ಚೂರಿಕಟ್ಟೆಪ್ರವೀಣ್‌, ರಾಧಿಕಾ ನಾರಾಯಣ್‌ ಹಾಗೂ ಅನನ್ಯ ಕಶ್ಯಪ್‌ ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ದತ್ತಣ್ಣ ಅವರ ಪಾತ್ರ ಸಾಕಷ್ಟುಕುತೂಹಲದಿಂದ ಕೂಡಿದೆ. ಈ ಬಗ್ಗೆ ದತ್ತಣ್ಣ ಹೇಳುವುದೇನು?

ದತ್ತಣ್ಣ ಬೆಳ್ಳಿಹೆಜ್ಜೆ: ದತ್ತಣ್ಣ ಕುರಿತ ಪುಟ್ಟದೊಂದು ಕಿರುಚಿತ್ರ

‘ಯುವ ನಿರ್ದೇಶಕರ ಜತೆ ಕೆಲಸ ಮಾಡಕ್ಕೆ ಖುಷಿ ಕೊಡುತ್ತದೆ. ಈ ಕಾರಣಕ್ಕೆ ನಾನು ವಿನಯ್‌ ಭಾರದ್ವಾಜ್‌ ಅವರ ಮುಂದಿನ ನಿಲ್ದಾಣ ಸಿನಿಮಾ ಒಪ್ಪಿಕೊಂಡೆ. ಟ್ರೆಂಡಿ ಕಾಸ್ಟ್ಯೂಮ್‌, ಮಾಡ್ರನ್‌ ಔಟ್‌ಲುಕ್‌ನಲ್ಲಿ ಇಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರದ ಹೆಸರು ಕ್ರಿಸ್‌. ಈಗಿನ ಕಾಲದ ಕೂಲ್‌ ಪರ್ಸನ್‌ ರೀತಿಯಲ್ಲಿ ನನ್ನ ಪಾತ್ರ ಮೂಡುತ್ತದೆ. ನಾನು ಈ ಚಿತ್ರದ ನಾಯಕನಿಗೆ ಮಾರ್ಗದರ್ಶಿಯೂ ಹೌದು’ ಎಂದು ಪಾತ್ರದ ಗುಟ್ಟು ಬಿಟ್ಟುಕೊಡುತ್ತಾರೆ ದತ್ತಣ್ಣ.

ಈವರೆಗೂ ಸಾಕಷ್ಟುಸಿನಿಮಾಗಳಲ್ಲಿ ನಟಿಸಿದ್ದೀನಿ. ಅದರಲ್ಲಿ ಶೇ.30ರಷ್ಟುಸಿನಿಮಾಗಳು ಯುವ ನಿರ್ದೇಶಕರು ಮತ್ತು ಮೊದಲ ನಿರ್ದೇಶನದ ಕನಸು ಹೊತ್ತು ಬಂದ ನಿರ್ದೇಶಕರ ಸಿನಿಮಾದಲ್ಲಿ ನಟಿಸಿದ್ದೇನೆ.

ವಿಜ್ಞಾನಿ ಆಗುವ ಆಸೆ ಕೊನೆಗೂ ಈಡೇರಿತು: ದತ್ತಣ್ಣ

ಬಹುತೇಕ ಹೊಸ ನಿರ್ದೇಶಕರ ಮೊದಲ ಸಿನಿಮಾದಲ್ಲಿ ಏನಾದರೂ ವಿಷಯ ಇರುತ್ತದೆ. ಅಂಥವರಿಂದ ಸಾಕಷ್ಟುಕಲಿತಿದ್ದೇನೆ. ಅವರೊಳಗಿನ ತುಡಿತ ಹೊಸತನವನ್ನು ಹುಡುಕುತ್ತಿರುತ್ತದೆ. ಅದು ನಮ್ಮಂಥವರಿಗೆ ಖುಷಿ ಕೊಡುತ್ತದೆ. ಇನ್ನು ‘ಮುಂದಿನ ನಿಲ್ದಾಣ’ ಚಿತ್ರದಲ್ಲೂ ಅಂಥದ್ದೇ ಒಂದು ಮಜಾ ಕೊಡುವ ಪಾತ್ರವಿದೆ. ನನಗೆ ಹಳೇ ಜುಬ್ಬಾ - ಪೈಜಾಮ ಹಾಕಿ ನಿಲ್ಲಿಸುವವರ ಮಧ್ಯೆ ವಿನಯ್‌ ಮಾಡ್ರನ್‌ ಡ್ರೆಸ್‌ ಕೊಟ್ಟು ಯಂಗ್‌ ಲುಕ್‌ಗೆ ಮರಳಿಸಿದ್ದಾರೆ. ಮನರಂಜನೆ ಜತೆಗೆ ಸಂದೇಶವೂ ಇದೆ...ಇದು ದತ್ತಣ್ಣ ಚಿತ್ರದ ಬಗ್ಗೆ ಕೊಡುವ ವಿವರಣೆ.

ಸದ್ಯಕ್ಕೆ ದತ್ತಣ್ಣ ಅವರ ಪಾತ್ರದ ಔಟ್‌ಲುಕ್‌ ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈಗಾಗಲೇ ಚಿತ್ರದ ಪೋಸ್ಟರ್‌ ಹಾಗೂ ಕ್ಯಾರೆಕ್ಟರ್‌ಗಳನ್ನು ಪರಿಚಯಿಸುವ ಟೀಸರ್‌ ಬಿಡುಗಡೆ ಮಾಡಿದ್ದು, ಕುತೂಹಲ ಮೂಡಿಸಿದೆ. ಸದ್ಯದಲ್ಲೇ ಹಾಡುಗಳನ್ನು ಲೋಕಾರ್ಪಣೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ಕೋಸ್ಟಲ್‌ ಬ್ರಿಡ್ಜ್‌ ಪೊ›ಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ.