ಈ ಮಾತುಗಳನ್ನು ಅವರು ಹೃದಯ ಪೂರ್ವಕವಾಗಿ ಹೇಳಿಕೊಂಡರು. ಹಾಗಾದ್ರೆ ಅವರೀಗ ರಾಧಿಕಾ ನಾರಾಯಣ್ ಅಭಿಮಾನಿ ಆಗಿದ್ದು ಯಾಕೆ? ಅದಕ್ಕೆ ಉತ್ತರ ‘ಮುಂದಿನ ನಿಲ್ದಾಣ’ ಚಿತ್ರ.

'ಮುಂದಿನ ನಿಲ್ದಾಣ'ದಲ್ಲಿ ಸಿಗ್ತಾರೆ ದತ್ತಣ್ಣ!

ನವೆಂಬರ್ 29ಕ್ಕೆ ತೆರೆಗೆ ಬರಲಿರುವ ಈ ಚಿತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ದತ್ತಣ್ಣ ಇಬ್ಬರು ಇದ್ದಾರೆ. ರಾಧಿಕಾ ನಾರಾಯಣ್ ಇಲ್ಲಿ ನಾಯಕಿ ಆಗಿದ್ದರೆ, ಅವರಷ್ಟೇ ಪ್ರಾಮುಖ್ಯತೆ ಇರುವ ಇನ್ನೊಂದು ಪಾತ್ರ ದತ್ತಣ್ಣ ಅವರದ್ದು. ಟ್ರೇಲರ್ ಲಾಂಚ್ ಮೂಲಕ ಚಿತ್ರತಂಡದ ಜತೆಗೆ ದತ್ತಣ್ಣ ಮಾಧ್ಯಮದ ಮುಂದೆ ಬಂದಾಗ ಚಿತ್ರದಲ್ಲಿನ ರಾಧಿಕಾ ಪಾತ್ರ ಮತ್ತು ಅವರ ಅಭಿನಯವನ್ನು ಮುಕ್ತ ಕಂಠದಿಂದ ಬಣ್ಣಿಸಿದರು.

ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ದತ್ತಣ್ಣ, ಅಕ್ಷತಾ!

‘ರಾಧಿಕಾ ಬಗ್ಗೆ ನಂಗೆ ಅಷ್ಟೇನು ಒಲವು ಇರಲಿಲ್ಲ. ಅಂತಹ ಕುತೂಹಲವೂ ಇರಲಿಲ್ಲ. ಆದ್ರೆ ನನಗೀಗ ಅಚ್ಚರಿ. ಸುಮ್ನೆ ಒಂದು ಸಲ ಸಿನಿಮಾ ನೋಡೋಣ ಅಂತ ಟೀಮ್ ಜತೆಗೆ ಕುಳಿತಿದ್ದೆ. ಸಿನಿಮಾ ನೋಡುತ್ತಾ ಹೋದಾಗ, ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದು ಇವರೇನಾ ಅಂತೆನಿಸಿದ್ದು ಸುಳ್ಳಲ್ಲ. ಅಷ್ಟು ಸೊಗಸಾದ, ಲವಲವಿಕೆಯಿಂದ ಕೂಡಿ ಅಭಿನಯ ಅವರದ್ದು. ತುಂಬಾ ಸುಂದರವಾಗಿಯೂ ಕಾಣಿಸುತ್ತಿದ್ದಾರೆ. ಇಷ್ಟು ದಿನ ನಾನು ಮಧುಬಾಲ ಅಭಿಮಾನಿ ಆಗಿದ್ದೆ. ಇನ್ನು ಮುಂದೆ ನಾನು ರಾಧಿಕಾ ಅಭಿಮಾನಿ’ ಎನ್ನುತ್ತಾ ಸಭಿಕರಲ್ಲಿ ನಗು ತರಿಸಿದರು ದತ್ತಣ್ಣ