Asianet Suvarna News Asianet Suvarna News

ಲಗಾಮು ಸಿನಿಮಾದಲ್ಲಿ ಹರಿಪ್ರಿಯಾ ಹಾಟ್ ಲುಕ್!

ಉಪೇಂದ್ರ, ಹರಿಪ್ರಿಯಾ ನಟನೆಯ ‘ಲಗಾಮು’ ಸಿನಿಮಾದ ಫೋಟೋಶೂಟ್ ವೀಡಿಯೋ ವೈರಲ್ ಆಗ್ತಿದೆ. ಇದರಲ್ಲಿ ಹರಿಪ್ರಿಯಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

Actress Hari Prriya opts hot look for kannada film Lagaam vcs
Author
Bangalore, First Published Jun 19, 2021, 9:29 AM IST

ಶೂಟಿಂಗ್‌ಗೆ ಅನುಮತಿ ನೀಡಿದ ತಕ್ಷಣ ‘ಲಗಾಮು’ ಟೀಮ್ ಫೀಲ್ಡಿಗಿಳಿಯಲಿದೆ. ಬೆಂಗಳೂರು, ಮೈಸೂರು ಹಾಗೂ ವಿದೇಶದಲ್ಲಿ ಚಿತ್ರೀಕರಣ ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ದೇಶಕ ಮಾದೇಶ್.

ಚಿತ್ರದ ಬಗ್ಗೆ ಮಾತನಾಡಿದ ಮಾದೇಶ್, ‘ಉಪೇಂದ್ರ ಅವರನ್ನು ಈ ಚಿತ್ರದಲ್ಲಿ ಕಾಮನ್ ಮ್ಯಾನ್ ಆಗಿ ತೋರಿಸಲಾಗಿದೆ. ಸಾಮಾನ್ಯ ವ್ಯಕ್ತಿಯಾಗಿದ್ದೇ ಹೇಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾರೆ ಅನ್ನುವ ಕತೆ ಈ ಚಿತ್ರದ್ದು. ಹರಿಪ್ರಿಯಾ ಇಡೀ ಸಿನಿಮಾದಲ್ಲಿ ಸಖತ್ ಬೋಲ್‌ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದಿದ್ದಾರೆ.

ಲಾಕ್‌ಡೌನ್‌ ಆದ್ಮೇಲೆ ಒಬ್ಬಳೇ ಶೂಟಿಂಗ್ ಹೋಗುತ್ತಿರುವೆ: ಹರಿಪ್ರಿಯಾ 

ಶೂಟಿಂಗ್‌ಗೆ ಪರ್ಮಿಶನ್ ಸಿಕ್ಕಿದ ಕೂಡಲೇ ಚಿತ್ರೀಕರಣ ನಡೆಯಲಿದೆ. ಸಾಮಾಜಿಕ ಪಿಡುಗುಗಳಿಗೆ ಹೇಗೆ ಲಗಾಮು ಹಾಕಬಹುದು ಅನ್ನೋದನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದೇವೆ.- ಮಾದೇಶ, ನಿರ್ದೇಶಕ

ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಫೊಟೋಶೂಟ್ ವೀಡಿಯೋವೊಂದನ್ನು ಪೋಸ್‌ಟ್ ಮಾಡಿದ್ದಾರೆ. ವೀಡಿಯೋ ಹಿನ್ನೆಲೆಯಲ್ಲಿ ಉಪೇಂದ್ರ ಅವರ ‘ಉಪ್ಪಿಗಿಂತ ರುಚಿ ಬೇರೆಯಿಲ್ಲ’ ಹಾಡು ಇದೆ. ಸಾವಿರಾರು ಜನ ಕಾಂಬಿನೇಶನ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತೆ ಬರಗೂರು ಚಿತ್ರದಲ್ಲಿ ಹರಿಪ್ರಿಯಾ ನಾಯಕಿ; ಸಿನಿಮಾ ಆಗಲಿದೆ ಕಸ್ತೂರ್ ಬಾ ವರ್ಸಸ್ ಗಾಂಧಿ ಕಾದಂಬರಿ! 

Follow Us:
Download App:
  • android
  • ios