ಎರಡು ಹಂತದ ಚಿತ್ರೀಕರಣ ಮುಗಿಸಿದ ಉಪ್ಪಿ ಸಿನಿಮಾ ತಂಡ.ಮೂರನೇ ಶೆಡ್ಯೂಲ್ ವಿದೇಶದಲ್ಲಿ.. 

ನಟ ಉಪೇಂದ್ರ ಹಾಗೂ ಹರಿಪ್ರಿಯಾ ಕಾಂಬಿನೇಶನ್‌ನ ‘ಲಗಾಮ್‌’ ಚಿತ್ರದ ಕಲರ್‌ಫುಲ್‌ ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಇದೇ ತಿಂಗಳ ಕೊನೆಯಿಂದ ಮೂರನೇ ಹಂತದ ಶೂಟಿಂಗ್‌ಗೆ ಚಿತ್ರತಂಡ ಹೊರಡಲಿದೆ. ವಿದೇಶದಲ್ಲಿ ಹಾಡುಗಳ ಚಿತ್ರೀಕರಣ ಮಾಡುವ ಪ್ಲಾನ್‌ ನಿರ್ದೇಶಕರಿಗಿದೆ.

‘ನಮ್ಮ ಚಿತ್ರಕ್ಕೆ ಶೇ.60 ಭಾಗ ಚಿತ್ರೀಕರಣ ಆಗಿದೆ. ಇನ್ನೂ 50 ದಿನ ಶೂಟಿಂಗ್‌ ಬಾಕಿ ಇದೆ. ಅನುಮತಿ ಪಡೆದು ಸ್ವಿಟ್ಜರ್‌ರ್ಲಾಂಡ್‌ಗೆ ಹೋಗಿ ಹಾಡು ಹಾಗೂ ಮಾತಿನ ಭಾಗದ ಕೆಲ ದೃಶ್ಯಗಳನ್ನು ಶೂಟ್‌ ಮಾಡಿಕೊಂಡು ಬರಲಾಗುವುದು. ಕತೆಯ ಪ್ರಕಾರ ವಿದೇಶದಲ್ಲಿ ಚಿತ್ರೀಕರಣ ಮಾಡುವ ಅಗತ್ಯ ಇದೆ’ ಎನ್ನುತ್ತಾರೆ ನಿರ್ದೇಶಕ ಕೆ ಮಾದೇಶ್‌. ಅವಿನಾಶ್‌, ರಂಗಾಯಣ ರಘು, ಸಾಧು ಕೋಕಿಲಾ, ಸಾಯಿಕುಮಾರ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಲಗಾಮು ಸಿನಿಮಾದಲ್ಲಿ ಹರಿಪ್ರಿಯಾ ಹಾಟ್ ಲುಕ್!

ಸಾಮಾಜಿಕ ಪಿಡುಗುಗಳಿಗೆ ಹೇಗೆ ಲಗಾಮು ಹಾಕಬಹುದು ಅನ್ನೋದನ್ನು ಈ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ. ಚಿತ್ರದಲ್ಲಿ ನಟಿ ಹರಿಪ್ರಿಯಾ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡದ್ದಾರೆ. 'ಉಪ್ಪಿಗಿಂತ ರುಚಿ ಬೇರೆಯಿಲ್ಲ' ಹಾಡಿನಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಸಾವಿರಾರು ಜನ ಇವರಿಬ್ಬರ ಕಾಂಬಿನೇಷನ್‌ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

"