ಕಲಾವಿದರ ಸಂಂಘದಲ್ಲಿ ಪೂಜೆ ಹೋಮ ಹವನ ನಮ್ಮ ತಾಯಾಣೆಗೂ ದರ್ಶನ್‌ಗಾಗಿ ಅಲ್ಲ: ದೊಡ್ಡಣ್ಣ ಸ್ಪಷ್ಟನೆ

ನಾನು ಗಟ್ಟಿಮುಟ್ಟಾಗಿ ಚೆನ್ನಾಗಿದ್ದಾಗ ಪೂಜೆ ಪುನಸ್ಕಾರದ ಬಗ್ಗೆ ನಿರ್ಲಕ್ಷ್ಯ ಮಾಡ್ತಿದ್ದೆ. ಆದರೀಗ ವಯಸ್ಸು 75 ಆದ್ಮೇಲೆ ಗೊತ್ತಾಗ್ತಿದೆ. ಗಣಪತಿ ಹೋಮ, ಸರ್ಪದೋಷ ಪರಿಹಾರ ಮಾಡ್ತಿದ್ದೇನೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ ತಿಳಿಸಿದರು.

Veteran kannada actor doddanna press conference about pooja homa havana rav

ಬೆಂಗಳೂರು (ಆ.11): ನಾನು ಗಟ್ಟಿಮುಟ್ಟಾಗಿ ಚೆನ್ನಾಗಿದ್ದಾಗ ಪೂಜೆ ಪುನಸ್ಕಾರದ ಬಗ್ಗೆ ನಿರ್ಲಕ್ಷ್ಯ ಮಾಡ್ತಿದ್ದೆ. ಆದರೀಗ ವಯಸ್ಸು 75 ಆದ್ಮೇಲೆ ಗೊತ್ತಾಗ್ತಿದೆ. ಗಣಪತಿ ಹೋಮ, ಸರ್ಪದೋಷ ಪರಿಹಾರ ಮಾಡ್ತಿದ್ದೇನೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ ತಿಳಿಸಿದರು.

ಆಗಸ್ಟ್ 13,14ರಂದು ಕನ್ನಡ ಚಿತ್ರರಂಗದ ಕಲಾವಿದರ ಸಂಘದಲ್ಲಿ ಚಿತ್ರರಂಗದ ಏಳಿಗೆಗಾಗಿ ಹೋಮ ಹವನ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಉಳಿವಿಗಾಗಿ, ಎಲ್ಲ ಕಲಾವಿದರ ಒಳಿತಿಗಾಗಿ ಪೂಜೆ ಹೋಮ ಹವನ ಮಾಡಲು ನಿರ್ಧರಿಸಿದ್ದೇವೆ. ಆಗಸ್ಟ್ 13,14 ರಂದು ಮಾಡುತ್ತೇವೆ. ಅಂದಿನ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಮಂತ್ರಿಸಿದ್ದೇವೆ. ಅನ್ನದಾತರು, ನಿರ್ಮಾಪಕ, ನಿರ್ದೇಶಕರು, ಛಾಯಾಗ್ರಾಹಕರು, ಪ್ರೊಡಕ್ಷನ್ ಬಾಯ್ಸ್ ಮೇಕಪ್ ಆರ್ಟಿಸ್ಟ್ ಆರ್ಟ್ ಫಿಲಂ, ಪೋಷಕರ ಕಲಾವಿದರ ಸಂಘ, ಫಿಲ್ಮ್ ಚೇಂಬರ್ಸ್ ಅವರ ಕರೆದಿದ್ದೇವೆ ಎಂದು ತಿಳಿಸಿದರು.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ದಿಢೀರ್ ಸುದ್ದಿಗೋಷ್ಠಿ; ದರ್ಶನ್ ಬಿಡುಗಡೆಗೆ ಕಲಾವಿದರ ಸಂಘದಲ್ಲಿ ಹೋಮ ಹವನ?

ಹಿಂದೆ ಅಣ್ಣಾವ್ರು ಹೇಳ್ತಿದ್ರು. ಇವರೆಲ್ಲ ಕೆಲಸ ಮಾಡಿದ್ರೇನೆ ನಾವು ಚೆನ್ನಾಗಿ ಕಾಣೋದು ಅಂತಿದ್ರು. ನನ್ನ ತಾಯಿ ಮೇಲಾಣೆ ಸ್ವಾರ್ಥಕ್ಕಾಗಿ ಪೂಜೆ ಹೋಮ ಹವನ ಮಾಡ್ತಿಲ್ಲ. ಇದು ಕನ್ನಡ ಚಿತ್ರರಂಗದ ಒಳಿತಿಗಾಗಿ, ಕನ್ನಡ ಚಿತ್ರರಂಗದ ಎಲ್ಲ ಕಲಾವಿದರ ಒಳಿತಿಗಾಗಿ ಮಾಡುತ್ತಿರುವುದಾಗಿ ಸ್ಪಷ್ಟನೆ ನೀಡಿದರು.

ಎಲ್ಲರ ಒಳಿತಿಗಾಗಿ ಪೂಜೆ:
ಸಮಗ್ರ ಚಿತ್ರರಂಗದ ಒಳಿತಿಗಾಗಿ ಎಲ್ಲರಿಗೂ ಒಳ್ಳೆದಾಗಲಿ ಅಂತ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಜ್‌ಕುಮಾರ ಭವನದಲ್ಲಿ ಹೋಮ ಹವನ ಹಮ್ಮಿಕೊಂಡಿದ್ದೇವೆ. ಕೌರವನ ಆಸ್ತಾನದಲ್ಲಿ ದ್ರೌಪದಿ ಮಾನಭಂಗ ಆದಾಗ ಕೊನೆಯದಾಗಿ ಕೃಷ್ಣಾ ಅಂತ ಕೈ ಎತ್ತಿದಳಲ್ವಾ? ಅದೇ ತರಾ ಕೈ ಎತ್ತುತ್ತಾ ಇದ್ದೀವಿ. ದರ್ಶನ್‌ ಗೋಸ್ಕರ್ ಅವರ ಮನೆಯವರು ಮಾಡಿಕೊಳ್ತಾರೆ. ಅದಕ್ಕೆ ನಾವು ಹೊಣೆಗಾರರಲ್ಲ

ನಟ ದರ್ಶನ್ ಬಿಡುಗಡೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ದೈವ! ಇನ್ನೆರಡು ತಿಂಗಳಲ್ಲೇ ಬಿಡುಗಡೆ?

ನಾನು ದರ್ಶನ್ ಅಭಿಮಾನಿ ಆದ್ರೆ ನನ್ನ ಮನೇಲಿ ಅವರಿಗೆ ಒಳ್ಳೆಯದಾಗಲಿ ಅಂತಾ ವೈಯಕ್ತಿಕವಾಗಿ ನನ್ನ ಮನೇಲಿ ಮಾಡಿಸಿಕೊಳ್ತಿನಿ ಅಥವಾ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ಆದರೆ ಇದು ಕಲಾವಿದರ ಸಂಘ ಮಾಡ್ತಿರೋದು ಇಲ್ಲಿ ನಡೆತಿರೋದು ಯಾರೋ ಒಬ್ಬರ ಒಳಿತಿಗಾಗಿ ಅಲ್ಲ, ಇಡೀ ಕನ್ನಡ ಚಿತ್ರರಂಗದ ಒಳಿತಿಗಾಗಿ, ಏಳಿಗಾಗಿ. ಹೀಗಾಗಿ ಆ.13,14 ರಂದು ಗಣಪತಿ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ನಡೆಯಲಿದೆ. ಇದಕ್ಕಾಗಿ ಉಡುಪಿ ಕಾಪುವಿನಿಂದ ಋತ್ವಿಕರು ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios