Asianet Suvarna News Asianet Suvarna News

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ದಿಢೀರ್ ಸುದ್ದಿಗೋಷ್ಠಿ; ದರ್ಶನ್ ಬಿಡುಗಡೆಗೆ ಕಲಾವಿದರ ಸಂಘದಲ್ಲಿ ಹೋಮ ಹವನ?

ಚಿತ್ರರಂಗದ ಉಳಿವಿಗಾಗಿ, ಏಳ್ಗೆಗಾಗಿ ಇದೇ ಆಗಸ್ಟ್ 13,14 ರಂದು ಕಲಾವಿದರ ಸಂಘದಲ್ಲಿ ಪೂಜೆ, ಹೋಮ, ಹವನ ಮಾಡುತ್ತಿದ್ದೇವೆ ಅಂದು ಒಳ್ಳೆಯ ದಿನ ಹಾಗಾಗಿ ಅವತ್ತು ಹೋಮ ಹವನ ಮಾಡಲು ನಿರ್ಧರಿಸಿದ್ದೇವೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದರು.

Producer Rockline Venkatesh press conference about A special pooja program at the artists' association rav
Author
First Published Aug 11, 2024, 4:29 PM IST | Last Updated Aug 11, 2024, 4:31 PM IST

ಬೆಂಗಳೂರು (ಆ.11) ಚಿತ್ರರಂಗದ ಉಳಿವಿಗಾಗಿ, ಏಳ್ಗೆಗಾಗಿ ಇದೇ ಆಗಸ್ಟ್ 13,14 ರಂದು ಕಲಾವಿದರ ಸಂಘದಲ್ಲಿ ಪೂಜೆ, ಹೋಮ, ಹವನ ಮಾಡುತ್ತಿದ್ದೇವೆ ಅಂದು ಒಳ್ಳೆಯ ದಿನ ಹಾಗಾಗಿ ಅವತ್ತು ಹೋಮ ಹವನ ಮಾಡಲು ನಿರ್ಧರಿಸಿದ್ದೇವೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದರು.

ಕಲಾವಿದರ ಸಂಘದಲ್ಲಿ ಪೂಜೆ ಕಾರ್ಯಕ್ರಮ ನಡೆಯುವ ಕುರಿತು ಧಿಡೀರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಕೊರೊನಾ ಬಳಿಕ ಸಾಕಷ್ಟು ಸಾವು ನೋವು ಸಂಭವಿಸಿವೆ. ಚಿತ್ರರಂಗದಲ್ಲೂ ಹಲವರನ್ನು ನಾವು ಕಳೆದುಕೊಂಡಿದ್ದೇವೆ. ಹೀಗಾಗಿ ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಪೂಜೆ ಮಾಡಲು ತೀರ್ಮಾನ ಮಾಡಿದ್ದೇವೆ. ಸಾಮಾನ್ಯವಾಗಿ ಎಲ್ಲರಿಗೂ ಒಂದು ಆಮಂತ್ರಣ ಕೊಡ್ತೀವಿ. ಆದರೆ ಇಲ್ಲಿ ಯಾರಿಗೂ ಇನ್ವಿಟೇಷನ್ ಕೊಡಲ್ಲ ಎಂದು ಸ್ಪಷ್ಟಪಡಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಆಪ್ತ ಚಿಕ್ಕಣ್ಣಗೆ ತಪ್ಪದ ಕಂಟಕ!

ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಒಂದು ಸಲ್ಯೂಷನ್ ಬೇಕಾಗಿದೆ. ನಾವು ಅನೇಕ ಸಲ ಜನರ ಬಳಿ ಮನವಿ ಮಾಡಿದ್ದೇವೆ. ಇವತ್ತಿನ ಕನ್ನಡ ಚಿತ್ರರಂಗದ ಪರಿಸ್ಥಿತಿ ಏನಾಗ್ತಿದೆ ಅನ್ನೋದು ಗೊತ್ತಿದೆ. ಹಿಂದೆ ಎಲ್ಲಾ ಭಾಷೆಯ ಚಿತ್ರ ಬಿಡುಗಡೆ ಆಗ್ತಿದ್ದವು, ಅದು ಕಡಿಮೆ ಇತ್ತು. ಆದರೆ ಇವತ್ತು ಸುನಾಮಿ ರೀತಿ ಎಲ್ಲ ಚಿತ್ರಗಳು ಬರ್ತಾ ಇವೆ. ಎಲ್ಲ ಭಾಷೆಯ ಸೂಪರ್ ಡೂಪರ್ ಚಿತ್ರ ತಂದು ರಿಲೀಸ್ ಮಾಡ್ತಿದ್ದಾರೆ. ಇದು ವ್ಯಾಪಾರ. ನಾನು ಅದರ ಬಗ್ಗೆ ಮಾತನಾಡೊಲ್ಲ. ಆದರೆ ಅದರ ಪರಿಣಾಮದಿಂದ ಇವತ್ತು ಕನ್ನಡ ಚಿತ್ರರಂಗ ಪಾತಾಳಕ್ಕೆ ಹೋಗ್ತಾ ಇದೆ. ಅದನ್ನು ಉಳಿಸಿಕೊಳ್ಳೋಕೆ ಈ ಪೂಜೆ ನಡೆಸುತ್ತಿದ್ದೇವೆ ಎಂದರು.

ನಟ ದರ್ಶನ್ ಬಿಡುಗಡೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ದೈವ! ಇನ್ನೆರಡು ತಿಂಗಳಲ್ಲೇ ಬಿಡುಗಡೆ?

ಜೈಲಿನಲ್ಲಿ ನಟ ದರ್ಶನ್ ಬಿಡುಗಡೆಗೆ ಹೋಮ ಹವನ ನಡೆಸಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ರಾಕ್‌ಲೈನ್ ವೆಂಕಟೇಶ್, ನಾನು ದರ್ಶನ್‌ಗಾಗಿ ನೂರು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತೇನೆ. ಅದಕ್ಕೆ ಇಲ್ಲೇ ಬಂದು ಪೂಜೆ ಮಾಡಬೇಕಾಗಿಲ್ಲ. ಇಲ್ಲಿ ನಡೆಸುತ್ತಿರುವ ಉದ್ದೇಶ ದರ್ಶನ್ ಗಾಗಿ ಮಾತ್ರ ಒಳ್ಳೆಯದಾಗಲಿ ಅನ್ನೋದಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ತಪ್ಪು ಸರಿ ಹೇಳುವಷ್ಟು ದೊಡ್ಡ ಮನುಷ್ಯ ನಾನಲ್ಲ. ನಾನು ದರ್ಶನ್ ಒಂದೇ ಕುಟುಂಬದ ಸದಸ್ಯರೇ. ಹಾಗಾಂತ ದರ್ಶನ್ ಬಿಡುಗಡೆಗಾಗಿ ಪೂಜೆ ಮಾಡುತ್ತಿದ್ದೇವೆ ಅಂತಾ ಭಾವಿಸೋದು ತಪ್ಪು ಕಲ್ಪನೆ ಎಂದರು.

Latest Videos
Follow Us:
Download App:
  • android
  • ios