ಸ್ನೇಹಿತೆ ಸ್ಪಂದನಾ ವಿಜಯ್ ರಾಘವೇಂದ್ರ ಇನ್ನಿಲ್ಲ ಎಂದು ಕಣ್ಣೀರಿಟ್ಟ ಮಾಜಿ ಕಾರ್ಪೊರೇಟರ್‌ ನೇತ್ರಾ ಪಲ್ಲವಿ. ಅಪ್ಪು ಅಗಲಿದೆ ಕ್ಷಣ ತುಂಬಾ ಬೇಸರದಲ್ಲಿದ್ದರು....  

ಚಿನ್ನಾರಿ ಮುತ್ತ ರಾಘು ಪತ್ನಿ ಸ್ಪಂದನಾ ಇನ್ನಿಲ್ಲ. ಮುದ್ದಾದ ಸೌಮ್ಯ ಸ್ವಭಾವದ ಹೆಣ್ಣು ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಮತ್ತು ಸ್ನೇಹಿತರು ದುಖಃದಲ್ಲಿದ್ದಾರೆ. ಸ್ಪಂದನಾ ಜೊತೆ ಕಾಲೇಜ್‌ ದಿನಗಳಿಂದ ಒಟ್ಟಿಗೆ ಇರುವ ನೇತ್ರಾ ಪಲ್ಲವಿ ಮಾತನಾಡಿದ್ದಾರೆ.

'ಸ್ಪಂದನಾ ಹೈಪರ್ ಆಕ್ಟಿವ್ ಹುಡುಗಿ. ಆಕೆ ಜೊತೆ ನಾನು ಪಿಯುಸಿ ಮತ್ತು ಡಿಗ್ರಿ ವ್ಯಾಸಂಗ ಮಾಡಿರುವೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಆಕೆ ಭಾಗಿಯಾಗುತ್ತಿದ್ದರು. ಯಾರೇ ಸಮಸ್ಯೆಯಲ್ಲಿದ್ದರೂ ಆಕೆ ಹೋಗಿ ಸ್ಪಂದಿಸುತ್ತಿದ್ದಳು ಆಕೆ ಹೆಸರಿಗೆ ತಕ್ಕಂತೆ ಇದ್ದಳು. ಆಕೆ ಜೊತೆ ನಾವು ಹೆಚ್ಚಿಗೆ ಸಮಯ ಕಳೆದಿರುವೆ ವಿದ್ಯಾಭ್ಯಾಸ ಆದ್ಮೇಲೆ ಆಕೆ ಸೆಲೆಬ್ರಿಟಿಯನ್ನು ಮದುವೆ ಮಾಡಿಕೊಂಡು ಬ್ಯುಸಿಯಾಗಿ ಬಿಟ್ಟಳು ನಮ್ಮನ್ನು ಮರೆತು ಬಿಡುತ್ತಾಳೆ ಅಂದುಕೊಂಡ್ವಿ ಆದರೆ ಆಕೆ ಮಾತ್ರ ಬದಲಾಗಿರಲಿಲ್ಲ. 15 ದಿನಗಳ ಹಿಂದೆ ಆಕೆ ನನಗೆ ಕರೆ ಮಾಡಿ ಯಾರಿಗೋ ಸಮಸ್ಯೆ ಆಗಿದೆ ನಿನ್ನ ಕ್ಷೇತ್ರದಲ್ಲಿ ಸಹಾಯ ಮಾಡಲು ಆಗುತ್ತಾ ನೋಡಿ ಎಂದು ಮನವಿ ಮಾಡಿದ್ದಳು. ಆ ಹುಡುಗನಿಗೆ ಸಣ್ಣ ಗಾಯ ಆಗಿತ್ತು ಅಷ್ಟು ಕೇರ್ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಕಪಲ್ ಸ್ಪೂರ್ತಿಯಾಗುತ್ತಾರೆ ಅಷ್ಟು ಚೆನ್ನಾಗಿದ್ದರು ಯಾರ ಕಣ್ಣು ಇವರ ಮೇಲೆ ಬಿತ್ತು ಗೊತ್ತಿಲ್ಲ. 20 ವರ್ಷಗಳಿಂದ ಸಾವು ಸ್ನೇಹಿತರು' ಎಂದು ನೇತ್ರಾ ಪಲ್ಲವಿ ಮಾತನಾಡಿದ್ದಾರೆ.

ಲಾಕ್‌ಡೌನಲ್ಲಿ ಸ್ಪಂದನಾ ವಿಜಯ್‌ ದಪ್ಪಗಾಗಿದ್ದರು ಈಗ ಸಣ್ಣ ಆಗಿದ್ದಾರೆ: ಮನೆ ಕೆಲಸದವರ ಮಾತು

'ಯಾರು ಹೇಗಿರುತ್ತಾರೆ ಹಾಗೇ ಇದ್ದರೆ ಚೆನ್ನ. ಅಕೆ ಮೊದಲಿನಿಂದಲೂ ಮುದ್ದು ಮುದ್ದಾಗಿದ್ದಳು ..ನಾನು ಅವಳು ಮೊದಲಿನಿಂದಲೂ ದಪ್ಪನೇ ಇರುವುದು. ನಮ್ಮ ಗುಂಪಿನಲ್ಲಿ ಬಬ್ಲಿನೆಸ್‌ ಹೆಚ್ಚಿತ್ತು. ಸೆಲೆಬ್ರಿಟಿಗಳ ಜೊತೆಗಿರುವ ತುಂಬಾ conciouss ಭಾವಿಸಬಹುದು ಏನಾದರೂ ಟಿಪ್ಸ್‌ ಕೊಡು ನಾವು ಕೂಡ ಬ್ಯೂಟಿ ಮತ್ತು ಫಿಟ್ನೆಸ್ ನೋಡಿಕೊಳ್ಳುತ್ತೀವಿ ಎಂದು ಹೇಳುತ್ತಿದ್ದೆ ಆಗ ಏನೂ ಬೇಡ ಆರೋಗ್ಯವಾಗಿ ತಿನ್ನಬೇಕು ಜಿಮ್ ಅಥವಾ ವಾಕಿಂಗ್ ಮಾಡಿದರೆ ಸಾಕು ಎನ್ನುತ್ತಿದ್ದಳು. ಸಣ್ಣಗಾಗಲು ಅಡ್ಡ ದಾರಿ ಆಯ್ಕೆ ಮಾಡಿಕೊಂಡಿಲ್ಲ ಆಕೆ ಹೇಗೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಎಲ್ಲರಂತೆ ಜಿಮ್ ಮಾಡಿಕೊಂಡು ಇತ್ತೀಚಿಗೆ ಸಣ್ಣಗಾಗಿ ಸಖತ್ ಅಗಿದ್ದಳು ನೋಡಲು ನಾವೇ ಸ್ನೇಹಿತರು ಮಾತನಾಡುತ್ತಿದ್ವಿ. ಜಿಮ್‌ ಮಾಡುವುದರಿಂದ ಯಾರೂ ಸಾಯುವುದಿಲ್ಲ' ಎಂದು ನೇತ್ರಾ ಪಲ್ಲವಿ ಹೇಳಿದ್ದಾರೆ. 

KETO Diet ಅಪಾಯಕಾರಿ; ಇದ್ದಕ್ಕಿದ್ದಂತೆ 16 ಕೆಜಿ ತೂಕ ಇಳಿಸಿಕೊಂಡ ಸ್ಪಂದನಾ!

'ಪುನೀತ್ ರಾಜ್‌ಕುಮಾರ್ ಅಗಲಿದ ದಿನ ತುಂಬಾ ಬೇಸರ ಮಾಡಿಕೊಂಡಿದ್ದಳು. ಯಾವುದೋ ಒಂದು ವಿಚಾರಕ್ಕೆ ನಾನು ಕರೆ ಮಾಡಿದೆ ಆಗ ಪುನೀತ್ ಅವರ ವಿಚಾರ ತೆಗೆದಾಗ ನನಗ ಅದರ ಬಗ್ಗೆ ಮಾತನಾಡಲು ಶಕ್ತಿನೂ ಇಲ್ಲ Life is unpredictable ಯಾರಿಗೆ ಏನಾಗುತ್ತದೆ ಅನ್ನೋದು ಗೊತ್ತಿಲ್ಲ ಎಂದಳು. ಆಕೆಗೆ 15 ವರ್ಷದ ಮುದ್ದಾಗ ಮಗ ಇದ್ದಾನೆ. ಆತನಿಗೆ ಈ ನೋವು ತಡೆಯಲು ಶಕ್ತಿ ಕೊಡಬೇಕು. ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಜೋಡಿ ನೋಡಿ ಇಡೀ ಕರ್ನಾಟಕವೇ ಖುಷಿ ಪಡುತ್ತಿದ್ದರು ಆದರ್ಶ ಜೋಡಿಯಾಗಿದ್ದರು. ಈ ಕಾಲದ ಹುಡುಗ ಹುಡುಗಿಯರು ಅವರನ್ನು ನೋಡಿ ಕಲಿಯಬೇಕು ಅವರಿಬ್ಬರ ನಡುವೆ ಇರುವ ಬಾಂಡಿಂಗ್‌ ನೋಡಿ ಖುಷಿಯಾಗಿರುತ್ತಿತ್ತು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲಿಲ್ಲ. ನಿನಗೆ ಒಳ್ಳೆ ಸ್ನೇಹಿತೆ ಯಾರಿದ್ದಾರೆ ಎಂದು ಯಾರನೇ ಕೇಳಿ ಅದೆಷ್ಟೋ ಜನ ಸ್ಪಂದನಾ ಹೆಸರು ಹೇಳುತ್ತಾರೆ. ತಾಯಿ ಕರಳು ಹೊಂದಿರುವ ವ್ಯಕ್ತಿ ಸ್ಪಂದನಾ' ಎಂದಿದ್ದಾರೆ ನೇತ್ರಾ.