ಉಪೇಂದ್ರ ಹಾಗೂ ಹರಿಪ್ರಿಯಾ ಕಾಂಬಿನೇಷನ್‌ನ ‘ಲಗಾಮ್‌’ ಚಿತ್ರಕ್ಕೆ ಇತ್ತೀಚೆಗಷ್ಟೆಅದ್ದೂರಿಯಾಗಿ ಮುಹೂರ್ತ ನಡೆಯಿತು. ನಟ ಪುನೀತ್‌ ರಾಜ್‌ಕುಮಾರ್‌ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

‘ಗಜ’, ‘ದಂಡಂ ದಶಗುಣಂ’, ‘ಬೃಂದಾವನ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಕೆ ಮಾದೇಶ್‌ ನಿರ್ದೇಶನದ ಮತ್ತೊಂದು ಸಿನಿಮಾ ಇದು. ಕೆ ಮಾದೇಶ್‌ ತುಂಬಾ ವರ್ಷಗಳ ನಂತರ ನಿರ್ದೇಶನಕ್ಕಿಳಿದಿದ್ದು, ಈ ಬಾರಿ ‘ಲಾಗಾಮ್‌’ ಚಿತ್ರದ ಮೂಲಕ ನಾಲ್ಕು ಭಾಷೆಗಳಿಗೆ ಹೋಗುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನೀಡುವ ಜತೆಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಲಗಾಮ್ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಕೊರೋನಾ ಮುನ್ನೆಚ್ಚರಿಕೆ ಬಗ್ಗೆ ಮಾತನಾಡಿದ ತಂಡ! 

‘ಕೊರೋನಾ ಸಮಯದಲ್ಲೂ ಇಷ್ಟೊಂದು ಅದ್ದೂರಿಯಾಗಿ ಮುಹೂರ್ತ ಮಾಡಿರುವುದೇ ಒಂದು ಪಾಸಿಟಿವ್‌ ಎನರ್ಜಿ. ಚಿತ್ರ ಕೂಡ ಇಷ್ಟೇ ಗ್ರ್ಯಾಂಡಾಗಿ ಮೂಡಿಬರಲಿದೆ ಎಂಬ ಭರವಸೆ ಇದೆ. ಒಂದೊಳ್ಳೆ ಸಂದೇಶದ ಜತೆಗೆ ಮನರಂಜನೆ ಕೂಡ ಇದೆ. ಈ ಲಗಾಮ್‌, ಕನ್ನಡದ ಲಗಾನ್‌ ಆಗಲಿದೆ ಎನ್ನುವ ನಂಬಿಕೆ ಇದೆ’ ಎದಿದ್ದು ನಟ ಉಪೇಂದ್ರ.

"

ಕೌಟುಂಬಿಕ ಮನೋರಂಜನೆ ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ಹರಿಪ್ರಿಯಾ!

ಎಂಆರ್‌ ಗೌಡ ನಿರ್ಮಾಣದ ಚಿತ್ರವಿದು. ನಟಿ ಹರಿಪ್ರಿಯಾ ಮೊದಲ ಬಾರಿಗೆ ಚಿತ್ರದಲ್ಲಿ ಜತೆಯಾಗಿದ್ದಾರೆ. ಚಿತ್ರದಲ್ಲಿ ಅವರದ್ದು, ಈ ಜನರೇಷನ್‌ನ ಗ್ಲಾಮರ್‌ ನಟಿಯ ಪಾತ್ರವಂತೆ. ‘ಮೇ ತಿಂಗಳಿಂದನಿಂದ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭ ಮಾಡಲಿದ್ದೇವೆ. ಭ್ರಷ್ಟಾಚಾರಕ್ಕೆ, ಮೋಸಕ್ಕೆ, ವಂಚನೆಗೆ, ಅತ್ಯಾಚಾರಕ್ಕೆ, ದ್ರೋಹಕ್ಕೆ, ಕೊರೋನಾಗೆ ಲಗಾಮ… ಹಾಕೋದು ಹೇಗೆ ಎಂಬುದೇ ಈ ಚಿತ್ರದ ಕತæ’ ಎಂದರು ನಿರ್ದೇಶಕ ಕೆ. ಮಾದೇಶ್‌.