Asianet Suvarna News Asianet Suvarna News

7 ಲಕ್ಷ ಬೆಲೆಯ ಹಾವು ವೈಷ್ಣವಿ ಮೈ ಮೇಲೆ; ವಿಚಿತ್ರ ಪ್ರಾಣಿಗಳನ್ನು ನೋಡಿ, ವಿಡಿಯೋ ವೈರಲ್

ಹೊಸ ಅನುಭವ ಬೇಕೆಂದು ಹಾವನ್ನು ಮೈ ಮೇಲೆ ಹಾಕಿಕೊಂಡ ಕಿರುತೆರೆ ನಟಿ ವೈಷ್ಣವಿ. ಯೂಟ್ಯೂಬ್‌ನಲ್ಲಿ ವಿಡಿಯೋ ವೈರಲ್....

Vaishnavi Gowda Rb visits Reptile shop video with 7 lakh blood python vcs
Author
First Published Jan 21, 2023, 4:37 PM IST

ಅಗ್ನಿಸಾಕ್ಷಿ ಸುಂದರಿ, ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಹೊಸ ವರ್ಷದಿಂದ ಹೊಸ ರೀತಿಯಲ್ಲಿ ವಿಡಿಯೋ ಮಾಡುವೆ ಎಂದು ಹೇಳಿ ಪೆಟ್‌ ಶಾಪ್‌ಗೆ ಭೇಟಿ ನೀಡಿದ್ದಾರೆ. ನಾಯಿ, ಬೆಕ್ಕು ಇರುತ್ತದೆ ಎಂದುಕೊಂಡು ಹಾವು ನೋಡಿ ಶಾಕ್ ಆಗಿದ್ದಾರೆ.  

'ಇವತ್ತು ನಾನೊಂದು ಇಂಟ್ರೆಸ್ಟಿಂಗ್ ವಿಡಿಯೋ ಮಾಡುತ್ತಿರುವೆ. ಎಕ್ಸಾಟಿಕ್ ಪೆಟ್‌ ಶಾಪ್‌ಗೆ ಭೇಟಿ ನೀಡುತ್ತಿರುವೆ. ಏಕೆಂದರೆ ನನಗೆ ಪೆಟ್‌ಗಳು ಅಂದ್ರೆ ತುಂಬಾನೇ ಇಷ್ಟ. ಮೊದಲ ಸಲ ನಾನು ಹೋಗುತ್ತಿರುವೆ. ಜೀವನದಲ್ಲಿ ಹೊಸ experianceಗಳನ್ನು ಮಾಡಬೇಕು ಅಂತಿರುವೆ. ಆ ಲಿಸ್ಟ್‌ಗೆ ಇದು ಸೇರಿಕೊಳ್ಳುತ್ತದೆ.' ಎಂದು ಹೇಳುವ ಮೂಲಕ ವೈಷ್ಣವಿ ವಿಡಿಯೋ ಆರಂಭಿಸುತ್ತಾರೆ. ಆದರೆ ಅಂಗಡಿಗೆ ಭೇಟಿ ನೀಡಿದ ಮೇಲೆ ತಿಳಿಯುತ್ತದೆ ಅದು ಪೆಟ್ ಶಾಪ್ ಅಲ್ಲ reptile shop ಎಂದು. ಅಲ್ಲಿದ್ದ ಹಾವುಗಳನ್ನು ನೋಡಿ ವೈಷ್ಣವಿ ಶಾಕ್ ಆಗಿದ್ದಾರೆ. 

ಅಂಗಡಿಯಲ್ಲಿದ್ದ  ಹಾವು ಮತ್ತು ವಿಚಿತ್ರ ವಿಚಿತ್ರ ಪ್ರಾಣಿಗಳನ್ನು ನೋಡಿ ಭಯದಿಂದ ವೈಷ್ಣವಿ ಬಾಗಿಲಿನ ಬಳಿ ನಿಂತು ಬಿಟ್ಟಿದ್ದಾರೆ. 'ಚಿಕ್ಕ ವಯಸ್ಸಿನಲ್ಲಿ ನನ್ನ ಕನಸಿನಲ್ಲಿ ಹಾವು ಬರುತ್ತಿತ್ತು ಆಗ ನಿದ್ರೆಯಿಂದ ಎದ್ದು ಬಿಡುತ್ತಿದ್ದೆ' ಎಂದು ವೈಷ್ಣವಿ ಹೇಳಿದ್ದಾರೆ. ಅಂಗಡಿ ಮಾಲೀಕರು ಹಾವು ಹಿಡಿದುಕೊಳ್ಳಲು ಕೈಗೆ ಕೊಡುತ್ತಿದ್ದಂತೆ ವೈಷ್ಣವಿ ಅಲ್ಲಿಂದ ಓಡಿದ್ದಾರೆ. ದೊಡ್ಡ ಗಾತ್ರದ blood pythonನ ವೈಷ್ಣವಿ ಹೆಗಲೆ ಮೇಲೆ ಹಾಕಿದ್ದಾರೆ. ಎಷ್ಟು ಸಲ ಕೇಳಿದ್ದರೂ ಹಾವು ತೆಗೆದುಕೊಳ್ಳದೆ ಯೂಟ್ಯೂಬ್ ತಂಡ ವಿಡಿಯೋ ಮಾಡುತ್ತಿದ್ದರು. 

Vaishnavi Gowda Rb visits Reptile shop video with 7 lakh blood python vcs

'ಶೂಟಿಂಗ್ ಸ್ಥಳಕ್ಕೆ ಹಾವು ಕರೆದುಕೊಂಡು ಬಂದರೂ 200 ಕಿಲೋಮೀಟರ್‌ ದೂರ ನಿಲ್ಲುವೆ. ಇದೇ ಮೊದಲು ನನ್ನ ಮೈ ಮೇಲೆ ಹಾಕು ಹಾಕಿಸಿಕೊಂಡಿರುವುದು. ಪ್ರತಿ ಸಲ ನಾನು ಹೇಳುವ ಹಾಗೆ  ಪ್ರತಿಯೊಂದು ಹೊಸ ಎಕ್ಸ್‌ಪೀರಿಯನ್ಸ್‌ನಿಂದ ಹೊಸ ಹೊಸ ವಿಚಾರಗಳು ಕಲಿಯುವ ಅವಕಾಶ ಸಿಗುತ್ತದೆ. ಜೆಪಿ ನಗರದಲ್ಲಿರುವ ಕರ್ನಾಟಕ ಅಕ್ವೇರಿಯಂಗೆ ನಾನಿವತ್ತು ಬಂದಿರುವುದು' ಎಂದು ಹೇಳಿದ್ದಾರೆ.  

ಯೂಟ್ಯೂಬ್‌ ವಿಡಿಯೋಗಳು ವೈರಲ್: 

ಯುಟ್ಯೂಬ್‌ ಲೋಕದಲ್ಲಿ ಸಖತ್ ಬ್ಯುಸಿಯಾಗಿರುವ ವೈಷ್ಣವಿ ಮೊದಲ ಬಾರಿ ಪೀರಿಯಡ್ಸ್‌ ಬಗ್ಗೆ ಜನರು ಏನೆಲ್ಲಾ ತಿಳಿದುಕೊಳ್ಳ ಬೇಕು ಎಂದು ರಿವೀಲ್ ಮಾಡಿದ್ದಾರೆ. ಮಡಿವಂತಿಕೆ ಮಾಡಬೇಡಿ ಏಕೆಂದರೆ ಈಗಲ್ಲೂ ನಾನು ಪೀರಿಯಡ್ಸ್‌ ಆಗಿದೆ ಎಂದು ಹೇಳುವುದಕ್ಕೆ ಸಂಕೋಚ ಆಗುತ್ತದೆ ಎಂದಿದ್ದಾರೆ. 

ಬಿಸಿ ನೀರಿಗೆ ನಿಂಬೆ ರಸ slow poison: ವೈಷ್ಣವಿ ಡಯಟ್‌ ಗುಟ್ಟು ರಟ್ಟು

'ನಮ್ಮ ಸ್ಕೂಲ್‌ನಲ್ಲಿ ಸೆಕ್ಸ್‌ ಎಜುಕೇಷನ್‌ ಇತ್ತು ಪ್ರತಿಯೊಂದನ್ನು ನಮಗೆ ಹೇಳಿಕೊಟ್ಟಿದ್ದರು. ಒಂದು ವಯಸ್ಸು ಆದ್ಮೇಲೆ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ ಎಂದು. ನನಗೆ ನೆನಪಿದೆ. ಮೊದಲ ಸಲ ಪೀರಿಯಡ್ಸ್ ಆದಾಗ ನನಗೆ ಎಕ್ಸಾಂ ನಡೆಯುತ್ತಿತ್ತು ನಾನು ಮಲಗಿಕೊಂಡು ಓದುವುದು.  ಓದುತ್ತಾ ಓದುತ್ತಾ ನಾನು ಮಲಗಿಕೊಂಡು ಬಿಟ್ಟಿದ್ದೀನಿ. ಡಿಸೆಂಬರ್‌ ಸಮಯದಲ್ಲಿ ಆಗಿದ್ದು ಆಗ ಸಖತ್‌ ಚಳಿ ಇತ್ತು...ಟ್ರ್ಯಾಕ್ ಪ್ಯಾಂಡ್‌, ಸ್ಕರ್ಟ್‌, ಸಾಕ್ಸ್‌ ಜಾಕೆಟ್‌ ತುಂಬಾ ಬಟ್ಟೆ ಹಾಕಿಕೊಂಡಿದ್ದೆ. ಏನೋ ಒಂದು ರೀತಿ ಹಿಂಸೆ ಆಗುತ್ತಿತ್ತು, ಲೂಗೆ ಹೋದೆ ಆಗ ರಕ್ತ ನೋಡಿ ಗಾಬರಿ ಆದೆ. ಈ ವಿಚಾರ ತಾಯಿಗೆ ಹೇಳಬಾರದಂತೆ, ನನಗೆ ಹೇಳಬೇಡ ಬೇರೆ ಅವರಿಗೆ ಹೇಳು ಎಂದು ನಮ್ಮ ಮನೆ ಕೆಲಸದವರಿಗೆ ನಾನು ಮೊದಲು ಈ ವಿಚಾರ ತಿಳಿಸಿದೆ' ಎಂದು ವೈಷ್ಣವಿ ಹೇಳಿದ್ದಾರೆ.

 

ಚಿಕ್ಕ ವಯಸ್ಸಿನಲ್ಲಿ ದಪ್ಪ ಇದ್ದೆ ಅಂತ ಬಾಡಿ ಶೇಮ್ ಮಾಡಿದ್ದಾರೆ ಎಂದ ನಟಿ ವೈಷ್ಣವಿ!

'ನಮ್ಮ ಮನೆಯಲ್ಲಿ ಈ ಸಂಪ್ರದಾಯವನ್ನು ಗಂಭೀರವಾಗಿ ಮಾಡುತ್ತಾರೆ. 16 ದಿನ ಮನೆಯಲ್ಲಿ ಕೂರಬೇಕು. ದಿನ ಬೆಳಗ್ಗೆ ಎಣ್ಣಿ ಕುಡಿಯಬೇಕು, ಹಸಿ ಮೊಟ್ಟೆ ಕುಡಿಬೇಕು ಅದಾದ ಮೇಲೆ ಉದ್ದಿನದು ಮತ್ತು ತುಪ್ಪದು ಏನೋ ಮಾಡ್ತಾರೆ ಅದು ಮಾಡ್ಬೇಕು. ಪ್ರತಿ ದಿನ ಅರಿಶಿಣದ ನೀರಿನಲ್ಲಿ ಸ್ನಾನ ಮಾಡಬೇಕು. 16 ಆದ್ಮೇಲೆ ಮನೆಯಲ್ಲಿ ಹೋಮ ಮಾಡಿಸುತ್ತಾರೆ. ಈ ಸಮಯದಲ್ಲಿ ನೀವು ಯಾರನ್ನೂ ನೋಡುವಂತಿಲ್ಲ ಯಾರು ನಿಮ್ಮನ್ನು ನೋಡುವಂತಿಲ್ಲ ಅದರಲ್ಲೂ ಹುಡುಗರು ನೋಡುವಂತಿಲ್ಲ. ಏನ್ ಏನೋ ಪೂಜೆ ಮಾಡಿ ತೆಂಗಿನ ಗರಿಯಲ್ಲಿ ಮನೆ ಕಟ್ಟಿರುತ್ತಾರೆ ಅದರಿಂದ ಹೊರಗೆ ಬರುವಂತಿಲ್ಲ ಟಿವಿ ನೋಡಬಾರದು ಡಿಸ್ಟರ್ಬ್‌ ಆಗಬಾರದು ಅಂತ ಹೇಳ್ತಾರೆ. ನಮ್ಮ ಮನೆಯಲ್ಲಿ ಇದೆಲ್ಲಾ ಫಾಲೋ ಮಾಡಿದ್ದರು 16 ದಿನ ಮುಗಿಯಲಿ ಅಂತ ಕಾಯುತ್ತಿದ್ದೆ' ಎಂದಿದ್ದಾರೆ ವೈಷ್ಣವಿ.

 

Follow Us:
Download App:
  • android
  • ios