ಲಾಕ್‌ಡೌನಲ್ಲಿ ಸ್ಪಂದನಾ ವಿಜಯ್ ದಪ್ಪಗಾಗಿದ್ದರು ಈಗ ಸಣ್ಣ ಆಗಿದ್ದಾರೆ: ಮನೆ ಕೆಲಸದವರ ಮಾತು
ಸ್ಪಂದನಾ ವಿಜಯ್ ರಾಘವೇಂದ್ರ ಇನ್ನಿಲ್ಲ ಅನ್ನೋ ನೋವಿನಲ್ಲಿ ಕುಟುಂಬಸ್ಥರು. ಶ್ರೀ ಮುರಳಿ, ಡ್ರೈವರ್ ಮತ್ತು ಮನೆ ಕೆಲಸದವರ ಮಾತು....
ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ಸಹೋದರಿಯರ ಜೊತೆ ಬಾಂಕಾಕ್ ಟ್ರಿಪ್ ಎಂಜಾಯ್ ಮಾಡುತ್ತಿದ್ದರು. ಶಾಪಿಂಗ್ ಮುಗಿಸಿಕೊಂಡು ಬಂದು ಮಲಗಿಕೊಂಡವರು ಲೋ ಬಿಪಿ ಯಿಂದ ಮತ್ತೆ ಎದ್ದಿಲ್ಲ. ಹೃದಯಾಘಾತವಾಗಿ ಎಂದು ಸುದ್ದಿಯಾಗುತ್ತಿದೆ. ಈ ಘಟನೆ ಬಗ್ಗೆ ಕುಟುಂಬಸ್ಥರು ಸ್ಪಷ್ಟನೆ ನೀಡುತ್ತಿದ್ದಾರೆ.
'ಅಣ್ಣ ಫೋನ್ ಮಾಡಿ ನನಗೆ ಹೇಳಿರುವುದು ಇಷ್ಟೆ. ಅತ್ತೆಗೆ ಕಸಿನ್‌ಗಳ ಜೊತೆ ಟ್ರಿಪ್ ಹೋಗಿದ್ದರು ಅಣ್ಣ ಶೂಟಿಂಗ್ ಮುಗಿಸಿಕೊಂಡು ಅವರನ್ನು ಜಾಯಿನ್ ಆಗಿದ್ದಾರೆ. ಹೀಗೆ ಎಲ್ಲರು ಒಟ್ಟಿಗೆ ಸಮಯ ಕಳೆದಿದ್ದಾರೆ ಮಲಗಿಕೊಂಡವರು ಮತ್ತೆ ಎದ್ದಿಲ್ಲ. ಇದಕ್ಕೆ ಕಾರಣ ಲೋ ಬಿಪಿ ಎಂದುಕೊಂಡಿದ್ದೀವಿ. ಅವರು ಇಲ್ಲಿಗೆ ಬಂದ್ಮೇಲೆ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ. ಇದಾಗಿರುವುದು ನಿಜ' ಎಂದು ಶ್ರೀಮುರಳಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
KETO Diet ಅಪಾಯಕಾರಿ; ಇದ್ದಕ್ಕಿದ್ದಂತೆ 16 ಕೆಜಿ ತೂಕ ಇಳಿಸಿಕೊಂಡ ಸ್ಪಂದನಾ!
'ನಾನು ಸ್ಪಂದನಾ ಮೇಡಂ ಅವರನ್ನು ಮೂರ್ನಾಲ್ಕು ಸಲ ಟ್ರಿಪ್ ಕರೆದುಕೊಂಡು ಹೋಗಿರುವೆ. ಅವರನ್ನು ಕಳೆದುಕೊಂಡು ಬೇಸರವಾಗುತ್ತಿದೆ. ತುಂಬಾ ಒಳ್ಳೆಯವರು ಮನೆ ಕೆಲಸದವರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರ ಮಗನ ಹುಟ್ಟುಹಬ್ಬಕ್ಕೆ ನಮ್ಮ ಮನೆಗೆ ಕಾರು ಕಳುಹಿಸಿ ಕರೆಸಿಕೊಳ್ಳುತ್ತಿದ್ದರು. ಈ ಘಟನೆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಮೂರು ದಿನದಿಂದ ರಜೆ ಇದೆ. ಪುತ್ರ ಸೌರ್ಯ ಸ್ಕೂಲ್ ರಜೆ ಇದ್ದಾಗ ನನಗೂ ರಜೆ ಕೊಡುತ್ತಾರೆ. ನಾನು ಆಟೋ ಓಡಿಸುವುದು ಆಟೋದಲ್ಲಿ ಕರೆದುಕೊಂಡು ಮಗನನ್ನು ಸ್ಕೂಲ್‌ಗೆ ಬರೆದುಕೊಂಡು ಹೋಗುತ್ತಿದ್ದೆ ಸುಮಾರು 5 ವರ್ಷದಿಂದ ಇವರ ಮನೆಯಲ್ಲಿ ಕೆಲಸ ಮಾಡುತ್ತಿರುವೆ. ಮೇಡಂ ಪರ್ಸನಲ್ ವಿಚಾರಗಳ ಬಗ್ಗೆ ಏನೂ ಗೊತ್ತಿಲ್ಲ ಮೊದಲು ದಪ್ಪ ಇದ್ರು ಈಗ ಸಣ್ಣಗಾಗಿದ್ದಾರೆ' ಎಂದು ಡ್ರೈವರ್ ಮಾತನಾಡಿದ್ದಾರೆ.
ನಮ್ದು ಲವ್ ಮ್ಯಾರೇಜ್ ಅಲ್ಲ ಪಕ್ಕಾ ಅರೇಂಜ್ಡ್ ಮ್ಯಾರೇಜ್; ವಿಜಯ್ ರಾಘವೇಂದ್ರ-ಸ್ಪಂದನಾ ಮ್ಯಾರೇಜ್ ಸ್ಟೋರಿ!
'ಸ್ಪಂದನಾ ಮೇಡಂ 8 ದಿನ ಆಯ್ತು ಬಾಂಕಾಕ್‌ಗೆ ಹೋಗಿ ಆದರೆ ವಿಜಯ್ ರಾಘವೇಂದ್ರ ಅಣ್ಣ ಇಲ್ಲೇ ಇದ್ದರು ನಿನ್ನೆ ಹೀಗಿರಬಹುದು ನನಗೆ ಗೊತ್ತಿಲ್ಲ. ಮಗ ಶೌರ್ಯ ಇಲ್ಲೇ ಇದ್ದರು. ಏನೇ ವಿಚಾರ ಇದ್ದರೂ ನನಗೆ ಕರೆ ಮಾಡು ಎನ್ನುತ್ತಿದ್ದರು. ಮನೆಯಲ್ಲಿ ದಿನ ಕೆಲಸ ಮಾಡುತ್ತಿದ್ದೆ...ಮನೆಯಲ್ಲಿ ಅಣ್ಣ ಮತ್ತು ಶೌರ್ಯ ಇರುತ್ತಾರೆ ಕೆಲಸ ಮಾಡಿಕೊಂಡು ಬಾ ಸಹಾಯ ಮಾಡು ಎನ್ನುತ್ತಿದ್ದರು. ಸುಮಾರು 3 ವರ್ಷಗಳಿಂದ ಕೆಲಸ ಮಾಡುತ್ತಿರುವೆ. ಸ್ಪಂದನಾ ಅಕ್ಕ ಮನೆಯಲ್ಲಿ ಊಟ ಮಾಡುತ್ತಿದ್ದರು ಯಾವ ರೀತಿ ಡಯಟ್ ಮಾಡುತ್ತಿರಲಿಲ್ಲ ಸಣ್ಣಗಾಗಿದ್ದರು. ಸಂಪೂರ್ಣ ಅಡುಗೆ ಮನೆ ಜವಾಬ್ದಾರಿ ನಾನು ನೋಡಿಕೊಳ್ಳುತ್ತಿದ್ದೆ ತರಕಾರಿ ಮತ್ತು ಸೊಪ್ಪ ಚೆನ್ನಾಗಿ ತಿನ್ನುತ್ತಿದ್ದೆ. ಲಾಕ್‌ಡೌನ್ ಸಮಯದಲ್ಲಿ ದಪ್ಪ ಆಗಿದ್ದರು ಆದಿಕ್ಕೆ ಸಣ್ಣಗಾಗಿದ್ದಾರೆ. ವರ್ಕೌಟ್ ಮಾಡುತ್ತಾರೆ ಅನ್ನೋದು ನನಗೆ ಗೊತ್ತಿಲ್ಲ' ಎಂದು ಸುಮಾ, ಮನೆ ಕೆಲಸದವರು ಮಾತನಾಡಿದ್ದಾರೆ.