ಬರ ನಡುವೆ ಅದೆಷ್ಟು ಅನ್ಯೋನ್ಯತೆ ಅದೆಷ್ಟು ಪ್ರೀತಿ. ಈಗ ನಾನು ಅವರ ಮನೆಗೆ ಹೋದಾಗ ಸ್ಪಂದನಾ ಅವರ ತಾಯಿ ಹೇಳಿದ್ದು ತನ್ನ ಮಗಳು ಹೋಗಿದಲ್ಲ ರಾಘು ಹೇಗೆ ಬದಕುತ್ತಾನೆ? ವಿಜಯ್ ರಾಘವೇಂದ್ರ ಹೇಗೆ ಬದಕುತ್ತಾನೆ ಅವಳಿಲ್ಲದೆ ಅವನು ಬದುಕುವುದಿಲ್ಲ ಹೇಗಿರುತ್ತಾನೆ ಅಂತ ಆ ತಾಯಿ ತೋರಿಸಿದ ಕಾಳಜಿ ಕರಳು ಕತ್ತರಿಸಿದಂತೆ ಆಗುತ್ತೆ' ಎಂದು ಮಾತನಾಡಿದ್ದಾರೆ.

ಅಪ್ಪು ಅಗಲಿದಾಗ Life is unpredictable ಯಾರಿಗೆ ಏನಾಗುತ್ತೆ ಗೊತ್ತಿಲ್ಲ ಎಂದಿದ್ದರು ಸ್ಪಂದನಾ: ಸ್ನೇಹಿತೆ

'ದೇವರಿಗೆ ತುಂಬಾ ಒಳ್ಳೆಯವರೇ ಇಷ್ಟವಾಗುತ್ತಾರೆ ಅಂತ ಭಯ ಆಗುತ್ತೆ. ಯಾವತ್ತೂ ಯಾರಿಗೂ ಗೊತ್ತಂದರೆ ಕೊಡದ ಮಗು ಅದು. ಒಳ್ಳೆ ಹೆಣ್ಣು ಮಗು ಒಳ್ಳೆ ಕುಟುಂಬ ಒಳ್ಳೆ ದಾಂಪತ್ಯ ....ದೇವರು ಇಷ್ಟು ಬೇಗ ಕರೆದುಕೊಂಡ. ಎಷ್ಟು ಹಣ ಇದ್ದರೇನು ಯಾರನ್ನು ಉಳಿಸಿಕೊಳ್ಳಲು ಆಗಲಿಲ್ಲ ಅದು ನಮಗೆ ನೋವಾಗುತ್ತದೆ. ಆ ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಈ ಎರಡು ಕುಟುಂಬದವರಿಗೆ ಈ ನೋವು ಬರಿಸುವ ಶಕ್ತಿ ದೇವರು ಕೊಡಲಿ ಎಂದು ಪಾರ್ಥನೆ ಮಾಡುವೆ' ಎಂದು ಜಯಮಾಲಾ ಹೇಳಿದ್ದಾರೆ. 

'ಅಣ್ಣ ಫೋನ್ ಮಾಡಿ ನನಗೆ ಹೇಳಿರುವುದು ಇಷ್ಟೆ. ಅತ್ತೆಗೆ ಕಸಿನ್‌ಗಳ ಜೊತೆ ಟ್ರಿಪ್ ಹೋಗಿದ್ದರು ಅಣ್ಣ ಶೂಟಿಂಗ್ ಮುಗಿಸಿಕೊಂಡು ಅವರನ್ನು ಜಾಯಿನ್ ಆಗಿದ್ದಾರೆ. ಹೀಗೆ ಎಲ್ಲರು ಒಟ್ಟಿಗೆ ಸಮಯ ಕಳೆದಿದ್ದಾರೆ ಮಲಗಿಕೊಂಡವರು ಮತ್ತೆ ಎದ್ದಿಲ್ಲ. ಇದಕ್ಕೆ ಕಾರಣ ಲೋ ಬಿಪಿ ಎಂದುಕೊಂಡಿದ್ದೀವಿ. ಅವರು ಇಲ್ಲಿಗೆ ಬಂದ್ಮೇಲೆ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ. ಇದಾಗಿರುವುದು ನಿಜ' ಎಂದು ಶ್ರೀಮುರಳಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಲಾಕ್‌ಡೌನಲ್ಲಿ ಸ್ಪಂದನಾ ವಿಜಯ್‌ ದಪ್ಪಗಾಗಿದ್ದರು ಈಗ ಸಣ್ಣ ಆಗಿದ್ದಾರೆ: ಮನೆ ಕೆಲಸದವರ ಮಾತು

'ಸ್ಪಂದನಾ ಮೇಡಂ 8 ದಿನ ಆಯ್ತು ಬಾಂಕಾಕ್‌ಗೆ ಹೋಗಿ ಆದರೆ ವಿಜಯ್ ರಾಘವೇಂದ್ರ ಅಣ್ಣ ಇಲ್ಲೇ ಇದ್ದರು ನಿನ್ನೆ ಹೀಗಿರಬಹುದು ನನಗೆ ಗೊತ್ತಿಲ್ಲ. ಮಗ ಶೌರ್ಯ ಇಲ್ಲೇ ಇದ್ದರು. ಏನೇ ವಿಚಾರ ಇದ್ದರೂ ನನಗೆ ಕರೆ ಮಾಡು ಎನ್ನುತ್ತಿದ್ದರು. ಮನೆಯಲ್ಲಿ ದಿನ ಕೆಲಸ ಮಾಡುತ್ತಿದ್ದೆ...ಮನೆಯಲ್ಲಿ ಅಣ್ಣ ಮತ್ತು ಶೌರ್ಯ ಇರುತ್ತಾರೆ ಕೆಲಸ ಮಾಡಿಕೊಂಡು ಬಾ ಸಹಾಯ ಮಾಡು ಎನ್ನುತ್ತಿದ್ದರು. ಸುಮಾರು 3 ವರ್ಷಗಳಿಂದ ಕೆಲಸ ಮಾಡುತ್ತಿರುವೆ. ಸ್ಪಂದನಾ ಅಕ್ಕ ಮನೆಯಲ್ಲಿ ಊಟ ಮಾಡುತ್ತಿದ್ದರು ಯಾವ ರೀತಿ ಡಯಟ್ ಮಾಡುತ್ತಿರಲಿಲ್ಲ ಸಣ್ಣಗಾಗಿದ್ದರು. ಸಂಪೂರ್ಣ ಅಡುಗೆ ಮನೆ ಜವಾಬ್ದಾರಿ ನಾನು ನೋಡಿಕೊಳ್ಳುತ್ತಿದ್ದೆ ತರಕಾರಿ ಮತ್ತು ಸೊಪ್ಪ ಚೆನ್ನಾಗಿ ತಿನ್ನುತ್ತಿದ್ದೆ. ಲಾಕ್‌ಡೌನ್‌ ಸಮಯದಲ್ಲಿ ದಪ್ಪ ಆಗಿದ್ದರು ಆದಿಕ್ಕೆ ಸಣ್ಣಗಾಗಿದ್ದಾರೆ. ವರ್ಕೌಟ್ ಮಾಡುತ್ತಾರೆ ಅನ್ನೋದು ನನಗೆ ಗೊತ್ತಿಲ್ಲ' ಎಂದು ಸುಮಾ, ಮನೆ ಕೆಲಸದವರು ಹೇಳಿದ್ದಾರೆ.