ನೀವು ಸ್ಕೂಲ್ ಗರ್ಲ್ ಅಲ್ಲ, ದೊಡ್ಡವರಾಗಿದ್ದೀರಿ; ಸಮಂತಾಗೆ ಯಾಕೆ ಹೀಗಂದ್ರು ಸದ್ಗುರು ಜಗ್ಗಿ ವಾಸುದೇವ್!
'ಯಾಕೆ ಜಗತ್ತು ಕೆಲವರ ಬಗ್ಗೆ ಅನ್‌ಫೇರ್ ಆಗಿರುತ್ತೆ? ಲೈಫ್‌ನಲ್ಲಿ ತುಂಬಾ ಕಷ್ಟ ಅನುಭವಿಸಿದಾಗ ನಾವು ಏನಂತ ಅದನ್ನು ಅರ್ಥೈಸಿಕೊಳ್ಳಬೇಕು? ನಮ್ಮ ಹಳೆಯ ಕರ್ಮ ಕಳೆದುಹೋಯ್ತು ಅಂತಾನಾ?
ಸದ್ಗುರು ಜಗ್ಗಿ ವಾಸುದೇವ್ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ ನಟಿ ಸಮಂತಾ ಅವರು ಪ್ರಶ್ನೆಯೊಂದನ್ನು ಕೇಳಿ ಅದಕ್ಕೆ ಉತ್ತರ ಪಡೆದಿದ್ದಾರೆ. ನಟಿ ಸಮಂತಾ 'ಯಾಕೆ ಜಗತ್ತು ಕೆಲವರ ಬಗ್ಗೆ ಅನ್‌ಫೇರ್ ಆಗಿರುತ್ತೆ? ಲೈಫ್‌ನಲ್ಲಿ ತುಂಬಾ ಕಷ್ಟ ಅನುಭವಿಸಿದಾಗ ನಾವು ಏನಂತ ಅದನ್ನು ಅರ್ಥೈಸಿಕೊಳ್ಳಬೇಕು? ನಮ್ಮ ಹಳೆಯ ಕರ್ಮ ಕಳೆದುಹೋಯ್ತು ಅಂತಾನಾ? ಹಾಗಿದ್ರೆ ಅದೊಂಥರಾ ಒಳ್ಳೇದೇ ಆಗಿರುತ್ತೆ. ಆದರೆ, ಜಗತ್ತು ನಮ್ಮನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಾಗ ಮನಸ್ಸಿಗೆ ತಡೆದುಕೊಳ್ಳಲಾಗದಷ್ಟು ನೋವು ಉಂಟಾಗುತ್ತದೆ.
ಇಂಥ ಸಮಯದಲ್ಲಿ ಏನು ಮಾಡಬೇಕು?' ಎಂದು ಕೇಳಿದ್ದಾರೆ. ಅದಕ್ಕೆ ಸದ್ಗುರು ಎಂದಿನಂತೆ ಹಸನ್ಮುಖಿಯಾಗಿ, ತಮಾಷೆ ಮಾಡುತ್ತ ಉತ್ತರ ಹೇಳಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರು 'ಸಮಂತಾ ನಿಮಗೆ ಸಾಕಷ್ಟು ವಯಸ್ಸಾಗಿದೆ. ಅಂದರೆ, ನಾನು ಹೇಳುತ್ತಿರುವುದು ನಿಮಗೆ ವಯಸ್ಸಾಗೋಯ್ತು ಅಂತಲ್ಲ, ಆದರೆ, ಇಂಥ ಪ್ರಶ್ನೆ ಕೇಳುವ ವಯಸ್ಸು ನಿಮ್ಮದಲ್ಲ. ಈ ಪ್ರಶ್ನೆಯನ್ನು ಸ್ಕೂಲ್‌ಗೆ ಹೋಗುವ ಮಕ್ಕಳು ಕೇಳಬೇಕು. ಏಕೆಂದರೆ, ಅವರ ವಯಸ್ಸಿನಲ್ಲಿ ಎಲ್ಲರೂ ನಮ್ಮನ್ನು ಕೇರ್ ಮಾಡಬೇಕು ಎಂಬ ಭಾವನೆ ಇರುತ್ತದೆ. ಜಗತ್ತು ಕೂಡ ಅವರನ್ನು ಹಾಗೇ ನಡೆಸಿಕೊಳ್ಳುತ್ತದೆ.
ಒಬ್ಬರೇ ಶಾಪಿಂಗ್ ಹೋದಾಗ ನಟಿ ಪೂಜಾ ಹೆಗಡೆ ಅದೆಂಥ ತಪ್ಪು ಮಾಡ್ಬಿಟ್ರು ನೋಡ್ರಿ!
ಆದರೆ, ನಾವು ದೊಡ್ಡವರಾದಂತೆ ಜಗತ್ತು ನಮ್ಮನ್ನು ಕೇರ್ ಮಾಡುವುದನ್ನು ನಿಲ್ಲಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ. ಚಿಕ್ಕ ಮಕ್ಕಳನ್ನು ಹೊರತುಪಡಿಸಿ ಜಗತ್ತು ಯಾರದೇ ಬಗ್ಗೆ ಕನಿಕರ ತೋರಿಸುವುದಿಲ್ಲ. ಜಗತ್ತು ಬೇರೆಯವರನ್ನು ದೂಷಿಸುತ್ತದೆ, ಕರುಣೆ ರಹಿತವಾಗಿಯೇ ವರ್ತಿಸುತ್ತದೆ. ಆದರೆ, ನಾವು ಅದನ್ನೆಲ್ಲ ಸಹಿಸಿಕೊಳ್ಳಬೇಕು. ಏಕೆಂದರೆ ಜಗತ್ತು ಇರುವುದೇ ಹಾಗೆ, ಅಥವಾ ಜಗತ್ತು ಇರುವ ರೀತಿಯನ್ನು ನಾವು ಒಪ್ಪಿಕೊಳ್ಳಬೇಕು. ನಾವು ನಮ್ಮ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದರೆ ಅಥವಾ ಅರಿತು ನಡೆದುಕೊಳ್ಳುತ್ತಿದ್ದರೆ ಜಗತ್ತು ನಮ್ಮ ಬಗ್ಗೆ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.
ಉತ್ತರದ ಅಂಗಳದಲ್ಲಿ ಕುಳಿತು 'ಕೆಜಿಎಫ್' ರಾಕಿಂಗ್ ಸ್ಟಾರ್ ಯಶ್ ಹೇಳಿದ ಮಾತು ಕೇಳಿ ಹೌಹಾರಿದೆ ಜಗತ್ತು!
ನಮ್ಮ ಲೈಫ್ ನಾವು ನಡೆಸುತ್ತಿದ್ದರೆ, ನಾವು ನಮ್ಮ ವಿಚಾರ ಹಾಗೂ ಭಾವನೆಗೆ ಗುಲಾಮರಾಗಿ ಇರದಿದ್ದರೆ ಆಗ ಜೀವನ ಚೆನ್ನಾಗಿಯೇ ಇರುತ್ತದೆ. ಬೇರೆಯವರು ನಮ್ಮ ಬಗ್ಗೆ ಏನು ಚಿಂತಿಸುತ್ತಾರೆ, ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬದನ್ನು ಅವರಿಗೆ ಬಿಟ್ಟುಬಿಡಿ. ಆದರೆ, ಯಾರು ಹೇಗೇ ನಡೆಸಿಕೊಂಡರು ನಾವು ನಮ್ಮ ಥಾಟ್ ಮತ್ತು ಎಮೋಶನ್ಸ್‌ಗಳಿಗೆ ದಾಸರಾಗದೇ ಕೇವಲ ಲೈಫ್ ಬಗ್ಗೆ ಕಮಿಟ್ ಆಗಿದ್ದರೆ ಲೈಫ್ ಫೇರ್ ಮಾತ್ರ ಅಲ್ಲ, ಫೆಂಟಾಸ್ಟಿಕ್ ಆಗಿರುತ್ತದೆ' ಎಂದಿದ್ದಾರೆ ಸದ್ಗುರು. ಈ ಉತ್ತರದಿಂದ ನಟಿ ಸಮಂತಾ ಸಮಾಧಾನ ಹಾಗೂ ಖುಷಿ ಕಂಡುಕೊಂಡಿದ್ದಾರೆ ಎನ್ನಬಹುದು.
ಸ್ಟಾರ್ ನಟಿ ಸಿನಿಮಾ ನಟನೆಗೂ ಮೊದಲು ಯಾಕೆ ನೆಲದ ಮೇಲಿನ ವಾಂತಿ ಒರೆಸಿದ್ದರು, ಕಸ ಗುಡಿಸಿದ್ದರು?
ಅಂದಹಾಗೆ, ನಟಿ ಸಮಂತಾ, ಸದ್ಗುರು ಅವರ ಕೊಯಮುತ್ತೂರಿನ 'ಈಶಾ' ಫೌಂಡೇಶನ್ ಗೆ ಆಗಾಗ ಭೇಟಿ ನೀಡುತ್ತಾರೆ. ಸದ್ಗುರು ಅವರಿಂದ ದೀಕ್ಷೆ ಪಡೆದಿರುವ ನಟ ಸಮಂತಾ, ಬಹಳಷ್ಟು ಬಾರಿ 'ಶಿವರಾತ್ರಿ'ಯಂದು ಕೂಡ ಹೋಗಿ ಅಲ್ಲಿ ರಾತ್ರಿ ಪೂರ್ತಿ ಜಾಗರಣೆಯಲ್ಲಿ ನಿರತರಾಗಿದ್ದಾರೆ. ಸಮಂತಾ, ಕಾಜಲ್ ಅಗರ್‌ವಾಲ್, ತಮನ್ನಾ, ಹರಿಪ್ರಿಯಾ ಹಾಗೂ ಇನ್ನೂ ಹಲವು ನಟಿಯರು, ಸೆಲೆಬ್ರಿಟಿಗಳು ಸದ್ಗುರು ಅವರನ್ನು ಫಾಲೋ ಮಾಡುತ್ತಾರೆ, ಈಶಾಗೆ ಭೇಟಿ ನೀಡುತ್ತಾರೆ.