James 2022: ಮಹಾಶಿವರಾತ್ರಿಗೆ ಪವರ್ ಪ್ಯಾಕ್ಡ್ 'ಟ್ರೇಡ್ಮಾರ್ಕ್'ನಲ್ಲಿ ಬರಲಿದ್ದಾರೆ ಪುನೀತ್ ರಾಜ್ಕುಮಾರ್!
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರದ ಒಂದೊಂದು ಅಪ್‍ಡೇಟ್ಸ್ ಕೂಡಾ ಸಿನಿರಸಿಕರಿಗೆ ಕುತೂಹಲವನ್ನು ಹುಟ್ಟಿಸುತ್ತಿದೆ. ಇದೀಗ ಈ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್‌ವೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' (James) ಚಿತ್ರದ ಟೀಸರ್ (Teaser) ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಎಲ್ಲೆಲ್ಲೂ 'ಜೇಮ್ಸ್' ಜಪ ಶುರುವಾಗಿದೆ. ಮೊದಲ ಬಾರಿಗೆ ಚೇತನ್ ಕುಮಾರ್ (Chetan Kumar) ನಿರ್ದೇಶನ ಮಾಡಿರುವ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ತಂಡದಿಂದ ಬರುವ ಒಂದೊಂದು ಅಪ್‍ಡೇಟ್ಸ್ ಕೂಡಾ ಸಿನಿರಸಿಕರಿಗೆ ಕುತೂಹಲವನ್ನು ಹುಟ್ಟಿಸುತ್ತಿದೆ. ಇದೀಗ ಈ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್‌ವೊಂದನ್ನು (Lyrical Video Song) ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಪಿಆರ್ಕೆ ಆಡಿಯೋ (PRK Audio) ತನ್ನ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.
ಹೌದು! ಅಪ್ಪು ಅಭಿನಯದ 'ಜೇಮ್ಸ್' ಚಿತ್ರದ 'ಪವರ್ ಪ್ಯಾಕ್ಡ್' 'ಟ್ರೇಡ್ಮಾರ್ಕ್' (Trademark) ಹಾಡು ಮಹಾಶಿವರಾತ್ರಿ (Mahashivratri) ದಿನವಾದ ಮಾರ್ಚ್ 1ರಂದು ಬಿಡುಗಡೆಗೆಯಾಗಲಿದ್ದು, ಚಿತ್ರದಿಂದ ರಿಲೀಸ್ ಆಗುತ್ತಿರುವ ಮೊದಲ ಹಾಡು ಇದಾಗಿದೆ. ಬೆಳಗ್ಗೆ 11.11ಕ್ಕೆ 'ಟ್ರೇಡ್ ಮಾರ್ಕ್' ಹಾಡು ಪಿಆರ್ಕೆ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ದಿನ ಸಿನಿಮಾ ತೆರೆ ಮೇಲೆ ಬರಲಿದ್ದು, ಈ ಸಿನಿಮಾದಲ್ಲಿ ಅಪ್ಪುನನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. 'ಜೇಮ್ಸ್' ಚಿತ್ರತಂಡದಿಂದ ಈಗಾಗಲೇ ಎರಡು ಹೊಸ ಸುದ್ದಿಗಳು ಹೊರ ಬಂದಿವೆ. ಅಪ್ಪು ಹುಟ್ಟಿದ ದಿನದಂದೇ ಈ ಸಿನಿಮಾ ರಿಲೀಸ್ ಪಕ್ಕಾ ಎಂದು ಘೋಷಣೆ ಮಾಡಿದೆ. ಅದಕ್ಕೂ ಮುನ್ನ ಟ್ರೇಲರ್ (Trailer) ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
Making of James Movie 2022: ಚಿತ್ರದ ಎಲ್ಲಾ ಫೈಟ್ ಸೀನ್‌ಗಳು ಅಪ್ಪು ಸರ್ ಮೊಬೈಲ್ನಲ್ಲಿತ್ತು: ಚೇತನ್‌ಕುಮಾರ್
'ಜೇಮ್ಸ್' ಚಿತ್ರದ ಮೊದಲ ಸಾಂಗ್ ಬಿಡುಗಡೆ ಮಾಡುತ್ತಿದ್ದೇವೆ. 'ಟ್ರೇಡ್ಮಾರ್ಕ್' ಹಾಡನ್ನು 5 ಗಾಯಕರು ಹಾಡಿದ್ದಾರೆ. ಫೋಟೋ ಮೇಲೆ ಲಿರಿಕ್ಸ್ ಹಾಕಿ ರಿಲೀಸ್ ಮಾಡುವ ಹಾಗೆ ರೆಗ್ಯುಲರ್ ಆಗಿ ಇದನ್ನು ರಿಲೀಸ್ ಮಾಡಲ್ಲ. ತುಂಬ ವಿಶೇಷವಾದ ಕಲಾವಿದರು ಇದರಲ್ಲಿ ಪರ್ಫಾರ್ಮ್ ಮಾಡಿದ್ದಾರೆ. ಅದರ ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇರಲಿದೆ. ಮಾ.1ರಂದು ಎಲ್ಲ ಮಾಹಿತಿ ತಿಳಿಯಲಿದೆ. ಇದು ಪವರ್ಫುಲ್ ರ್ಯಾಪ್ ಸಾಂಗ್. ಅಭಿಮಾನಿಗಳಿಗೆ ಇದು ಹೆಚ್ಚು ಇಷ್ಟ ಆಗಲಿದೆ' ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದು, ಈ ಮೂಲಕ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯಲ್ಲಿಯೂ ಈ ಹಾಡು ಬಿಡುಗಡೆಯಾಗಲಿದೆ.
'ಜೇಮ್ಸ್' ಶೂಟಿಂಗ್ ಸಮಯದಲ್ಲಿ ಪುನೀತ್ ಸರ್ ಆಕ್ಷನ್ ಸೀಕ್ವೆನ್ಸ್ ಪೋಷನ್ಸ್‌ನಲ್ಲಿ ಮಾಡಿದಂತಹ ವಿಡಿಯೋ ಕ್ಲಿಪ್ಸ್‌ಗಳನ್ನು ತಮ್ಮ ಮೊಬೈಲ್‌ಗೆ ಹಾಕಿಕೊಂಡು ನೋಡುತ್ತಾ ಖುಪಿಪಡುತ್ತಿದ್ದರು. ಚಿತ್ರದ ಎಲ್ಲಾ ಫೈಟ್ ಸೀನ್ ಅವರ ಮೊಬೈಲ್ನಲ್ಲಿತ್ತು. ಇಡೀ ಸಿನಿಮಾವನ್ನು ಅಪ್ಪು ಅವರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದರು. ಪ್ರತಿದಿನ ನಗುವಿನಿಂದಲೇ ಸೆಟ್‌ಗೆ ಬರುತ್ತಿದ್ದರು. ಯಾರ ಮೇಲೆಯೂ ಒಂಚೂರು ಕೋಪ ಮಾಡಿಕೊಳ್ಳುತ್ತಿರಲಿಲ್ಲ. ನಾನು ಈ ವಿಚಾರದಲ್ಲಿ ತುಂಬಾ ಲಕ್ಕಿ. ಚಿತ್ರೀಕರಣದಲ್ಲಿ ಶೂಟ್ ಮಾಡಿದಂತಹ ಎಲ್ಲ ವಿಡಿಯೋಗಳನ್ನು ಪುನೀತ್ ಸರ್ ನೋಡಿದ್ದಾರೆ. ಆದರೆ ಪೂರ್ತಿ ಚಿತ್ರವನ್ನು ಅವರು ನೋಡಲಿಲ್ಲವಲ್ಲ ಎಂಬ ಕೊರಗು ಇದ್ದರೂ ಅಪ್ಪು ಸರ್ ಈ ಚಿತ್ರವನ್ನು ಮೇಲಿನಿಂದ ನೋಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ನಿರ್ದೇಶಕ ಚೇತನ್ ಇತ್ತೀಚೆಗಷ್ಟೇ ತಿಳಿಸಿದ್ದರು.
Puneeth James Teaser: 'ಜೇಮ್ಸ್ ಸಿನಿಮಾ ಮಾಸ್ಟರ್‌ಪೀಸ್ ಸಿನಿಮಾವಾಗುತ್ತೆ' ಎಂದ ಡಾರ್ಲಿಂಗ್ ಪ್ರಭಾಸ್!
ಇನ್ನು 'ಜೇಮ್ಸ್' ಸಿನಿಮಾವನ್ನು ಹೋಸಪೇಟೆ, ಗೋವಾ (Goa), ಹೈದರಾಬಾದ್ (Hyderabd) ಮತ್ತು ಕಾಶ್ಮೀರದಲ್ಲಿ (Kashmir) ಚಿತ್ರೀಕರಿಸಲಾಗಿದೆ. ಕಿಶೋರ್ ಪತ್ತಿಕೊಂಡ (Kishore Pattikonda) ನಿರ್ಮಾಣದಲ್ಲಿ 'ಜೇಮ್ಸ್' ಚಿತ್ರ ಮೂಡಿಬಂದಿದ್ದು, ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೆಕಾ ಶ್ರೀಕಾಂತ್, ಚಿಕ್ಕಣ್ಣ, ಶೈನ್ ಶೆಟ್ಟಿ ಹಾಗೂ ತಿಲಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಾಣಲಿದೆ.