Asianet Suvarna News Asianet Suvarna News

ರವಿಚಂದ್ರನ್‌ಗೆ ಹಣದ ವಿಷಯದಲ್ಲಿ ಸಿಕ್ಕಾಪಟ್ಟೆ ದೌಲತ್ತು: ಚಕ್ರವ್ಯೂಹದ ದಿನಗಳನ್ನು ಮೆಲುಕು ಹಾಕಿದ ಮುಖ್ಯಮಂತ್ರಿ ಚಂದ್ರು!

ಮುಖ್ಯಮಂತ್ರಿ ಚಂದ್ರು, ತಮ್ಮ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ವಿಶೇಷವಾಗಿ ಚಕ್ರವ್ಯೂಹ ಸಿನಿಮಾದಲ್ಲಿ ಚಾನ್ಸ್‌ ಸಿಕ್ಕ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

veteran actor mukhyamantri chandru recalls chakravyuha film shooting time and v ravichandran gvd
Author
First Published Jul 3, 2024, 8:12 PM IST

ರಂಗಭೂಮಿ ಹಾಗೂ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟು, ಎರಡು ಬಾರಿ ಶಾಸಕ, ಒಂದು ಬಾರಿ ಎಂಎಲ್ಸಿ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ರಾಜ್ಯದ 'ಪರ್ಮನೆಂಟ್ 'ಮುಖ್ಯಮಂತ್ರಿ ಎಂದೇ ಹೆಸರಾಗಿದ್ದವರು ಮುಖ್ಯಮಂತ್ರಿ ಚಂದ್ರು. ಇದೀಗ ಇದೇ ಮುಖ್ಯಮಂತ್ರಿ ಚಂದ್ರು, ತಮ್ಮ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ವಿಶೇಷವಾಗಿ ಚಕ್ರವ್ಯೂಹ ಸಿನಿಮಾದಲ್ಲಿ ಚಾನ್ಸ್‌ ಸಿಕ್ಕ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ರವಿಚಂದ್ರನ್‌ ಆ ಚಿತ್ರದ ಸಹ ನಿರ್ಮಾಪಕ: ಕಮರ್ಷಿಯಲ್‌ ಸಿನಿಮಾಗಳಿಂತಲೂ ಮುಂಚೆ, ಒಂದಷ್ಟು ಆಫ್‌ಬೀಟ್‌ ಸಿನಿಮಾಗಳಲ್ಲಿ ನಟಿಸಿದ್ದೆ. ಹೀಗಿರುವಾಗಲೇ 1982ರಲ್ಲಿ ಚಕ್ರವ್ಯೂಹ ಸಿನಿಮಾ ಸೆಟ್ಟೇರಿತ್ತು. ಅಂಬರೀಶ್‌ ಹೀರೋ, ಅಂಬಿಕಾ ಹೀರೋಯಿನ್.‌ ಅದೊಂದು ಪಾಲಿಟಿಕಲ್‌ ಡ್ರಾಮಾ ಶೈಲಿಯ ಸಿನಿಮಾ. ವೀರಾಸ್ವಾಮಿ ಅವರ ಈಶ್ವರಿ ಪ್ರೊಡಕ್ಷನ್ಸ್‌ನಲ್ಲಿ ಆ ಸಿನಿಮಾ ನಿರ್ಮಾಣವಾತ್ತಿತ್ತು. ಆ ಕಾಲದಲ್ಲಿ ರವಿಚಂದ್ರನ್‌ ಆ ಚಿತ್ರದ ಸಹ ನಿರ್ಮಾಪಕ. ಆ ಚಿತ್ರಕ್ಕೆ ಮೇನ್‌ ವಿಲನ್‌ ಬೇಕಿತ್ತು. ಫೈಟಿಂಗ್‌ ವಿಲನ್‌ ಅಲ್ಲ. ಡೈಲಾಗ್‌ ವಿಲನ್‌ ಬೇಕಿತ್ತು. ಒಂದು ಪಾರ್ಟಿ ಅಧ್ಯಕ್ಷನ ರೋಲ್. ಆ ಪಾತ್ರಕ್ಕಾಗಿ ಉದಯ್‌ಕುಮಾರ್‌, ಜಿ.ವಿ ಅಯ್ಯರ್‌ ಅವರನ್ನೂ ಹಾಕಿಕೊಳ್ಳಲು ಪ್ಲಾನ್‌ ಹಾಕಿದ್ದರು. ಪಾಪ್ಯುಲರ್‌ ಬದಲಿ ಹೊಸಬರನ್ನು ಹಾಕಿಕೊಳ್ಳೋಣ್ಣ ಎಂಬ ಪ್ಲಾನ್‌ ಮಾಡಿದ್ರು ಎಂದರು.  

ನನ್ನ ಮಗ ಜೈಲಿನಿಂದ ಹೊರ ಬರುತ್ತಾನೆ: ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟ ಮಾಲತಿ ಸುಧೀರ್

ಹೋಗ್ರಿರೀ ನನಗೆ ದುಡ್ಡು ಬರ್ತಿದೆ: ಆವಾಗ ಹಣಕಾಸಿನ ವಿಚಾರದಲ್ಲಿ ಅವ್ರೆಲ್ಲ ಚೆನ್ನಾಗಿಯೇ ಇದ್ರಲ್ಲ ಹಾಗಾಗಿ. ಪ್ರೀತಿನೂ ಹಾಗೇ ಇದೆ ನನ್ನ ಮೇಲೆ ಆ ಮನುಷ್ಯನಿಗೆ. ಆ ಸಿನಿಮಾ ಬಳಿಕ ಸಾಕಷ್ಟು ಸಿನಿಮಾ ಮಾಡಿಸಿದ್ರು. ದುಡ್ಡಿಂದೆಲ್ಲ ಮಾತನಾಡಬೇಡ, ನಾವು ಅಷ್ಟು ಕೊಡ್ತಿವಿ.. ಎಂದೆಲ್ಲ ಮಾತನಾಡಿದ್ರು. ಅದಕ್ಕೆ ನಾನು, ಹೋಗ್ರಿರೀ ನನಗೆ ದುಡ್ಡು ಬರ್ತಿದೆ, ಬೇರೆ ಯಾರ ಕಡೆನಾದ್ರೂ ಮಾಡಿಸಿಕೊಳ್ಳಿ ಎಂದಿದ್ದೆ ನಾನು ಹಾಗೇ ಹೇಳಿದ್ದಕ್ಕೆ, ರವಿಚಂದ್ರನ್‌ ಮತ್ತು ವೀರಾಸ್ವಾಮಿ ಇಬ್ಬರೂ ಚರ್ಚೆ ಮಾಡಿ, ಎಷ್ಟು ದುಡ್ಡು ಬರುತ್ತೆ ನಿನಗೆ ಎಂದು ಕೇಳಿದ್ರು. ಆಗ ನನಗೆ ತಿಂಗಳಿಗೆ 400 ರೂಪಾಯಿ ಬರ್ತಿತ್ತು. ಅದರ ಹತ್ತರಷ್ಟು ಕೊಡ್ತೀನಿ ಬರ್ತಿಯಾ ಎಂದ್ರು. 4000 ಕೊಡ್ತಾರಾ? ಅದಾದ ಮೇಲೆ ನನ್ನ ಕಥೆ ಹೇಗೆ ಎಂದೆಲ್ಲ ವಿಚಾರ ಮಾಡಿದೆ. ಈ ಸಿನಿಮಾ ಆದಮೇಲೆ ನಿಮ್ಮ ಲಕ್‌ ಬದಲಾಗುತ್ತೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿ, ಪ್ರೀತಿಯಿಂದ ಮಾಡಿಸಿದ್ರು ಎಂದು ತಿಳಿಸಿದರು.

ನಾನು ಕ್ಲರ್ಕ್‌ ಕೆಲಸ ಮಾಡ್ತಿದ್ದೆ: ಆಗ ನನ್ನ ಮುಖ್ಯಮಂತ್ರಿ ನಾಟಕ ನೋಡಿದ ಒಬ್ಬರು, ನನ್ನ ಬಗ್ಗೆ ಅವರಿಗೆ ಹೇಳಿದ್ದಾರೆ. ನನ್ನನ್ನು ಹುಡುಕಿಕೊಂಡು ಬಂದು ನಾಟಕ ನೋಡಿದ್ದಾರೆ. ಆಗ ನನಗೆ 30 ವರ್ಷ. ಮಲ್ಲೇಶ್ವರದಲ್ಲಿ ನಡೆದ ಶೋಗೆ, ಚಕ್ರವ್ಯೂಹ ಚಿತ್ರದ ನಿರ್ದೇಶಕರು ಆಗಮಿಸಿ, ಸಿನಿಮಾ ನೋಡಿ ಮೆಚ್ಚಿದ್ದಾರೆ. ನನ್ನನ್ನೇ ಫೈನಲ್‌ ಮಾಡಿದ್ದಾರೆ. ಆವಾಗ ನಾನು ಕ್ಲರ್ಕ್‌ ಕೆಲಸ ಮಾಡ್ತಿದ್ದೆ. 20 ದಿನ ರಜೆ ಹಾಕಿ ಎಂದ್ರು. ನಾನು ಅದೆಲ್ಲ ಆಗಲ್ಲ, ಹರ್ಷದ ಕೂಳಿಗೆ ವರ್ಷದ ಕೂಳು ಅದ್ಹೇಗೆ ಕಳೆದುಕೊಳ್ಳಲಿ ಅಂತ ಬೇಡ ಎಂದಿದ್ದೆ. ಅವಾಗೆಲ್ಲ ನನ್ನ ಯಾವ ಸಿನಿಮಾ ಸಹ ಕ್ಲಿಕ್‌ ಆಗಿರಲಿಲ್ಲ. ಚಕ್ರವ್ಯೂಹ ನನ್ನ ಮೊದಲ ಕಮರ್ಷಿಯಲ್‌ ಸಿನಿಮಾ ಆಗಿತ್ತು. ದುಡ್ಡಿನ ವಿಚಾರದಲ್ಲಿ ರವಿಚಂದ್ರನ್‌ ಆವತ್ತು ಸ್ವಲ್ಪ ದೌಲತ್ತಿನಲ್ಲಿಯೇ ಮಾತನಾಡಿದರು ಎಂದು ಚಂದ್ರು ಹೇಳಿದರು.

ಸಿಗರೇಟ್‌ ಕೊಡದಿದ್ದವರು ಸಿಗರೇಟ್‌ ಕೊಟ್ಟರು, 20 ಸಾವಿರದ ಆರ್ಟಿಸ್ಟ್‌ ಆಗೋದೆ: ಅಂಬರೀಶ್‌, ತೂಗುದೀಪ ಶ್ರೀನಿವಾಸ್‌, ವಜ್ರಮುನಿ, ಅಂಬಿಕಾ, ಬ್ರಹ್ಮಾವರಂ, ಕೃಷ್ಣಗೌಡ್ರು ಇನ್ನೂ ಸಾಕಷ್ಟು ಮಂದಿ ಘಟನಾಘಟಿಗಳು. ಪಾರ್ಟಿ ಪ್ರೆಸಿಡೆಂಟ್‌ ನಾನು. ಆ ಒಂದು ಶಾಟ್‌ ಮಾಡ್ತಿದ್ದಂತೆ, ಓಕೆ ಆಗೋಯ್ತು. ಚಪ್ಪಾಳೆ ಹೊಡೆದ್ರು. ಚೇರ್‌ ಕೊಡದಿದ್ದವರು ಚೇರ್‌ ಕೊಟ್ರು. ಸಿಗರೇಟ್‌ ಕೊಡದಿದ್ದವರು ಸಿಗರೇಟ್‌ ಕೊಟ್ಟರು. ಮುಂದಿನ ನಾಲ್ಕೈದು ಸಿನಿಮಾ ಅಲ್ಲೇ ಬುಕ್‌ ಆಯ್ತು. ವೀರಾಸ್ವಾಮಿ ಅವರೇ ನನ್ನನ್ನು ಬುಕ್‌ ಮಾಡಿದ್ರು. ಆ ಕಾಲದಲ್ಲಿ ಒಂದೇ ದಿನದಲ್ಲಿ 20 ಸಾವಿರದ ಆರ್ಟಿಸ್ಟ್‌ ಆಗೋದೆ ಎಂದು ಕಲಾಮಾಧ್ಯಮ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಚಂದ್ರು ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ, ದರ್ಶನ್ ಪ್ರಕರಣ ವಿಧಿಯಾಟ: ಸಂಗೀತ ನಿರ್ದೇಶಕ ವಿ.ಮನೋಹರ್

ಗುಂಡು ನನ್ನ ಬಲಗಣ್ಣಿಗೆ ತಾಗಿತು: ಇನ್ನು ಬೆಂಗಳೂರು ಅರಮನೆ ಮೈದಾನದಲ್ಲಿ 'ಸೆಂಟ್ರಲ್ ರೌಡಿ' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಟೈಗರ್ ಪ್ರಭಾಕರ್ ಜೊತೆಗಿನ ಹೊಡೆದಾಟದ ಸನ್ನಿವೇಶದಲ್ಲಿ ಅಚಾನಕ್ ಆಗಿ ಗುಂಡು ನನ್ನ ಬಲಗಣ್ಣಿಗೆ ತಾಗಿತು. ಕಣ್ಣು ಸರಿಪಡಿಸ ಬೇಕಾದರೆ ನನ್ನ ಮುಖದ ಶೇಪ್ ಚೇಂಜ್ ಆಗುತ್ತೆ ಎಂದು ವೈದ್ಯರು ಹೇಳಿದರು. ನನ್ನ ಸಿನಿಮಾ ಜೀವನಕ್ಕೆ ಮುಖ ಚೆನ್ನಾಗಿರ ಬೇಕಾಗಿರುವುದರಿಂದ ನಾನು ಅದಕ್ಕೆ ಆದ್ಯತೆ ಕೊಡಲಿಲ್ಲ. ನನಗೆ ಬಲಗಣ್ಣು ಕಾಣಿಸುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

Latest Videos
Follow Us:
Download App:
  • android
  • ios