ಟಾಪ್ 26 ಪ್ಯಾನ್-ಇಂಡಿಯಾ ನಟರ ಪಟ್ಟಿಯಲ್ಲಿ ಯಶ್ನೇ 13 ಮತ್ತು ಉಪೇಂದ್ರ 26ನೇ ಸ್ಥಾನದಲ್ಲಿದ್ದಾರೆ. ಟಾಲಿವುಡ್ ನಟರು ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದ್ದು, ಬಾಲಿವುಡ್ ನಟರಿಗಿಂತ ಮುಂದಿದ್ದಾರೆ. ಕಾಲಿವುಡ್ ಮತ್ತು ಮಾಲಿವುಡ್ ತಲಾ ಎರಡು ಸ್ಥಾನಗಳನ್ನು ಪಡೆದಿವೆ.
ಇದೀಗ ಕನ್ನಡ ಸೇರಿದಂತೆ ಬಹುತೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಈ ಸಾಲಿನ ಅಂಥ ಟಾಪ್ 25 ನಟರ ಲಿಸ್ಟ್ ಒಂದು ಬಿಡುಗಡೆಯಾಗಿದ್ದು, ಅದರಲ್ಲಿ ಟಾಪ್ 25 ಪ್ಯಾನ್ ಇಂಡಿಯಾ ಸ್ಟಾರ್ಸ್ ಯಾರು? ಅವರಿಗೆ ಸಿಕ್ಕಿ ಸ್ಥಾನ ಎಷ್ಟು? ಕನ್ನಡದ ನಟರು ಎಷ್ಟಿದ್ದಾರೆ ಎಂಬಿತ್ಯಾದಿ ಡಿಟೇಲ್ಸ್ ಈ ವರದಿಯಲ್ಲಿ ನೀಡಲಾಗಿದೆ.
1. ಪ್ರಭಾಸ್ -ಟಾಲಿವುಡ್ (ಕಲ್ಕಿ 2898 AD(2024)
2. ಶಾರುಖ್ ಖಾನ್- ಬಾಲಿವುಡ್ (ಡಂಕಿ- 2003)
3. ಜೋಸೆಫ್ ವಿಜಯ್- ಕಾಲಿವುಡ್ (ದಿ ಗ್ರೇಟೆಸ್ಟ್ ಆಲ್ ದಿ ಟೈಂ- 2004)
4. ಅಲ್ಲು ಅರ್ಜುನ್- ಟಾಲಿವುಡ್ (ಪುಷ್ಪಾ 2: ದಿ ರೂಲ್ (2024)
5. ಜ್ಯೂನಿಯರ್ ಎನ್.ಟಿ.ರಾಮರಾವ್- ಟಾಲಿವುಡ್ (ದೇವರಾ- 2024)
6. ಮಹೇಶ್ ಬಾಬು- ಟಾಲಿವುಡ್ (ಗುಂಟೂರು ಖಾರಮ್- 2024)
7. ಹೃತಿಕ್ ರೋಷನ್- ಬಾಲಿವುಡ್ (ಫೈಟರ್-2024)
8. ರಣಬೀರ್ ಕಪೂರ್- ಬಾಲಿವುಡ್ (ಅನಿಮಲ್ 2023)
9. ಅಕ್ಷಯ್ ಕುಮಾರ್-ಬಾಲಿವುಡ್ (ಸ್ಕೈ ಫೋರ್ಸ್-2025)
10. ರಾಮ್ ಚರಣ್ - ಟಾಲಿವುಡ್ (ಗೇಮ್ ಚೇಂಜರ್-2025)
11. ಸಲ್ಮಾನ್ ಖಾನ್- ಬಾಲಿವುಡ್ (ಟೈಗರ್-3- 2023)
12. ಆಮೀರ್ ಖಾನ್- ಬಾಲಿವುಡ್ (ಲಾಲ್ ಸಿಂಗ್ ಛಡ್ಡಾ-2022)
ಬರ್ತ್ಡೇ ದಿನ ಹೇಳ್ಬೇಕಿತ್ತು, ತಡವಾಯಿತು ಎನ್ನುತ್ತಲೇ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಸಂಗೀತಾ ಶೃಂಗೇರಿ
13. ಯಶ್ - ಸ್ಯಾಂಡಲ್ವುಡ್ (ಕೆಜಿಎಫ್ ಚಾಪ್ಟರ್-2- 2022)
14. ರಜನೀಕಾಂತ್- ಟಾಲಿವುಡ್ (ವೆತ್ತಿಯನ್-2024)
15. ಶಿವಕಾರ್ತಿಕೇಯನ್- ಕಾಲಿವುಡ್ (ಅಮರನ್-2024)
16. ನಾನಿ-ಟಾಲಿವುಡ್- (ಸರಿಪಹಧಾ ಶನಿವಾರಮ್-2024)
17. ಅಜಿತ್ ಕುಮಾರ್- ಟಾಲಿವುಡ್- (ತುನಿವು- 2023)
18. ದುಲ್ಖರ್ ಸಲ್ಮಾನ್- (ಲಕ್ಕಿ ಭಾಸ್ಕರ್ -2024)
19. ವಿಜಯ್ ದೇವರಕೊಂಡ- ಟಾಲಿವುಡ್ (ದಿ ಫ್ಯಾಮಿಲಿ ಸ್ಟಾರ್-2024)
20. ಉನ್ನಿ ಮುಕುಂದು - (ಮಾರ್ಕೋ-2024)
21. ರಣವೀರ್ ಸಿಂಗ್- ಬಾಲಿವುಡ್- (ಸಿಂಗಂ ಅಗೇನ್-2024)
22. ಸೂರ್ಯ- (ಕಂಗುವಾ-2024)
23. ಮೋಹನ್ಲಾಲ್-ಮಾಲಿವುಡ್- (ಬರೋಜ್-2024)
24. ಪ್ರಥ್ವಿರಾಜನ್ ಸುಕುಮಾರನ್ - ಮಾಲಿವುಡ್ (ದಿ ಗೋಟ್ ಲೈಫ್-2024)
25. ಕಮಲ ಹಾಸನ್- (ಇಂಡಿಯನ್-2-2024)
26. ಉಪೇಂದ್ರ- ಸ್ಯಾಂಡಲ್ವುಡ್ (ಯುಐ-2024)
ಅಲ್ಲಿಗೆ ಟಾಪ್ 26ರಲ್ಲಿ ಸ್ಯಾಂಡಲ್ವುಡ್ ನಟರಾಗಿ ಮಿಂಚಿದವರು ಯಶ್ ಮತ್ತು ಉಪೇಂದ್ರ ಅವರು. ಟಾಪ್ 26ನಲ್ಲಿ ಯಶ್ ಅವರಿಗೆ 13ನೇ ಸ್ಥಾನ ಇದ್ದರೆ ಕೊನೆಯ ಸ್ಥಾನ ಅಂದರೆ ಟಾಪ್ 26ನಲ್ಲಿ ಉಪೇಂದ್ರ ಅವರು ಇದ್ದಾರೆ. ಟಾಲಿವುಡ್ ಅಗ್ರಸ್ಥಾನ ಪಡೆದುಕೊಂಡಿದೆ.
ಕುತೂಹಲದ ವಿಷಯ ಏನೆಂದರೆ, ಬಾಲಿವುಡ್ ನಟರಿಗಿಂತಲೂ ಟಾಲಿವುಡ್ ನಟರೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ಕಾಲಿವುಡ್ ಮತ್ತು ಮಾಲಿವುಡ್ಗಳು ತಲಾ ಎರಡು ಸ್ಥಾನ ಪಡೆದುಕೊಂಡು ತೃಪ್ತಿಪಟ್ಟುಕೊಂಡಿವೆ.
218 ಕೋಟಿ ಬಾಚಿದ್ದ ಮೊದಲ ಹಾರರ್ ಮೂವಿಗೆ 65 ವರ್ಷ: 'ಕಾಮಿನಿ' ಕಂಡು ಹಾಲ್ನಲ್ಲೇ ಬೆಚ್ಚಿಬಿದ್ದ ಪ್ರೇಕ್ಷಕರು


