Valentines Day 2022: ಪ್ರೇಮಿಗಳ ದಿನಾಚರಣೆಗೆ ಸಿಲಿಕಾನ್ ಸಿಟಿ ಸಜ್ಜು!
ಪ್ರೀತಿಯ ಸಂಕೇತವಾಗಿ ಪ್ರೇಮಿಗಳ ದಿನ ಆಚರಿಸಲು ಉದ್ಯಾನ ನಗರಿಯ ಸಜ್ಜಾಗಿದೆ. ಯುವಕ-ಯುವತಿಯರು ಪ್ರೀತಿ ಪಾತ್ರರೆದುರು ಪ್ರೇಮ ನಿವೇದನೆ, ಭಾವನೆ ವ್ಯಕ್ತಪಡಿಸಲು ಫೆ.14 ಸೂಕ್ತವೆಂದು ಭಾವಿಸುತ್ತಾರೆ. ಫೆಬ್ರುವರಿ ವಿವಾಹ ಋತುವಾದ್ದರಿಂದ ನವದಂಪತಿಗಳು ತಮ್ಮ ಸಂಗಾತಿಯನ್ನು ಖುಷಿಪಡಿಸಲು ಉಡುಗೊರೆಗಳ ಮೊರೆ ಹೋಗಿದ್ದಾರೆ.
ಶಂಕರ್ ಎನ್.ಪರಂಗಿ
ಬೆಂಗಳೂರು (ಫೆ.12): ಪ್ರೀತಿಯ ಸಂಕೇತವಾಗಿ ಪ್ರೇಮಿಗಳ ದಿನ ಆಚರಿಸಲು ಉದ್ಯಾನ ನಗರಿಯ ಸಜ್ಜಾಗಿದೆ. ಯುವಕ-ಯುವತಿಯರು ಪ್ರೀತಿ ಪಾತ್ರರೆದುರು ಪ್ರೇಮ ನಿವೇದನೆ, ಭಾವನೆ ವ್ಯಕ್ತಪಡಿಸಲು ಫೆ.14 ಸೂಕ್ತವೆಂದು ಭಾವಿಸುತ್ತಾರೆ. ಫೆಬ್ರುವರಿ ವಿವಾಹ ಋತುವಾದ್ದರಿಂದ ನವದಂಪತಿಗಳು ತಮ್ಮ ಸಂಗಾತಿಯನ್ನು ಖುಷಿಪಡಿಸಲು ಉಡುಗೊರೆಗಳ ಮೊರೆ ಹೋಗಿದ್ದಾರೆ.
ರಾಜಧಾನಿ ಮಾರುಕಟ್ಟೆಗಳಿಗೆ ವಿವಿಧ ತಳಿಯ 40 ಬಣ್ಣಗಳ ಗುಲಾಬಿ ಹೂಗಳು, ಬಗೆಬಗೆಯ ಬೊಕ್ಕೆಗಳು, ಹೃದಯ ಆಕಾರದ ಕೇಕ್‌ಗಳು, ಚಾಕೋಲೇಟ್‌ಗಳು ಪ್ರೇಮಿಗಳ ಕೈ ಬೀಸಿ ಕರೆಯುತ್ತಿವೆ. ಟೆಡ್ಡಿಬೇರ್, ಆಕರ್ಷಕ ವಿನ್ಯಾಸದ ಗ್ರೀಟಿಂಗ್ಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. .100ರಿಂದ ಸಾವಿರಾರು ಬೆಲೆಯ ಗಿಫ್ಟ್‌ಗಳು ಬಿಕರಿಗೊಳ್ಳುತ್ತಿವೆ.
ಫೆ.14 ಸಮೀಪಿಸುತ್ತಿದ್ದು ಹೋಟಲ್, ಮಾಲ್, ರೆಸ್ಟೋರೆಂಟ್‌ಗಳು ಅಲಂಕಾರಗೊಳ್ಳುತ್ತಿವೆ. ಜಯನಗರ, ಚಾಮರಾಜಪೇಟೆ, ಎಂ.ಜಿ.ರಸ್ತೆ, ಎಲೆಕ್ಟ್ರಾನಿಕ್ ಸಿಟಿಗಳಲ್ಲಿನ ಗಿಫ್ಟ್ ಸೆಂಟರ್‌ಗಳು, ಗುಲಾಬಿ ಮಾರುಕಟ್ಟೆ ಮತ್ತು ಮಳಿಗೆಗಳು ಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಕೊರೋನಾ ಭೀತಿ ಮಧ್ಯೆ ಪ್ರೇಮಿಗಳು, ಭಾವಿ ದಂಪತಿಗಳು ವಿಶಿಷ್ಟ ಉಡುಗೊರೆಗಳ ಖರೀದಿಯ ಸಂಭ್ರಮದಲ್ಲಿದ್ದಾರೆ.
Valentines Day: ಪ್ರೇಮಿಗಳ ಮನಸ್ಸು ಕದಿಯಬೇಕೆಂದ್ರೆ ರಾಶಿಗನುಗುಣವಾಗಿ ಗಿಫ್ಟ್ ನೀಡಿ
ವಿಭಿನ್ನ ಚಾಕೊಲೇಟ್‌ಗಳು ಮಾರ್ಕೆಟ್‌ಗೆ: ಪ್ರೇಮಿಗಳಿಗೆ ಅತ್ಯಾಪ್ತವಾಗುವಂತ ಪ್ರೀತಿಯ ಸಂಕೇತವಾದ ತಾಜಮಹಲ್ ಚಾಕೊಲೇಟ್ (.1499) ಮತ್ತು ವಿ-ಹಾರ್ಟ್ ಚಾಕೊಲೇಟ್ ಸಿದ್ಧವಾಗಿವೆ. ಈ ವರ್ಷ ವಿಶೇಷವಾಗಿ ಕಾಂಬೋ ರೀತಿಯ ಗಿಫ್ಟ್ ಬಾಕ್ಸ್ ಹಾರ್ಟ್ ಚಾಕೊಲೇಟ್ಸ್ (.800-1,000) ಅನ್ನು ಯುವಕ-ಯುವತಿಯರು ಕೊಂಡು ಇಷ್ಟಮನಸುಗಳಿಗೆ ನೀಡಿ ಪ್ರೀತಿ ಹಂಚಿಕೊಳ್ಳಬಹುದು. ಅಲ್ಲದೇ ಟೆಡ್ಡಿಬೇರ್, ಕುಪಿಡ್ ಬಾರ್, ಹಾರ್ಟ್‌ಟೆಡ್ಡಿ, ಹೃದಯ ಆಕಾರದ ಬಿ ಮೈ ವ್ಯಾಲೆಂಟೇನ್, ವ್ಯಾಲೆಂಟೈನ್ ಪಿನಟ್‌ಹಾಟ್ಸ್‌ರ್, ಬಿ ಮೈ ಗಿಫ್ಟ್ ಹ್ಯಾಂಪರ್ ಇನ್ನಿತರ ಚಾಕೊಲೇಟ್‌ಗಳು ಗಮನ ಸೆಳೆಯುತ್ತಿವೆ.
ಪ್ರೀತಿ ಶಾಶ್ವತವೆಂಬಂತೆ ಬಿಂಬಿಸುವ ಫಾರ್ ಎವರ್ ಹೋಲ್ಡಿಂಗ್ಸ್ ಹಾರ್ಟ್ ಕೇಕ್, ನೈನ್ ಹಾಟ್ಸ್‌ರ್ ಕೇಕ್, ಬೆಲ್ಜಿಯಂ ಟ್ರಫಲ್, ಕಿವಿಕೀಸ್‌ಫ್ರೂಟ್ಸ್ ಕೇಕ್, ಹಸಲ್‌ನಟ್, ಐರಿಸ್ ಕಾಫಿ ಹಾಗೂ ಇನ್ನಿತರ ಬಣ್ಣ, ಆಕರ್ಷಕ ಕೇಕ್‌ಗಳು(.90-2,500) ಸದಾಶಿವನಗರ, ಎಂ.ಜಿ.ರಸ್ತೆ, ಕೋರಮಂಗಲದ ಮಳಿಗೆಗಳಲ್ಲಿ ಲಭ್ಯವಿದೆ. ಫೆ.7ರಿಂದ ಶೇ.80ರಷ್ಟುಆನ್‌ಲೈನ್‌ನಲ್ಲೇ ವ್ಯಾಪಾರವಾಗುತ್ತಿದೆ. ಪ್ರೇಮಿಗಳು ಝೊಮ್ಯಾಟೊ, ಸ್ವಿಗ್ಗಿಯಲ್ಲೂ ಖರೀದಿಸಬಹುದು ಎಂದು ಸದಾಶಿವನಗರದ ಅಬ್ರಿ ಹಾಟ್ ಚಾಕೊಲೇಟ್ಸ್ ಮಳಿಗೆ ವ್ಯವಸ್ಥಾಪಕ ಚೇತನ್ ಶೆಟ್ಟಿತಿಳಿಸಿದರು.
ನಿತ್ಯ .60-70 ಲಕ್ಷ ಗುಲಾಬಿ ಮಾರಾಟ!: ಪ್ರೇಮಿಗಳ ದಿನ ಮತ್ತು ಮದುವೆ ಸೀಸನ್ ಪ್ರಯುಕ್ತ ರಾಜ್ಯದಲ್ಲಿ ಕೆಂಪುಗುಲಾಬಿ, ವೈಟ್, ಪಿಂಕ್ ವೈಟ್, ಪರ್ಪಲ್, ಡಾರ್ಕ್ ಪಿಂಕ್, ಹಳದಿ ಗುಲಾಬಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರೀತಿ ಪಾತ್ರರಿಗೆ ನೀಡುವ ಹೂಗಳ ಗುಚ್ಚ (ಬೊಕ್ಕೆ), ಗಿಫ್ಟ್ ಮತ್ತು ವೇದಿಕೆ ಅಲಂಕಾರ ಇನ್ನಿತರ ಬಳಕೆಗೆ ಹೆಬ್ಬಾಳದಲ್ಲಿನ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಿಂದ (ಐಎಫ್‌ಎಬಿ)ದೇಶದ ವಿವಿಧ ಮೆಟ್ರೋ ನಗರಗಳಿಗೆ ನಿತ್ಯ ಗುಲಾಬಿ ಸೇರಿದಂತೆ 40ಬಣ್ಣಗಳ 4.5-5ಲಕ್ಷ ಹೂಗಳು ರವಾನಿಸುತ್ತೇವೆ. ಬೇಡಿಕೆ ಹೆಚ್ಚಾಗಿದ್ದರಿಂದ ಸದ್ಯ ನಿತ್ಯ .60-70 ಲಕ್ಷ ವಹಿವಾಟು ನಡೆಯುತ್ತಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 2.5ಲಕ್ಷ ಹೂಗಳು ಮಾರಾಟದ ಜತೆಗೆ .30ಲಕ್ಷ ವಹಿವಾಟು ನಡೆಯುತ್ತಿತ್ತು.
Valentine Day offer ಪ್ರೀತಿ ಪಾತ್ರರಿಗೆ ನೀಡಲು ವಿಶೇಷ ಗಿಫ್ಟ್ ಆಫರ್ ಘೋಷಿಸಿದ VI!
14ಕ್ಕೆ ಇನ್ನಷ್ಟು ಬೇಡಿಕೆ: ಪ್ರೇಮಿಗಳ ದಿನ ಹಿನ್ನೆಲೆ ಶೇ.100ರಷ್ಟುಹೂಗಳ ಮಾರಾಟದಲ್ಲಿ ಶೇ.99ರಷ್ಟುಗುಲಾಬಿಗೇ ಬೇಡಿಕೆ ಇದೆ. .6-7 ರು.ಗೆ ಮಾರಾಟವಾಗುತ್ತಿದ್ದ ಗುಲಾಬಿ, ಇದೀಗ .14-16 ರು.ವರೆಗೆ ಮಾರಾಟವಾಗುತ್ತದೆ. ಫೆ.14ಕ್ಕೆ ಎಲ್ಲೆಡೆ ಹೂಗಳು ತಲುಪಬೇಕಾದ್ದರಿಂದ ಫೆ.12ರಂದೇ ಗುಲಾಬಿಯ ಬೇಡಿಕೆ, ಬೆಲೆ ಮತ್ತಷ್ಟುಹೆಚ್ಚಾಗಲಿದೆ. ಅಂದು ಅತ್ಯಧಿಕ ವಹಿವಾಟು ನಿರೀಕ್ಷಿಸಲಾಗಿದೆ ಎಂದು ಐಎಫ್‌ಎಬಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಪ್ರೇಮಿಗಳ ದಿನ ಪ್ರಯುಕ್ತ ನಗರದ ಮಾರುಕಟ್ಟೆಗಳಲ್ಲಿ ದರ ಹೆಚ್ಚಿದ್ದರು ಗುಲಾಬಿಗೆ ವಿಶೇಷ ಬೇಡಿಕೆ ಇದ್ದು, ಉತ್ತಮ ಗುಣಮಟ್ಟದ 1ಗುಲಾಬಿ .15-20 ಆಗಿದ್ದು, 20ಹೂಗಳ ಒಂದು ಬಂಚ್‌ಗೆ .300ನಷ್ಟಾಗಿದೆ. ಫೆ.14ಕ್ಕೆ ಹೂವಿನ ಬೇಡಿಕೆ ಮತ್ತು ಬೆಲೆ ಮತ್ತಷ್ಟುಹೆಚ್ಚಾಗುವ ಸಾಧ್ಯತೆ ಇದೆ.
- ಸುರೇಶ್, ವ್ಯಾಪಾರಿ