ಕಮಲ್ ಹಾಸನ್ ಕರೆದುಕೊಂಡು ಬಂದು ಟೈಟಲ್ ಲಾಂಚ್ ಮಾಡಿಸುತ್ತೇನೆ ಅಂತಾ ನಿರ್ದೇಶಕರು ನಿರ್ಮಾಪಕರಿಗೆ ಪ್ರಾಮಿಸ್ ಮಾಡಿರ್ತಾರೆ. ಕಮಲ್ ಬರ್ತಿದ್ದಾರೆ ಅಂತಾ ಗೊತ್ತಾಗ್ತಿದ್ದಂತೆ ಇಡೀ ತಂಡ ಅವರಿಗೆ ಕಾತರದಿಂದ ಕಾಯ್ತಾ ಇರುತ್ತದೆ.

ಪ್ರತಿ ಸಿನಿಮಾದಲ್ಲೊಂದು ಗಟ್ಟಿ ಸಂದೇಶದ ಮೂಲಕ ಪ್ರೇಕ್ಷಕರ ಎದುರು ಹಾಜರಾಗುವ ಮಧುಚಂದ್ರ (Madhuchandra) ಈಗ ಮತ್ತೆ ಬಂದಿದ್ದಾರೆ. ಈ ಬಾರಿಯೂ ಫ್ರೆಶ್ ಕಥೆಯನ್ನು ಹೊತ್ತು ಬಂದಿದ್ದಾರೆ. ಸದ್ಯಕ್ಕೆ ಕಥೆ ಬಗ್ಗೆ ಗುಟ್ಟುರಟ್ಟು ಮಾಡದ 'ವಾಸ್ಕೋಡಿಗಾಮಾ' ಹಾಗೂ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಡೈರೆಕ್ಟರ್ ಮಧುಚಂದ್ರ ತಮ್ಮ ಮುಂದಿನ ಚಿತ್ರದ ಟೈಟಲ್ ಅನಾವರಣ ಮಾಡಿದ್ದಾರೆ. ಅದು ಸಾಮಾನ್ಯವಾಗಿ ಅಲ್ಲವೇ ಅಲ್ಲ. ವಿಭಿನ್ನ.. ಹೀಗೂ ಟೈಟಲ್ ಲಾಂಚ್ ಮಾಡಬಹುದು ಅನ್ನುವುದು ತೋರಿಸಿದ್ದಾರೆ.

ಕಮಲ್ ಹಾಸನ್ (Kamal Haasan) ಕರೆದುಕೊಂಡು ಬಂದು ಟೈಟಲ್ ಲಾಂಚ್ ಮಾಡಿಸುತ್ತೇನೆ ಅಂತಾ ನಿರ್ದೇಶಕರು ನಿರ್ಮಾಪಕರಿಗೆ ಪ್ರಾಮಿಸ್ ಮಾಡಿರ್ತಾರೆ. ಕಮಲ್ ಬರ್ತಿದ್ದಾರೆ ಅಂತಾ ಗೊತ್ತಾಗ್ತಿದ್ದಂತೆ ಇಡೀ ತಂಡ ಅವರಿಗೆ ಕಾತರದಿಂದ ಕಾಯ್ತಾ ಇರುತ್ತದೆ. ಆದರೆ ಕಹಾನಿ ಮೇ ಟ್ವಿಸ್ಟ್..ಅಲ್ಲಿ‌ ಕಮಲ್ ಹಾಸನ್ ಬದಲು ಬಂದಿದ್ದು ಬೇರೆಯವರು. ಕಾರ್ಯಕ್ರಮದ ಆಯೋಜಕರು ಕಮಲ್ ಹಾಸನ್ ಕರೆದುಕೊಂಡು ಬರ್ತಿನಿ ಅಂತಾ ಹಾಸನದಿಂದ ಕಮಲಾ ಎಂಬುವವರನ್ನು ಕರೆದುಕೊಂಡು ಬಂದು ಚೀಟ್ ಮಾಡಿರ್ತಾರೆ. ಬಳಿಕ ನಿರ್ದೇಶಕರಿಗೆ ನಿರ್ಮಾಪಕರೆಲ್ಲರೂ ಗೂಸಾ ಕೊಡ್ತಾರೆ. ಹೀಗೆ ತಮಾಷೆಯಾಗಿರುವ ವಿಡಿಯೋ ಮೂಲಕ ಚಿತ್ರದ ಶೀರ್ಷಿಕೆ ರಿವೀಲ್ ಮಾಡಲಾಗಿದೆ.

ಅಮೀರ್ ಸರ್, ನಿಮ್ಮಿಂದ ಎರಡೇ ಫೀಟ್ ದೂರ ನಿಂತಿದ್ದೇನೆ; ಸಾಯಿ ಪಲ್ಲವಿ ಮಾತಿಗೆ ಅಮೀರ್ ಖಾನ್ ಶಾಕ್!

ಮಧುಚಂದ್ರ ತಮ್ಮ ಹೊಸ ಪ್ರಯತ್ನಕ್ಕೆ Mr.ರಾಣಿ ಎಂಬ ಟೈಟಲ್ ಇಟ್ಟಿದ್ದಾರೆ. ಟೈಟಲ್ ಎಷ್ಟು ಕ್ರೇಜಿ ಆಗಿದೆಯೋ ಕಥೆ ಕೂಡ ಅಷ್ಟೇ ಕ್ರೇಜಿಯಾಗಿದೆ ಅನ್ನುತ್ತಾರೆ ಮಧುಚಂದ್ರ. Mr.ರಾಣಿ ಚಿತ್ರದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ಶ್ರೀವಸ್ತ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ, ಆನಂದ್, ಚಕ್ರವರ್ತಿ ದಾವಣಗೆರೆ ತಾರಾಬಳಗದಲ್ಲಿದ್ದಾರೆ. 

ನೀವು ಸ್ಕೂಲ್ ಗರ್ಲ್ ಅಲ್ಲ, ದೊಡ್ಡವರಾಗಿದ್ದೀರಿ; ಸಮಂತಾಗೆ ಯಾಕೆ ಹೀಗಂದ್ರು ಸದ್ಗುರು ಜಗ್ಗಿ ವಾಸುದೇವ್!

ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ನಡಿ ಮಧುಚಂದ್ರ ಕಥೆ ಬರೆದು ನಿರ್ದೇಶಿಸುತ್ತಿರುವ Mr.ರಾಣಿ ಜೂಡಾ ಸ್ಯಾಂಡಿ ಸಂಗೀತ, ರವೀಂದ್ರನಾಥ್ ಟಿ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಅಂದಹಾಗೇ Mr.ರಾಣಿ ಕ್ರೌಡ್ ಫಂಡೆಂಡ್ ಸಿನಿಮಾ, 100ಕ್ಕೂ ಹೆಚ್ಚು ಜನ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ಒಬ್ಬರೇ ಶಾಪಿಂಗ್ ಹೋದಾಗ ನಟಿ ಪೂಜಾ ಹೆಗಡೆ ಅದೆಂಥ ತಪ್ಪು ಮಾಡ್ಬಿಟ್ರು ನೋಡ್ರಿ!

Mr.Rani Movie Title Launch | Kamala Haasan | Madhuchandra | Deepak Subramanya | Parvati Nair