Asianet Suvarna News Asianet Suvarna News

ನನ್ನ ಮಗ ಜೈಲಿನಿಂದ ಹೊರ ಬರುತ್ತಾನೆ: ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟ ಮಾಲತಿ ಸುಧೀರ್

ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನ ಕಳೆದಂತೆ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ಇದೀಗ  ನನ್ನ ಮಗ ಜೈಲಿನಿಂದ ಹೊರ ಬರುತ್ತಾನೆ ಎಂದು ಆತನ ಸ್ಥಿತಿ ನೆನೆದು ಮಾಲತಿ ಸುಧೀರ್ ಕಣ್ಣೀರು ಹಾಕಿದ್ದಾರೆ. 

director tharun sudhir mother malathi reacts darshan thoogudeepa case gvd
Author
First Published Jul 3, 2024, 5:53 PM IST

ಬೆಂಗಳೂರು (ಜು.03): ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನ ಕಳೆದಂತೆ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಒಟ್ಟು 17 ಆರೋಪಿಗಳು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. 13 ಮಂದಿ ಪರಪ್ಪನ ಆಗ್ರಹಾರದಲ್ಲಿ ಇದ್ದರೆ, ಉಳಿದ 4 ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇದೀಗ ದರ್ಶನ್ ಜೈಲಿನಿಂದ ಹೊರ ಬರುತ್ತಾನೆ ಎಂದು ಮಾಲತಿ ಸುಧೀರ್ ಕಣ್ಣೀರಿಟ್ಟಿದ್ದಾರೆ. ನನ್ನ ಮಗ ಜೈಲಿನಿಂದ ಹೊರ ಬರುತ್ತಾನೆ ಎಂದು ಆತನ ಸ್ಥಿತಿ ನೆನೆದು ಮಾಲತಿ ಕಣ್ಣೀರು ಹಾಕಿದ್ದಾರೆ. 

ನನ್ನ ಮಗ ಖಂಡಿತ ಹೊರ ಬರುತ್ತಾನೆ. ಆ ರಾಯರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ದುಃಖ ಇರುವಾಗ ಮೌನ ಇರುತ್ತದೆ. ನೋವಿರುವಾಗಲೂ ಮೌನ ಇರುತ್ತದೆ. ಮಗ ತರುಣ್ ಜೊತೆಯೂ ದರ್ಶನ್ ಪ್ರಕರಣದ ಕುರಿತು ನಾನೇನು ಕೇಳಲಿಲ್ಲ ಎಂದು ಮಾಲತಿ ಸುಧೀರ್ ಮಾತನಾಡಿದ್ದಾರೆ. ಅಂದಹಾಗೆ, ದರ್ಶನ್‌ರನ್ನ ಬಾಲ್ಯದಿಂದಲೂ ಖಳ ನಟ ಸುಧೀರ್ ಪತ್ನಿ ಮಾಲತಿ ನೋಡಿಕೊಂಡು ಬಂದಿದ್ದಾರೆ. ಪುತ್ರ ತರುಣ್ ಮತ್ತು ದರ್ಶನ್ ಸ್ನೇಹಿತರು. ದರ್ಶನ್ ನಟನೆಯ ರಾಬರ್ಟ್, ಕಾಟೇರ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು.

ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ, ದರ್ಶನ್ ಪ್ರಕರಣ ವಿಧಿಯಾಟ: ಸಂಗೀತ ನಿರ್ದೇಶಕ ವಿ.ಮನೋಹರ್

ದರ್ಶನ್‌ ಭೇಟಿಯಾದ ಪವಿತ್ರಾ ಆಪ್ತೆ: ಜೈಲಿನಲ್ಲಿರುವ ನಟ ದರ್ಶನ್‌ನನ್ನು ಪವಿತ್ರಾ ಗೌಡ ಆಪ್ತ ಸ್ನೇಹಿತೆ ಮಂಗಳವಾರ ಭೇಟಿ ಮಾಡಿದ್ದಾರೆ. ಒಂದು ಕಡೆ ಪವಿತ್ರಾ ಸ್ನೇಹಿತೆ 15 ನಿಮಿಷ ದರ್ಶನ್ ಜತೆ ಮಾತುಕತೆ ನಡೆಸಿದ್ದರೆ, ಮತ್ತೊಂದೆಡೆ ದರ್ಶನ್‌ರನ್ನು‌ ಭೇಟಿಯಾಗಲು ನಟ ಧನ್ವೀರ್‌ಗೆ ಅವಕಾಶ ಸಿಗದಿರುವುದು ಕಂಡುಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ದರ್ಶನ್ ಅಭಿಪ್ರಾಯ ತಿಳಿಯಲು ಪವಿತ್ರಾ ಗೌಡ ಯತ್ನಿಸಿದ್ದಾರೆ. ಹೀಗಾಗಿ ಅವರು ನೀಡಿದ ಮಾಹಿತಿಯನ್ನು ದರ್ಶನ್‌ಗೆ ಪವಿತ್ರಾ ಗೌಡ ಆಪ್ತ ಸ್ನೇಹಿತೆ ಸಮತಾ ರವಾನಿಸಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿ ಬೇರೆ ಬೇರೆಯಾಗಿದ್ದರೂ ದರ್ಶನ್ ಮತ್ತು ಪವಿತ್ರಾಗೆ ಪರಸ್ಪರ ಮಾಹಿತಿ ಸಿಗುತ್ತಿದೆ. ಇದಕ್ಕೆ ಪವಿತ್ರಾ ಸ್ನೇಹಿತೆ ಸಮತಾ ಮಧ್ಯವರ್ತಿಯಾಗಿದ್ದಾರೆ. ನಟ ದರ್ಶನ್ ತನ್ನ ಬಗ್ಗೆ ಏನು ಹೇಳುತ್ತಿದ್ದಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅವರ ಅಭಿಪ್ರಾಯ ತಿಳಿಯಲು ಪವಿತ್ರಾ ಪ್ರಯತ್ನಿಸಿದ್ದಾರೆ. ಹೀಗಾಗಿ ಸ್ನೇಹಿತೆ ಮೂಲಕ ದರ್ಶನ್‌ರನ್ನು ಭೇಟಿ ಮಾಡಿಸಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಕೂಡ ಸಮತಾ ಭೇಟಿಗೆ ಓಕೆ ಅಂದಿದ್ದರು. ಹೀಗಾಗಿ ಅವರನ್ನು ಜೈಲಿನೊಳಗೆ ಕಳುಹಿಸಲಾಗಿದೆ.

ಸಿಟ್ಟನ್ನ ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನ ಕ್ಯಾರೆಕ್ಟರ್ ಮಾಡಬೇಕು: ದರ್ಶನ್‌ಗೆ ಹಂಸಲೇಖ ಕಿವಿಮಾತು

ಏನಿದು ಪ್ರಕರಣ?: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್​ ಮಾಡಿದ್ದ. ಇದೇ ಕಾರಣಕ್ಕೆ ಕೋಪಗೊಂಡ ದರ್ಶನ್​ ಅಂಡ್​ ಗ್ಯಾಂಗ್​ ಪ್ಲಾನ್​​ ಮಾಡಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ ಬಹಳ ಕ್ರೂರವಾಗಿ ಕೊಲೆ ಮಾಡಿದ್ದರು, ಇದಾದ ಬಳಿಕ ಪೊಲೀಸ್​ ಅಧಿಕಾರಿಗಳು ಈ ಕೊಲೆ ಹಿಂದಿನ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಿದ್ದಾರೆ.

Latest Videos
Follow Us:
Download App:
  • android
  • ios