ಕರಿಮಣಿ ಮಾಲೀಕ ನೀನಲ್ಲ... ಈ ವೈರಲ್ ಹಾಡು ಮಾಡಿದ್ದು ಉಪೇಂದ್ರ-ಪ್ರೇಮಾ ಲವ್ ಗಾಸಿಪ್‌ಗೆ ಬ್ರೇಕ್ ಹಾಕಲು?
ಓನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಹಾಡಿನ ಹಿಂದೆ ಇದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಗುರುಕಿರಣ್ ಬಿಚ್ಚಿಟ್ಟ ಸತ್ಯವಿದು....
ಕನ್ನಡ ಚಿತ್ರರಂಗ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಎರಡನೇ ಸಿನಿಮಾ 'ಉಪೇಂದ್ರ'. ಈ ಚಿತ್ರದ ಓನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಹಾಡು ಸಖತ್ ವೈರಲ್ ಆಗುತ್ತಿದೆ. ಉಪೇಂದ್ರ ಸಿನಿಮಾ ಬಿಡುಗಡೆಯಾಗಿ 25 ವರ್ಷಳು ಆಗಿದೆ. ಇದ್ದಕ್ಕಿದ್ದಂತೆ ಮತ್ತೆ ಟ್ರೆಂಡ್ ಆಗಲು ಕಾರಣ ಉತ್ತರ ಕರ್ನಾಟಕದ ಒಬ್ಬ ಯುವಕ. ಆತ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಂತೆ ಊರಿಗೆ ಊರಿಗೆ ಈ ಹಾಡಿಗೆ ರೀಲ್ಸ್ ಮಾಡಲು ಶುರು ಮಾಡಿದೆ. ಅಲ್ಲದೆ ಸಿಂಗಲ್ ಆಗಿರುವ ಹುಡುಗ ಹುಡುಗಿಯರ ಕಾಲರ್ ಟ್ಯೂನ್ ಕೂಡ ಆಗಿದೆ. ಈ ಹಾಡಿನ ಹಿಂದೆ ಇರುವ ರಹಸ್ಯವನ್ನು ಮ್ಯೂಸಿಕ್ ಕಂಪೋಸರ್ ಗುರುಕಿರಣ್ ರಿವೀಲ್ ಮಾಡಿದ್ದಾರೆ.
ರಿಯಲ್ ಸ್ಟಾರ್‌ಗೆ ಈ ಚಿತ್ರದಲ್ಲಿ ಪ್ರೇಮಾ, ರವೀನಾ ಟಂಡನ್ ಮತ್ತು ದಾಮಿನಿ ನಾಯಕಿಯರು. ಒಬ್ಬೊಬ್ಬರಿಗೂ ಒಂದೊಂದು ಹಾಡನ್ನು ಬರೆಲಾಗಿದೆ. ಕರಿಮಣಿ ಮಾಲೀಕ ನೀನಲ್ಲ ಅನ್ನೋ ಹಾಡನ್ನು ಪ್ರೇಮಾಗೆ ಬರೆದಿರುವುದಂತೆ. 'ಏನಿಲ್ಲ ಏನಿಲ್ಲ ಹಾಡು ಹುಟ್ಟುವುದಕ್ಕೊಂದು ಕಾರಣವಿದೆ. ಉಪೇಂದ್ರ ನಿರ್ದೇಶಕರಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು. ಆ ಬಳಿಕ ಹೀರೋ ಆಗಿ ಕಾಣಿಸಿಕೊಂಡಿದ್ದು. ಈ ಸಂದರ್ಭದಲ್ಲಿ ಉಪೇಂದ್ರ ಹಾಗೂ ನಟಿ ಪ್ರೇಮಾ ನಡುವೆ ಏನೋ ನಡೀತಿದೆ ಎಂದು ದೊಡ್ಡ ಗಾಸಿಪ್ ಶುರುವಾಗಿತ್ತು. ಈ ಗಾಸಿಪ್‌ಗೆ ಹಾಡಿನ ಮೂಲಕ ಉತ್ತರ ಕೊಡಬೇಕು ಎಂದು ಉಪ್ಪಿ ನಿರ್ಧರಿಸಿದ್ದರು. ಅದಕ್ಕಾಗಿ ಕಂಪೋಸ್ ಮಾಡಿದ ಹಾಡು ಇದು ಎಂದು ಗುರುಕಿರಣ್ ಕನ್ನಡ ವೆಸ್‌ಪೋರ್ಟಲ್ ಒಂದರಲ್ಲಿ ಈ ಹೇಳಿ ನೀಡಿದ್ದಾರೆ.
ಕಬ್ಜ ಚಿತ್ರಕ್ಕಾಗಿ ಸರ್ಕಾರಕ್ಕೆ 20 ಕೋಟಿ ರೂ. ಟ್ಯಾಕ್ಸ್ ಕಟ್ಟಿದ್ದೀನಿ: ಕೊಂಕು ಮಾತುಗಳಿಗೆ ಆರ್ ಚಂದ್ರು ಉತ್ತರ
'ಏನಿಲ್ಲ ಏನಿಲ್ಲ ಹಾಡಿಗೆ ರೀಸನ್ ಏನು ಅಂದರೆ ಆಗ ಒಂದು ರೂಮರ್ ಇತ್ತು. ಉಪೇಂದ್ರ ಮತ್ತು ಪ್ರೇಮಾ ಅವರ ಬಗ್ಗೆ ರೂಮರ್ ಇತ್ತು. ಅದನ್ನು ನಾವು ಸಾಂಗ್‌ನಲ್ಲಿ ಏನಿಲ್ಲ ಅಂತ ಹೇಳಿ ಬಿಡೋಣ. ಆಮೇಲೆ ಏನಿಲ್ಲ ಅಂದ್ರೆ ಎರಡು ಅರ್ಥ ಬರುತ್ತೆ. ಏನೇನಿಲ್ಲ? ಏನೇನೂ ಇಲ್ಲ? ಎಂದು ಎರಡು ಅರ್ಥ ಬರುತ್ತೆ. ಹಾಗೆ ಫಸ್ಟ್ ಟ್ಯೂಸ್ ಆಗಿದ್ದು ಈ ಪದದಿಂದ ಅಷ್ಟೆ. ಈ ಹಾಡು ಕಂಪೋಸ್ ಮಾಡಲು ಉಪ್ಪಿಯನ್ನೂ ಸೇರಿ 8 ರಿಂದ 10 ಮಂದಿ ಮಂಗಳೂರಿಗೆ ಹೋಗಿದ್ದು. ಅಲ್ಲೊಂದು ರೆಸಾರ್ಟ್‌ನಲ್ಲಿ ಕೂತು ಟ್ಯೂನ್ ಹಾಕುವುದಕ್ಕೆ ಶುರು ಮಾಡಿಕೊಂಡಿದ್ದು. ಆ ಸಮಯದಲ್ಲಿ ಮ್ಯೂಸಿಕ್ ಅನ್ನು ಪ್ರೊಫೆಷನ್ ಆಗಿ ತೆಗೆದುಕೊಂಡಿರಲಿಲ್ಲ. ಉಪೇಂದ್ರ ಅವರು ಫ್ರೆಂಡ್ ಆಗಿದ್ದರು ಅಂತ ಒಂದು ಸಿನಿಮಾ ಮಾಡಿದೆ. ಎ ಆದ್ಮೇಲೆ ಇನ್ನೋಂದು ಸಿನಿಮಾ ಉಪೇಂದ್ರ ಆಫರ್ ಬಂತು. ಇಡೀ ತಂಡ ಮಂಗಳೂರಿಗೆ ಹೋಗಿದ್ದೆವು. ಅಲ್ಲಿ 8ರಿಂದ 10 ದಿನ ಇದ್ದೆವು. ಒಂದಿಷ್ಟು ಕಂಪೋಸಿಂಗ್ ಎಲ್ಲವೂ ಅಲ್ಲೇ ನಡೀತಿತ್ತು. ಮಸ್ತ್ ಮಸ್ತ್ ಹುಡುಗಿ, ಏನಿಲ್ಲ ಏನಿಲ್ಲ ಅಲ್ಲೇ ಹುಟ್ಟಿಕೊಂಡಿದ್ದು' ಎಂದು ಗುರುಕಿರಣ್ ಹೇಳಿದ್ದಾರೆ.