ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೇಂದ್ರ ಸಚಿವರ ಭೇಟಿ
-ಚಲನಚಿತ್ರ ವಾಣಿಜ್ಯ ಮಂಡಳಿಗೆ ಎಲ್.ಮುರುಗನ್ ಭೇಟಿ
-ಕರ್ನಾಟಕದಲ್ಲಿ ಅನಿಮಲ್ ವೆಲ್ ಫೇರ್ ಬೋರ್ಡ್ ಸ್ಥಾಪನೆ
-ನಮ್ಮ ಸರ್ಕಾರ ಯಾವಾಗಲೂ ಚಿತ್ರರಂಗದ ಜೊತೆಯಾಗಿರುತ್ತೆ
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಎಲ್.ಮುರುಗನ್ ಭೇಟಿ ನೀಡಿದ್ದು, ಅವರನ್ನು ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಸ್ವಾಗತಿಸಿದರು. ಇದೇ ಮೊದಲ ಬಾರಿಗೆ ವಾಣಿಜ್ಯ ಮಂಡಳಿಗೆ ಆಗಮಿಸಿದ ಸಚಿವರು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು, ಕರ್ನಾಟಕದಲ್ಲಿ ಅನಿಮಲ್ ವೆಲ್ ಫೇರ್ ಬೋರ್ಡ್ ಸ್ಥಾಪನೆ ಕುರಿತು ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿ ಸಿನಿಮಾ ಸೆನ್ಸಾರ್‌ಗೆ ಅವಕಾಶ ಕೊಡಬೇಕು. ಕರ್ನಾಟಕದಿಂದ ಪ್ಯಾನ್ ಇಂಡಿಯಾ ಸಿನಿಮಾಗಳು ಬರುತ್ತಿದ್ದು, ಆ ಚಿತ್ರಗಳ ಬೇರೆ ಬೇರೆ ಭಾಷೆಯ ಸೆನ್ಸಾರ್ ಮಾಡಲು ಕರ್ನಾಟಕದಲ್ಲೇ ಅವಕಾಶ ಕೊಡಬೇಕು. ಅನಿಮಲ್ ಬೋರ್ಡ್‌ನಿಂದ ಸಿನಿಮಾಗಳಿಗೆ ಆಗುತ್ತಿರೋ ಸಮಸ್ಯೆಗಳು ಸೇರಿದಂತೆ ರೀಜಿನೆಬಲ್ ಲಾಂಗ್ವೇಜ್ ಸಿನಿಮಾಗಳ ಶೂಟಿಂಗ್‌ಗೆ ಲೊಕೇಷನ್‌ಗೆ ಕಟ್ಟುವ ಹಣದಲ್ಲಿ ರಿಯಾಯಿತಿ ಕೊಡಬೇಕು ಎಂದು ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಸಭೆಯಲ್ಲಿ ನಟ ಡಾ. ಶಿವರಾಜಕುಮಾರ್ ಕೂಡ ಭಾಗಿಯಾಗಿದ್ದರು.
ವಾಣಿಜ್ಯ ಮಂಡಳಿ 75ನೇ ವರ್ಷದ ಉತ್ಸವ ಲಾಂಛನ ಅನಾವರಣ!
ಚಿತ್ರರಂಗದ ಸಮಸ್ಯೆಗಳ ಬಗ್ಗೆಸಚಿವರು ಗಮನ ಹರಿಸಬೇಕು: ಶಿವಣ್ಣ
ನಮ್ಮ ಚಿತ್ರರಂಗಕ್ಕೆ ಜಿಎಸ್‌ಟಿಯ ಬಹಳಷ್ಟು ಸಮಸ್ಯೆಗಳಿವೆ. ನಿಮಲ್ ಬೋರ್ಡ್ ಸಮಸ್ಯೆ ಯಾವಾಗಲೂ ಆಗುತ್ತಿದೆ. ಹಿಂದಿ ಸೆನ್ಸಾರ್ ಬೋರ್ಡ್ ಸಮಸ್ಯೆಯೂ ಹೆಚ್ಚಾಗಿತ್ತು. ಪೈರಸಿ ಬಗ್ಗೆ ನಮಗೆ ಗೊತ್ತಾಗಲ್ಲ. ತುಂಬಾ ದಿನಗಳಿಂದ ಅನಿಮಲ್ ಬೋರ್ಡ್ ಸಮಸ್ಯೆ ಇತ್ತು, ಈ ಬಗ್ಗೆ ಹೇಳಿದ್ದು ಒಳ್ಳೆದಾಯ್ತು. ಇದರಿಂದ ನನ್ನ ಸಿನಿಮಾಗಳಿಗೂ ಸಮಸ್ಯೆ ಆಗಿತ್ತು. ಸರಿಯಾದ ಸಮಯದಲ್ಲಿ ಹೇಳಿದ್ದೀವಿ. ಈಗ ಕೇಂದ್ರ ಸಚಿವರು ನಮ್ಮ ವಾಣಿಜ್ಯ ಮಂಡಳಿಗೆ ಬಂದಿದ್ದು, ನನಗೆ ಬಹಳ ಖುಷಿಯಾಗಿದೆ. ಚಿತ್ರರಂಗದ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರು ಗಮನ ಹರಿಸಿ ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಂಬಿಕೆ ಇದೆ. ಯಾಕೆಂದರೆ ಮುರುಗನ್ ಸರ್ ದಕ್ಷಿಣ ಭಾರತದವರು ಎಂದು ಶಿವರಾಜಕುಮಾರ್ ಸಭೆಯಲ್ಲಿ ತಿಳಿಸಿದ್ದಾರೆ. ಹಾಗೂ 'ಕೋಟಿಗೊಬ್ಬ 3' ರಿಲೀಸ್ ವೇಳೆ ಆದ ಸಮಸ್ಯೆಗಳ ಬಗ್ಗೆಸೇರಿದಂತೆ ನಾವೆಲ್ಲಾ ಫ್ಯಾಮಿಲಿ, ಕೆಲವೊಂದು ಗೊಂದಲಗಳು ಚಿತ್ರರಂಗದಲ್ಲಿ ಆಗುತ್ತವೆ ಅದನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಗೆ ಕನ್ನಡಿಗನ ಬಹಿರಂಗ ಪತ್ರ!
ಸರ್ಕಾರ ಯಾವಾಗಲೂ ಚಿತ್ರರಂಗದ ಜೊತೆಯಾಗಿರುತ್ತೆ: ಎಲ್.ಮುರುಗನ್
ನಾನು ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತನಾಡಿದ್ದೇನೆ. ನಮ್ಮ ಸರ್ಕಾರ ಚಿತ್ರರಂಗದ ಪರವಾಗಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಿನಿಮಾ ಶೂಟಿಂಗ್ ಚಿತ್ರೀಕರಣದ ಬಗ್ಗೆ ಎಲ್ಲಾ ಮಾಹಿತಿ ಇದೆ. ಹಿಂದಿ ಭಾಷೆ ಸೆನ್ಸಾರ್ ಕರ್ನಾಟಕದಲ್ಲೇ ಆಗಬೇಕು ಎಂದು ಮನವಿ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಹಾಯ ಆಗುವ ಹಾಗೆ ಸೆನ್ಸಾರ್ ಆಗೋ ಬಗ್ಗೆ ಗಮನ ಹರಿಸುತ್ತೇವೆ. ಚಿತ್ರಮಂದಿರಗಳು ತೆರಿಗೆ ಕಟ್ಟೋದನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ರಾಜ್ಯ ಸರ್ಕಾರದಿಂದ 120 ಸಿನಿಮಾಗಳಿಗೆ 10 ಲಕ್ಷ ಸಬ್ಸಿಡಿಯನ್ನು ಕೊಟ್ಟಿದ್ದಾರೆ. ಕನ್ನಡ ಸಿನಿಮಾಗಳ ಬ್ಯುಸಿನೆಸ್ ಚೆನ್ನಾಗಿ ಆಗೋದಕ್ಕೆ ಎಲ್ಲಾ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ. ಹಾಗೂ ನಮ್ಮ ಸರ್ಕಾರ ಯಾವಾಗಲೂ ಚಿತ್ರರಂಗದ ಜೊತೆಯಾಗಿರುತ್ತೆ ಎಂದು ಕೇಂದ್ರ ಸಚಿವ ಮುರುಗನ್ ಸಭೆಯಲ್ಲಿ ತಿಳಿಸಿದ್ದಾರೆ.