Asianet Suvarna News Asianet Suvarna News

Kabza Movie: ಉಪೇಂದ್ರ- ಸುದೀಪ್ ಕಾಂಬಿನೇಷನ್‌ನ 'ಕಬ್ಜ' ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್ ಶುರು!

ನಿರ್ದೇಶಕ ಆರ್​.ಚಂದ್ರು ಆಕ್ಷನ್ ಕಟ್ ಹೇಳಿರುವ 80ರ ದಶಕದ ಡಾನ್ ಆಗಿ ಕಾಣಿಸಿಕೊಳ್ಳುತ್ತಿರುವ ರಿಯಲ್ ಸ್ಟಾರ್​ ಉಪೇಂದ್ರ ಅಭಿನಯದ ಕಬ್ಜ ಚಿತ್ರದ ಡಬ್ಬಿಂಗ್ ಏಕಕಾಲದಲ್ಲಿ ಏಳು ಭಾಷೆಗಳಲ್ಲೂ ಸದ್ದಿಲ್ಲದೆ ನಡೆಯುತ್ತಿದೆ. 

real star upendra starrer kabza movie dubbing starts in 7 languages gvd
Author
Bangalore, First Published Jun 8, 2022, 6:18 PM IST

ಸ್ಯಾಂಡಲ್‌ವುಡ್ ಮಾತ್ರವಲ್ಲದೇ, ಭಾರತೀಯ ಸಿನಿರಂಗದಲ್ಲಿ ಟೈಟಲ್​ನಿಂದಲೇ ಹವಾ ಸೃಷ್ಟಿಸಿರುವ ಚಿತ್ರ 'ಕಬ್ಜ' (Kabza). ನಿರ್ದೇಶಕ ಆರ್​.ಚಂದ್ರು (R.Chandru) ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ರಿಯಲ್ ಸ್ಟಾರ್​ ಉಪೇಂದ್ರ ನಟಿಸುತ್ತಿದ್ದು, 80ರ ದಶಕದ ಡಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಉಪೇಂದ್ರ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ನಟಿಸುತ್ತಿದ್ದಾರೆ. ಒಂದು ಹಾಡಿನ ಚಿತ್ರೀಕರಣ ಬಿಟ್ಟು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಏಕಕಾಲದಲ್ಲಿ ಏಳು ಭಾಷೆಗಳಲ್ಲೂ ಡಬ್ಬಿಂಗ್ ಸಹ ಸದ್ದಿಲ್ಲದೆ ನಡೆಯುತ್ತಿದೆ. ಅಲ್ಲದೇ ಕಬ್ಜ ಮಲ್ಟಿ ಸ್ಟಾರರ್​ ಚಿತ್ರವಾಗಿದ್ದು, ಉಪೇಂದ್ರ ಜೊತೆ 2ನೇ ಬಾರಿ ನಟ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ.

ಅದ್ದೂರಿ ಬಜೆಟ್​ನಲ್ಲಿ ಕಬ್ಜ ಚಿತ್ರ ಮೂಡಿಬರುತ್ತಿದ್ದು, ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಸೇರಿ ಒಟ್ಟು 7 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕಾಗಿ ಈಗಾಗಲೇ ಏಳೂ ಭಾಷೆಗಳಲ್ಲಿ ಡಬ್ಬಿಂಗ್​ ಕಾರ್ಯ ಆರಂಭಗೊಂಡಿದ್ದು, ಈ ಸುದ್ದಿಯನ್ನು ಚಿತ್ರದ ನಿರ್ದೇಶಕ ಆರ್.ಚಂದ್ರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಪ್​ಡೇಟ್​ ನೀಡಿದ್ದಾರೆ. ಒಂದೆಡೆ ಚಿತ್ರದ ಶೂಟಿಂಗ್​ ಬಹುತೇಕ ಮುಗಿದಿದ್ದು, ಇನ್ನೊಂದೆಡೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. 'ಕಬ್ಜ' ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಚಿತ್ರಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಅದ್ದೂರಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. 

Kabza Movie: ಶ್ರೀಯಾ ಶರಣ್‌ ದಂಪತಿ ಜೊತೆ ಉಪ್ಪಿ ಸೆಲ್ಫಿ

ಮೂಲಗಳ ಪ್ರಕಾರ, ಕನ್ನಡ, ತೆಲುಗು, ತಮಿಳು ಭಾಷೆಗಳಿಗೆ ಏಕಕಾಲದಲ್ಲಿ ಶೂಟಿಂಗ್ ಮಾಡಿ, ಮಿಕ್ಕ ಭಾಷೆಗಳಿಗೆ ಡಬ್ ಮಾಡುವ ಸಾಧ್ಯತೆಗಳಿವೆ. ಇನ್ನು ಕೆಜಿಎಫ್ ಖ್ಯಾತಿಯ ರವಿ ಬಸ್ರೂರು (Ravi Basruru), ಕಬ್ಜ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಎ.ಜೆ ಶೆಟ್ಟಿ ಈ ಚಿತ್ರಕ್ಕೆ ಕ್ಯಾಮರ್ ವರ್ಕ್ ಮಾಡುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಶಿವಕುಮಾರ್ ಅದ್ದೂರಿ ಸೆಟ್ಟುಗಳನ್ನ ಹಾಕಿದ್ದಾರೆ. ಬೃಹತ್​ ವೆಚ್ಚದಲ್ಲಿ ನಿರ್ದೇಶಕ ಆರ್ ಚಂದ್ರು ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಎಂ.ಟಿ.ಬಿ ನಾಗರಾಜ್ (M.T.B.Nagaraj) ಅರ್ಪಿಸುವ ಈ ಚಿತ್ರವು ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.

ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ವಿಶೇಷವಾಗಿ 'ಕಬ್ಜ' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ನಟಿ ಶ್ರೇಯಾ ಶರಣ್, ಬಾಲಿವುಡ್‌ನ ಖ್ಯಾತ ನಟ ನವಾಬ್‌ ಶಾ (Nawab Shah) ತಮಿಳಿನ 'ಐ' (I) ಚಿತ್ರದ ಖ್ಯಾತಿಯ ಕಾಮರಾಜನ್‌ (Kamarajan), ಟಾಲಿವುಡ್‌ ವಿಲನ್ ಜಗಪತಿ ಬಾಬು (Jagapati Babu), ರಾಹುಲ್‌ ದೇವ್‌, ಸುನಿಲ್‌ ಪುರಾಣಿಕ್‌, ಲಕ್ಷ್ಮೀಶ ಲಕ್ಷ್ಮಣ್‌ (ಲಕ್ಕಿ ಲಕ್ಷ್ಮಣ್‌),  ಪ್ರಮೋದ್‌ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Shriya Saran: ಉಪ್ಪಿ-ಕಿಚ್ಚ ಚಿತ್ರದಲ್ಲಿ ರಾಣಿಯಾದ ಬಹುಭಾಷಾ ತಾರೆ!

ನಮ್ಮ ಕನ್ನಡ ಚಿತ್ರರಂಗ ಇದೀಗ ದೊಡ್ಡ ಮಟ್ಟಕ್ಕೆ ಬೆಳದಿದೆ. ಹೀಗಾಗಿ ಸಿನಿರಸಿಕರ ನಿರೀಕ್ಷೆಗೆ ತಕ್ಕಂತೆ ನಾವು ಚಿತ್ರದ ಟೀಸರ್ ರಿಲೀಸ್ ಮಾಡಬೇಕಿದೆ. ಈಗಷ್ಟೇ ಚಿತ್ರದ ಡಬ್ಬಿಂಗ್ ಕಾರ್ಯಗಳು ಆರಂಭವಾಗಿದ್ದು, ಡಬ್ಬಿಂಗ್ ಮುಗಿದ ತಕ್ಷಣ ಟೀಸರ್ ಬಿಡುಗಡೆ ಮಾಡುತ್ತೇವೆ ಎಂದು  ಆರ್​. ಚಂದ್ರು ತಿಳಿಸಿದ್ದಾರೆ. 1947-1986 ನಡುವಿನ ಕಾಲಘಟ್ಟದ ಭೂಗತ ಲೋಕದ ಅಧ್ಯಾಯವನ್ನು 'ಕಬ್ಜ' ಚಿತ್ರ ತೆರೆದಿಡಲಿದೆ. ಇನ್ನು ಉಪೇಂದ್ರ ಮತ್ತು ಆರ್​. ಚಂದ್ರು ಕಾಂಬಿನೇಷನ್​ನಲ್ಲಿ ಈ ಹಿಂದೆ ಮೂಡಿಬಂದಿದ್ದ 'ಐ ಲವ್​ ಯೂ' ಸಿನಿಮಾ ಹಿಟ್​ ಆಗಿತ್ತು. ಈಗ 'ಕಬ್ಜ' ಮೂಲಕ ಮತ್ತೊಂದು ಗೆಲುವು ಪಡೆಯಲು ಚಿತ್ರತಂಡ ಪ್ರಯತ್ನಿಸುತ್ತಿದ್ದು, ಸಿನಿಮಾವನ್ನು ಬೆಳ್ಳಿತೆರೆ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
 

Follow Us:
Download App:
  • android
  • ios