ಆತ್ಮೀಯ ಅಧ್ಯಕ್ಷರೇ,

ಇಂತಿ ನೊಂದ ಕನ್ನಡಾಭಿಮಾನಿ, ದೊಡ್ಡಬಳ್ಳಾಪುರ- 561203

ಇತ್ತೀಚಿನ ಕನ್ನಡ ಚಲನಚಿತ್ರಗಳ ಬೆಳವಣಿಗೆಯನ್ನು ಗಮನಿಸಿದರೆ ಕೆಲವು ಕಡೆ ಸಂತೋಷವಾಗುತ್ತದೆ. ಅದರ ಜೊತೆಗೆ ಆತಂಕವೂ ಆಗುತ್ತಿದೆ. ನನ್ನ ಆತಂಕಕ್ಕೆ ಕಾರಣಗಳು ಇವು:

- ಟಿಕೆಟ್ ದರ ಎರಡಷ್ಟು!

ಚಿನ ಎರಡು ವರುಷಗಳಲ್ಲಿ ಇದ್ದ ಚಲನಚಿತ್ರ ಮಂದಿರದ ಟಿಕೆಟ್ ದರವನ್ನು ಸರಕಾರ ನಿಗದಿ ಪಡಿಸಿದ ದರಕ್ಕಿಂತ ಒಂದು ಪಟ್ಟು ಜಾಸ್ತಿ ಮಾಡಿದ್ದಾರೆ. ಈ ಎರಡು ವರುಷದ ಹಿಂದೆ ಕೆಲವು ಸ್ಟಾರ್ ನಟರ ಚಿತ್ರಗಳು ಓಡುತ್ತಿದ್ದ ಹಾಗೆ ಈಗ ಯಾವ ಚಿತ್ರ ಮಂದಿರದಲ್ಲಿಯೂ ಮೂರು ವಾರಕ್ಕಿಂತ ಹೆಚ್ಚಾಗಿ ನಿಲ್ಲುತ್ತಾ ಇಲ್ಲ. 

- ಇದನ್ನು ಕೇಳುವವರೆ ಇಲ್ಲ

ಇದಕ್ಕೆ ಕಾರಣ ಸಿನಿಮಾ ಬಿಡುಗಡೆಯಾದ ದಿನದಿಂದ ಒಂದಕ್ಕೆ ಎರಡು ಪಟ್ಟು ದರ ವಸೂಲಿ ಮಾಡಿ ಚಿತ್ರ ಮಂದಿರದ ಮಾಲಿಕರು ತಮ್ಮ ಖಜಾನೆಯನ್ನು ತುಂಬಿಕೊಳ್ಳುತ್ತಿದ್ದಾರೆ. ಇದನ್ನು ಕೇಳುವವರು ಯಾರೂ ಇಲ್ಲವೇ ಎಂದು ಕನ್ನಡಾಭಿಮಾನಿಯಾದ ನನಗೆ ಬೇಸರವಾಗುತ್ತಿದೆ. ಬಸ್ ದರ ಜಾಸ್ತಿಯಾದರೆ, ಸಿಲಿಂಡರ್ ಬೆಲೆ ಜಾಸ್ತಿಯಾದರೆ ಹೋರಾಟ ಮಾಡುವ ಜನ ಒಂದು ಸಿನಿಮಾಗೆ ದರ ಜಾಸ್ತಿ ಮಾಡಿದರೆ ಏಕೆ ಕೇಳುವುದಿಲ್ಲ.

- ಚಿತ್ರಮಂದಿರ ಮುಚ್ಚುವ ಕಾಲ ದೂರವಿಲ್ಲ

ದೊಡ್ಡಬಳ್ಳಾಪುರದಲ್ಲಿ ಬೇಕಾದಷ್ಟು ಕನ್ನಡ ಪರ ಹೋರಾಟಗಾರರಿದ್ದಾರೆ. ಇಲ್ಲಿ ಬ್ಯಾನರ್‌ಗಳನ್ನು ಕಟ್ಟುವ ಅಭಿಮಾನಿಗಳಿದ್ದಾರೆಯೇ ಹೊರತು ಚಲನಚಿತ್ರದ ದರದ ಬಗ್ಗೆ ಹೋರಾಟ ಮಾಡುವ ಅಭಿಮಾನಿಗಳಾರೂ ಇಲ್ಲ. ಇದೇ ರೀತಿ ಮುಂದುವರಿದರೆ ನಮ್ಮ ಊರಿನಲ್ಲಿ ಈಗಾಗಲೇ ಒಂದು ಚಿತ್ರಮಂದಿರ ನಿಂತು ಹೋಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮತ್ತೆರಡು ಚಿತ್ರಮಂದಿರಗಳು ಮುಚ್ಚುವ ಕಾಲ ದೂರವಿಲ್ಲ.

- ಸ್ಟಾರ್ ಗಳ ಖಜಾನೆ ಮಾತ್ರ ತುಂಬುತ್ತಿದೆ

ವರ್ಷಕ್ಕೆ 20ರಿಂದ 30 ಸಿನಿಮಾಗಳನ್ನು ವೀಕ್ಷಿಸುತ್ತಿದ್ದ ನಾನು ಈಗ ಬರೀ ಒಂದು ಅಥವಾ ಎರಡು ಸಿನಿಮಾಗಳಿಗೆ ಸೀಮಿತಗೊಳಿಸಿದ್ದೇನೆ. ಇದು ನಮ್ಮ ಊರಿನ ಚಿತ್ರಮಂದಿರದ ಮಾತಲ್ಲ. ಕರ್ನಾಟಕದ ಪ್ರತಿಯೊಂದು ಚಿತ್ರಮಂದಿರಗಳ ಸ್ಥಿತಿಯೂ ಇದೇ ರೀತಿ ಆಗಿದೆ. ಇದರಿಂದ ಚಿತ್ರಮಂದಿರದ ಮಾಲಿಕರಿಗೆ, ನಿರ್ಮಾಪಕರಿಗೆ ಹಾಗೂ ಸ್ಟಾರ್ ನಟರಿಗೆ ಖಜಾನೆ ಭರ್ತಿಯಾಗುತ್ತಿದೆ. ಕಷ್ಟಪಟ್ಟು ಕೂಲಿ ಮಾಡುವವರ ಖಜಾನೆ ಖಾಲಿಯಾಗುತ್ತಿದೆ. ಕಷ್ಟಪಟ್ಟು ಕೆಲಸ ಮಾಡುವ ಯಾವ ಕನ್ನಡಿಗನು ಈ ರೀತಿಯ ಧೋರಣೆಯನ್ನು ಸಹಿಸುವುದಿಲ್ಲ.

- ಚಲನಚಿತ್ರಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ ಎಂದು ಬೊಬ್ಬಿಡುವ ನಿರ್ಮಾಪಕರು ಚಿತ್ರದ ಗುಣಮಟ್ಟದ ಬಗ್ಗೆ ಹಾಗೂ ಟಿಕೆಟ್ ದರದ ಬಗ್ಗೆ ಯೋಚಿಸುವ ಪ್ರಯತ್ನ ಮಾಡಲಿ. 

ಇದು ನೋವಿನಿಂದ, ನಿರಾಸೆಯಿಂದ ಹಾಗೂ ಹತಾಶೆಯಿಂದ ಬರೆದಿದ್ದೇನೆ. ಸನ್ಮಾನ್ಯ ಅಧ್ಯಕ್ಷರು ಕನ್ನಡ ಚಲನಚಿತ್ರಗಳ ಮೇಲೆ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿ ವಿನಂತಿ.