Asianet Suvarna News Asianet Suvarna News

ಸೆ.17ಕ್ಕೆ Kabza ಟೀಸರ್‌ ಬಿಡುಗಡೆ!

ಕನ್ನಡದ ಪ್ಯಾನ್‌ ಇಂಡಿಯಾ ಚಿತ್ರ ಸದ್ದು ಮಾಡಲಾರಂಭಿಸಿದೆ. ಕಬ್ಜ ಟೀಸರ್ ರಿಲೀಸ್‌ಗೆ ಸಜ್ಜಾಗುತ್ತಿದೆ.......

Upendra Sudeep Kabza teaser release on september 17th vcs
Author
First Published Sep 12, 2022, 8:55 AM IST

ಇಬ್ಬರು ಪ್ಯಾನ್‌ ಇಂಡಿಯಾ ಸ್ಟಾರ್‌ ನಟರಾದ ಉಪೇಂದ್ರ, ಸುದೀಪ್‌ ಹಾಗೂ ಬಹುಭಾಷಾ ನಟಿ ಶ್ರೀಯಾ ಶರಣ್‌ ಅವರು ನಟಿಸಿರುವ ‘ಕಬ್ಜ’ ಚಿತ್ರದ ಟೀಸರ್‌ ಇದೇ ಸೆ.17ಕ್ಕೆ ಬಿಡುಗಡೆ ಆಗುತ್ತಿದೆ. ಈ ನಿಟ್ಟಿನಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಆರ್‌ ಚಂದ್ರು ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಸೆ.18ಕ್ಕೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಟೀಸರ್‌ ಬಿಡುಗಡೆ ಆಗುತ್ತಿದ್ದು, ಎರಡ್ಮೂರು ವರ್ಷಗಳಿಂದ ಶೂಟಿಂಗ್‌ ಅಖಾಡದಲ್ಲಿರುವ ‘ಕಬ್ಜ’ ಚಿತ್ರದ ಮೇಕಿಂಗ್‌, ದೃಶ್ಯಗಳು ಹೇಗಿರಬಹುದು ಎನ್ನುವ ಕುತೂಹಲ ಉಪ್ಪಿ ಅಭಿಮಾನಿಗಳು ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

ಚಿತ್ರದ ಸಂಕಲನ ಹಂತದಲ್ಲೇ ಎಡಿಟಿಂಗ್‌ ಸ್ಟುಡಿಯೋದಲ್ಲಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದ ಟೆಕ್ನಿಕಲ… ಹೆಡ್‌ ಸಿ ವಿ ರಾವ್‌ ಹಾಗೂ ನಿರ್ದೇಶಕ ರಾಜಮೌಳಿ ಅವರ ತಂಡ ಚಿತ್ರದ ವಿಷ್ಯುವಲ್‌ ನೋಡಿ ಮೆಚ್ಚಿಕೊಂಡಿರುವುದು ಈ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟುಹೆಚ್ಚಿಸಿದೆ. ‘ಕೆಜಿಎಫ್‌’ ನಂತರ ಕನ್ನಡದಲ್ಲಿ ಬರುವ ಪ್ಯಾನ್‌ ಇಂಡಿಯಾ ಚಿತ್ರಗಳ ಬಗ್ಗೆ ಬಾಲಿವುಡ್‌ ಸೇರಿದಂತೆ ಬೇರೆ ಭಾಷೆಯ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಅದರಲ್ಲೂ ದೃಶ್ಯ ವೈಭವಕ್ಕೆ ದೊಡ್ಡ ದಾರಿ ತೋರಿಸಿರುವ ‘ಕೆಜಿಎಫ್‌’ ಹಾದಿಯಲ್ಲಿ ಅದೇ ಮೇಕಿಂಗ್‌, ವಿಷ್ಯುವಲ್‌ ಕ್ವಾಲಿಟಿಯೊಂದಿಗೆ ‘ಕಬ್ಜ’ ಕೂಡ ಮೂಡಿ ಬರುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಗೆ ಮತ್ತೊಂದು ಕಾರಣ. ಅಲ್ಲದೆ ಅತಿ ಹೆಚ್ಚು ಭಾಷೆಗಳಲ್ಲಿ ತಯಾರಾಗುತ್ತಿರುವ ಕನ್ನಡದ ‘ಕಬ್ಜ’ ಚಿತ್ರಕ್ಕೆ ಈಗಾಗಲೇ ಬಾಲಿವುಡ್‌ನಿಂದ ಬಹು ಬೇಡಿಕೆ ಬಂದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಚಿತ್ರದ ಟೀಸರ್‌ ಬಿಡುಗಡೆ ಆಗುತ್ತಿದ್ದು, ಟೀಸರ್‌ ಹೇಗಿರಬಹುದು ಎನ್ನುವ ಸಹಜ ಕುತೂಹಲ ಎಲ್ಲ ಭಾಷೆಯ ಪ್ರೇಕ್ಷಕರಲ್ಲೂ ಇದೆ.

Kabza Movie: ಉಪೇಂದ್ರ- ಸುದೀಪ್ ಕಾಂಬಿನೇಷನ್‌ನ 'ಕಬ್ಜ' ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್ ಶುರು!

ಇಲ್ಲಿವರೆಗೂ ಚಿತ್ರದ ಯಾವುದೇ ದೃಶ್ಯವನ್ನೂ ಬಿಡುಗಡೆ ಮಾಡದೆ ಬರೀ ಪೋಸ್ಟರ್‌ಗಳ ಮೂಲಕವೇ ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ಕನ್ನಡದ ‘ಕಬ್ಜ’, ಸೆ.17ರಂದು ಆನಂದ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಸಂಜೆ 5.4 ಗಂಟೆಗೆ ಚಿತ್ರದ ಟೀಸರ್‌ ಬಿಡುಗಡೆ ಆಗುತ್ತಿದೆ. ಟೀಸರ್‌ ಮೂಲಕ ಕನ್ನಡದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಸದ್ದು ಮಾಡಲಿದೆ. ಭೂಗತ ಲೋಕದ ಗ್ಯಾಂಗ್‌ ಸ್ಟರ್‌ ಕತೆಯನು ಹೇಳಲಿರುವ ‘ಕಬ್ಜ’ ಚಿತ್ರವು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪ್ಯಾನ್‌ ಇಂಡಿಯಾ ಗೆಲವು ತಂದುಕೊಡಲಿದೆ ಎನ್ನುವ ನಂಬಿಕೆ ಚಿತ್ರತಂಡದ್ದು.

Upendra Sudeep Kabza teaser release on september 17th vcs

7 ಭಾಷೆಗಳಲ್ಲಿ ಡಬ್ಬಿಂಗ್‌ ಆರಂಭ

ಉಪೇಂದ್ರ ಹಾಗೂ ಸುದೀಪ್‌ ನಟನೆಯ ಕಬ್ಜದ ಡಬ್ಬಿಂಗ್‌ ಆರಂಭವಾಗಿದೆ. ಏಳು ಭಾಷೆಗಳಲ್ಲಿ ಏಕಕಾಲಕ್ಕೆ ಡಬ್ಬಿಂಗ್‌ ನಡೆಯುತ್ತಿದೆ. ಒಂದು ಹಾಡಿನ ಚಿತ್ರೀಕರಣ ಬಿಟ್ಟು ಉಳಿದೆಲ್ಲ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಆರ್‌ ಚಂದ್ರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಶ್ರೀಯಾ ಶರಣ್‌ ಮುಖ್ಯಪಾತ್ರದಲ್ಲಿದ್ದಾರೆ. ಹಾಡೊಂದರಲ್ಲಿ ಬಾಲಿವುಡ್‌ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಆರ್‌ ಚಂದ್ರು ತಿಳಿಸಿದ್ದಾರೆ.

ನಿರ್ದೇಶಕ R ಚಂದ್ರು ಸ್ಪಷ್ಟನೆ:

. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್(Sudeep) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸುದೀಪ್ ಲುಕ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಕಬ್ಜ ಸಿನಿಮಾದಿಂದ ಕಿಚ್ಚ ಸುದೀಪ್ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದ್ದು ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರ್ದೇಶಕ ಆರ್ ಚಂದ್ರು ವಿರುದ್ಧ ಮುನಿಸಿಕೊಂಡಿರುವ ಸುದೀಪ್ ಚಿತ್ರದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಮಾತು ಕೇಳಿಬಂದಿದೆ. ಆದರೀಗ ಈ ಬಗ್ಗೆ ನಿರ್ದೇಶಕ ಆರ್ ಚಂದ್ರು(R Chandru) ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಚಂದ್ರು, ಇದೆಲ್ಲ ವದಂತಿ ಅಷ್ಟೆ, ಸುದೀಪ್ ಸಿನಿಮಾದಿಂದ ಹೊರನಡೆದಿಲ್ಲ ಎಂದು ಹೇಳಿದ್ದಾರೆ. 'ಎಲ್ಲರಿಗೂ ನಮಸ್ಕಾರ, ನಿನ್ನೆಯಿಂದ ಸುದೀಪ್ ಅವರು ಕಬ್ಜ ಚಿತ್ರತಂಡದಿಂದ ಹೊರಗೆ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ, ಆ ಸುದ್ದಿ ಸತ್ಯಕ್ಕೆ ದೂರವಾದದ್ದು. ಶ್ರೀ ಕಿಚ್ಚ ಸುದೀಪ್ ಅವರು ಈಗಾಗಲೇ ಕಬ್ಜ ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರು ಕಿವಿ ಕೊಡಬಾರದು' ಎಂದು ಹೇಳಿದ್ದಾರೆ. ಆರ್ ಚಂದ್ರು ಪ್ರತಿಕ್ರಿಯೆ ಅಭಿಮಾನಿಗಳಲ್ಲಿದ್ದ ಗೊಂದಲಕ್ಕೆ ತೆರೆಎಳೆದಿದೆ.

Follow Us:
Download App:
  • android
  • ios