ಬೆಂಗಳೂರು(ಏ. 16)  ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ನಿಧನರಾಗಿದ್ದಾರೆ. ಅಂಬುಜ ದ್ವಾರಕೀಶ್ ಅವರಿಗೆ 80 ವರ್ಷ ವಯಸ್ಸಾಗಿತ್ತು.

ವಯೋ‌ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅಂಬುಜ  ಎಚ್‌ ಎಸ್‌ಆರ್ ಲೇಔಟ್ ನ  ಮನೆಯಲ್ಲಿ ನಿಧನರಾಗಿದ್ದಾರೆ. ಮಧ್ಯಾಹ್ನ 2.30ಕ್ಕೆ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಹತ್ತು ಕೋಟಿ ಕೊಟ್ಟು ದ್ವಾರಕೀಶ್ ಮನೆ ಖರೀದಿಸಿದ ರಿಷಬ್ ಶೆಟ್ಟಿ

ಹಾಸ್ಯ ನಟರಾಗಿ, ನಾಯಕರಾಗಿ ಗುರುತಿಸಿಕೊಂಡಿದ್ದ ದ್ವಾರಕೀಶ್ ಸಿನಿಮಾ ನಿರ್ಮಾಣದಲ್ಲಿಯೂ ಹೊಸ ಹೊಸ ಸಾಹಸ ಮಾಡಿದವರು.  ಕನ್ನಡ ಚಿತ್ರರಂಗದಲ್ಲಿಯೇ ಮೊದಲ ಸಾರಿ ವಿದೇಶಕ್ಕೆ ತೆರಳಿ ಸಿಂಗಾಪುರದಲ್ಲಿ ರಾಜಾಕುಳ್ಳ ಸಿನಿಮಾ ಶೂಟಿಂಗ್ ಮಾಡಿಕೊಂಡು ಬಂದಿದ್ದರು.

ಇತ್ತಿಚೇಗೆ ದ್ವಾರಕೀಶ್ ಅವರ ಮನೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಖರೀದಿ ಮಾಡಿದ್ದರು. ಅಂಬುಜಾ ಅವರ ನಿಧನಕ್ಕೆ ಚಿತ್ರರಂಗದ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.