ಕಬ್ಜ ಚಿತ್ರಕ್ಕಾಗಿ ಸರ್ಕಾರಕ್ಕೆ 20 ಕೋಟಿ ರೂ. ಟ್ಯಾಕ್ಸ್ ಕಟ್ಟಿದ್ದೀನಿ: ಕೊಂಕು ಮಾತುಗಳಿಗೆ ಆರ್ ಚಂದ್ರು ಉತ್ತರ
ಆರ್ ಸಿ ಸ್ಟುಡಿಯೋಸ್ ಉದ್ಘಾಟನೆ ಕಾರ್ಯಕ್ರಮ. 5 ಹೊಸ ಸಿನಿಮಾಗಳನ್ನು ಅನಾವರಣ ಮಾಡಿದ ಸಿಎಂ.
‘ಕಲ್ಲು ಹೊಡೆದರೆ ಲೈಟ್ ಕಂಬಕ್ಕಲ್ಲ, ಚಂದ್ರನಿಗೇ ಹೊಡೀಬೇಕು. ಕಬ್ಜ ಚಿತ್ರದ ಲ್ಯಾಂಡಿಂಗ್ ಕ್ರಾಶ್ ಆಯ್ತಷ್ಟೇ. ಮುಂದೆ ಚಂದ್ರಯಾನ 2 ಥರ ಲ್ಯಾಂಡ್ ಆಗ್ತೀನಿ. ಇಂಡಸ್ಟ್ರಿಗೆ ನೂರು ಕೋಟಿ ಹಾಕಿದವನು ನಾನು. ಕಬ್ಜ ಚಿತ್ರಕ್ಕಾಗಿ ಸರ್ಕಾರಕ್ಕೆ 20 ಕೋಟಿ ರು. ಟ್ಯಾಕ್ಸ್ ಕಟ್ಟಿದ್ದೀನಿ. ಹಿಂದಿನಿಂದ ನನ್ನ ಬಗ್ಗೆ ಕೊಂಕು ಮಾತನಾಡುವವರು ಇದನ್ನು ಗಮನಿಸಬೇಕು.’
- ಹೀಗೆ ವೀರಾವೇಷದ ನುಡಿಗಳನ್ನು ಆಡಿದ್ದು ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು. ಇವರ ಸಾರಥ್ಯದ ‘ಆರ್ ಸಿ ಸ್ಟುಡಿಯೋಸ್’ ಸಂಸ್ಥೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದರು. ಸಂಸ್ಥೆ ವತಿಯಿಂದ ಬಿಡುಗಡೆ ಆಗುತ್ತಿರುವ 5 ಹೊಸ ಸಿನಿಮಾಗಳ ಶೀರ್ಷಿಕೆಯನ್ನು ಸಿಎಂ ಅನಾವರಣ ಮಾಡಿದರು. ಸುದೀಪ್ ಹೀರೋ ಎನ್ನಲಾದ ‘ಪಿಓಕೆ’, ‘ಕಬ್ಜ 2’, ‘ಶ್ರೀರಾಮಬಾಣ ಚರಿತ’, ‘ಫಾದರ್’, ‘ಡಿಓಜಿ’ ಸಿನಿಮಾಗಳ ಶೀರ್ಷಿಕೆ ಬಿಡುಗಡೆಯಾಯಿತು.ಸಮಾರಂಭದಲ್ಲಿ ಆರ್ ಚಂದ್ರು ತನ್ನ ನೋವನ್ನು ತೋಡಿಕೊಂಡು ತನ್ನ ಬಗ್ಗೆ ಕುಹಕದ ನುಡಿಗಳನ್ನಾಡಿದವರಿಗೆ ಹೆಸರು ಹೇಳದೇ ತರಾಟೆಗೆ ತೆಗೆದುಕೊಂಡರು.
100 ಕೋಟಿ ದಾಟಿದ ಕಬ್ಜ;ಒಂದು ಸಿನಿಮಾ ಗೆದ್ದರೆ ಉದ್ಯಮ ಉಸಿರಾಡಿದಂತೆ: ಉಪೇಂದ್ರ
‘ಕಬ್ಜ ಸಿನಿಮಾವನ್ನು ಅಮೆಜಾನ್‌ನವರು ಖರೀದಿಸಿದ್ದರ ಬಗ್ಗೆ ಏನೇನೋ ಮಾತು ಕೇಳಿಬಂತು. ಆದರೆ 12 ಜನ ತಜ್ಞರು ಸಿನಿಮಾ ನೋಡಿ ಕಥೆ ಮೆಚ್ಚಿಕೊಂಡ ಬಳಿಕ ಅಮೆಜಾನ್ ಪ್ರೈಮ್ ಓಟಿಟಿಯವರು ಸಿನಿಮಾ ಖರೀದಿಸಿದರು. ಹಾಗಿದ್ದರೆ ಅವರಿಗೆ ಬುದ್ಧಿ ಇರಲಿಲ್ವಾ? ನಾನು ಯಾವತ್ತೂ ಪಾಸಿಟಿವ್ ಮಾತುಗಳನ್ನು ಮಾತ್ರ ತಗೊಳ್ತೀನಿ. ಇವತ್ತು ಐದು ಸಿನಿಮಾ ಏಕಕಾಲಕ್ಕೆ ಅನೌನ್ಸ್ ಮಾಡಿದ್ದು ಹಲವರಿಗೆ ಅಚ್ಚರಿ ತರಿಸಿರಬಹುದು. ಆದರೆ ನನಗೆ ಸಾಕಷ್ಟು ಜನರ ಬೆಂಬಲ ಇದೆ. ಐದಲ್ಲ, ಐವತ್ತು ಸಿನಿಮಾವನ್ನೂ ಏಕಕಾಲದಲ್ಲಿ ಘೋಷಿಸಬಲ್ಲೆ’ ಎಂದೂ ಚಂದ್ರು ಈ ವೇಳೆ ಹೇಳಿದರು.
ಚಿತ್ರರಂಗದಲ್ಲಿ ಡೈರೆಕ್ಟರ್ ಆರ್. ಚಂದ್ರು ಹೊಸ ಸಾಹಸ..! RC ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಆರಂಭ!
ಈ ವೇಳೆ ಉಪೇಂದ್ರ, ‘ಚಂದ್ರು ಹೃದಯ, ಬುದ್ಧಿಗೆ ಶ್ರೀಮಂತ. ನಾನೇ ಇವರನ್ನು ಬೆರಗುಗಣ್ಣಿಂದ ನೋಡುತ್ತೇನೆ. ನೆಗೆಟಿವಿಟಿ ತುಂಬಿರುವವರ ನಡುವೆ ಇಂಥವರು ಅಪರೂಪ’ ಎಂದರು.ನಿರ್ಮಾಪಕರಾದ ಆನಂದ್ ಪಂಡಿತ್, ಅಲಂಕಾರ್ ಪಾಂಡ್ಯನ್, ಜಾಕ್ ಮಂಜು, ಮಾಜಿ ಸಚಿವ ಎಚ್ ಎಂ ರೇವಣ್ಣ, ನಟ ಡಾರ್ಲಿಂಗ್ ಕೃಷ್ಣ ಉಪಸ್ಥಿತರಿದ್ದರು.