ಬೆಂಗಳೂರು (ಫೆ. 24) 'ಸಮಯ ಸಂದರ್ಭ ವಿಷಘಳಿಗೆ ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ! ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ! ಕನ್ನಡಕ್ಕೆ ಒಗ್ಗಟ್ಟಿರಲಿ! ಧನ್ಯವಾದ ದರ್ಶನ್.. ಮನಸ್ಸು ಹಗುರವಾಯಿತು.. ಧನ್ಯವಾದ ಮಾಧ್ಯಮಮಿತ್ರರಿಗೆ. ಧನ್ಯವಾದ ಕನ್ನಡದ ಮನಗಳಿಗೆ. ಇನ್ನೆಂದು ಇಂಥ ದಿನ ಬರದಿರಲಿ'

ಇದು ನವರಸ ನಾಯಕ ಜಗ್ಗೇಶ್ ಮಾಡಿರುವ ಟ್ವೀಟ್.., ಈ ಮೂಲಕ ಹುಟ್ಟಿಕೊಂಡಿದ್ದ ಒಂದು ವಿವಾದಕ್ಕೆ ತೆರೆ ಸಿಕ್ಕಿದೆ. ದರ್ಶನ್ ಕುರಿತು ಜಗ್ಗೇಶ್ ಕೇವಲವಾಗಿ ಮಾತನಾಡಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಇದಾದ ಮೇಲೆ  ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿ ಪ್ರಶ್ನೆಗಳ ಬಾಣ ಎಸೆದಿದ್ದರು.

ಜಗ್ಗೇಶ್ ಸಹ ಸುದ್ದಿಗೋಷ್ಠಿ ಕರೆದು ಅನೇಕ ವಿಚಾರಗಳನ್ನು ಮಾತನಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ತಾವು ಎಷ್ಟು ವರ್ಷದಿಂದ ಇದ್ದೇನೆ ಎಂಬುದನ್ನು ತಿಳಿಸಿಕೊಟ್ಟಿದ್ದರು. ಹಾಗಾದರೆ ಜಗ್ಗೇಶ್ ಅಂತಿಮವಾಗಿ ಈ ರೀತಿ ಮಾತನಾಡಲು ಕಾರಣವೇನು? 

ನವರಸ ನಾಯಕ ಜಗ್ಗೇಶ್ ಕೊಟ್ಟಿದ್ದ ಸಮರ್ಥನೆ

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದರು. ಸೀನಿಯರ್​ಗಳು ಯಾವಾಗಲೂ ಮುಂದಿರಬೇಕು. ಕಿರಿಯರು ಹಿಂದಿರಬೇಕು. ವಿವಾದ ಆಗುವ ದಿನ ನಾನು ತಿರುಪತಿಗೆ ಹೋಗಿದ್ದೆ. ತಿರುಪತಿಯಿಂದ ಮನೆಗೆ ಬರೋದು ರಾತ್ರಿ 2 ಗಂಟೆ ಆಗಿತ್ತು. ಮನೆಗೆ ಬಂದು ಮೊಬೈಲ್​ ನೋಡಿದಾಗ ನಿರ್ಮಾಪಕ ವಿಖ್ಯಾತ್​​​ ಅವರದ್ದು 50-60 ಮಿಸ್​ ಕಾಲ್​ಗಳಿದ್ದವು.

ಮಧ್ಯರಾತ್ರಿ ಕಾಲ್​ ಮಾಡೋದು ಸರಿಯಲ್ಲ ಎನ್ನುವ ಕಾರಣಕ್ಕೆ, ಬೆಳಗ್ಗೆ ಜಿಮ್​ ಮುಗಿಸಿ ಬಂದು ಕರೆ ಮಾಡಿದೆ. ಆಗ ವಿಚಾರ ತಿಳಿತು. ನನ್ನ ಅಭಿಮಾನಿಗಳು ಜಗ್ಗೇಶ್​ ಸೆಟ್​​ಗೆ ಹೋಗೋ ವಿಚಾರ ನನಗೆ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದರೆ ನಾನು ಅಭಿಮಾನಿಗಳ ಬಳಿ ಹೋಗೋದೇ ಬೇಡ ಎನ್ನುತ್ತಿದೆ. ಅವರು ನಮ್​ ಸೀನಿಯರ್​. ಅವರು ಮಾತನಾಡಿದ್ರೆ ನಮ್ಮ ಬಗ್ಗೆ ತಾನೇ. ಸೀನಿಯರ್​ಗಳು ನಮ್ಮ ಬಗ್ಗೆ ಮಾತನಾಡದೆ ಇನ್ಯಾರ ಬಗ್ಗೆ ಮಾತನಾಡೋಕಾಗುತ್ತದೆ. ನನ್ನ ಅಭಿಮಾನಿ ಸೆಲೆಬ್ರಿಟಿಗಳಿಂದ ಬೇಸರ ಆಗಿದ್ದರೆ ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದರು.

ಇನ್ಸ್​ಪೆಕ್ಟರ್​ ವಿಕ್ರಂ ಸಿನಿಮಾ ರಿಲೀಸ್​ ಆದಾಗಲೇ ಈ ಆಡಿಯೋ ವಿಚಾರ ಬಂದಿತ್ತು. ಆ ದಿನ ನಾನು ಜಗ್ಗೇಶ್​ಗೆ ಕರೆ ಮಾಡಿದ್ದೆ. ಆದರೆ, ಕರೆ ಕನೆಕ್ಟ್​ ಆಗಿರಲಿಲ್ಲ ಎಂದಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಜಗ್ಗೇಶ್  ಮನಸ್ಸು ಹಗುರವಾಯಿತು ಎಂದು ಬರೆದುಕೊಂಡಿದ್ದಾರೆ.