ಬಿಗ್‌ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ, ಚಾರ್ಲಿ ಚಿತ್ರದ ಯಶಸ್ಸಿನ ಬಳಿಕ ಆಯ್ದ ಚಿತ್ರಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಪ್ರಸ್ತುತ, ಕ್ರಿಸ್ಟಲ್ ವ್ಯವಹಾರ, ಫಿಟ್ನೆಸ್ ಮತ್ತು ಗೇಮಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸ ಚಿತ್ರಗಳ ಆಯ್ಕೆ ಪ್ರಕ್ರಿಯೆಯಲ್ಲಿದ್ದು, ಶೀಘ್ರದಲ್ಲೇ ಹೊಸ ಯೋಜನೆಗಳ ಬಗ್ಗೆ ಘೋಷಿಸುವುದಾಗಿ ತಿಳಿಸಿದ್ದಾರೆ.

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರಲ್ಲಿ ಬಹುತೇಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದವರು ಸಂಗೀತಾ ಶೃಂಗೇರಿ. ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ಯಾವುದೇ ಪ್ರಾಜೆಕ್ಟ್​ಗೆ ಕೈ ಹಾಕಿಲ್ಲ. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಜೊತೆಗೆ ಕ್ರಿಸ್ಟಲ್​ ಬಿಜಿನೆಸ್​ ಕೂಡ ಶುರು ಮಾಡಿದ್ದಾರೆ. 2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ' ಕನ್ನಡ ಧಾರವಾಹಿ ಮೂಲಕ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಇವರು, ಪಾವರ್ತಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಎ+ ಸಿನಿಮಾ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟರು. ಬಳಿಕ ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಾರ್ಲಿ ಚಿತ್ರದಿಂದ ಇವರಿಗೆ ದೊಡ್ಡ ಬ್ರೇಕ್​ ಸಿಕ್ಕಿತು. ಎರಡು ಸಾವಿರಕ್ಕೂ ಹೆಚ್ಚು ಜನರು '777 ಚಾರ್ಲಿ' ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆದರೆ ಎಲ್ಲರನ್ನು ಮೀರಿ ಸಂಗೀತಾ ಗೆದ್ದಿದ್ದರು. ಒಳ್ಳೆ ಅವಕಾಶ ಪಡೆದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿದೆ ಚಿತ್ರ ಜೊತೆಗೆ ಹಲವು ಅವಾರ್ಡ್​ಗಳನ್ನು ಬಾಚಿಕೊಂಡಿದೆ.

ಆದರೆ ಬಿಗ್​ಬಾಸ್​ನಿಂದ ಬಂದ ಮೇಲೆ ಇವರು ಇನ್ನಷ್ಟು ಚಿತ್ರಗಳನ್ನು ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಸಂಗೀತಾ ಅಷ್ಟು ಸದ್ದು ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಈ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಸಂಗೀತಾ ಶೃಂಗೇರಿ ಏನಂದ್ರು ಎನ್ನುವ ಬಗ್ಗೆ ಸಿನಿ ಸ್ಟೋರ್​ ಯುಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಸಿನಿಮಾದಲ್ಲಿ ಏಕೆ ಕಾಣಿಸ್ತಿಲ್ಲ ಎನ್ನೋ ಪ್ರಶ್ನೆಗೆ ಸಂಗೀತಾ ಅ ವರು, ನಾನು ಈಗಲೂ ತುಂಬಾ ಬಿಜಿನೇ ಇದ್ದೇನೆ. ಆದರೆ ಹಾಗಂತ ಎಲ್ಲರಿಗೂ ತೋರಿಸಿಕೊಳ್ಳೋ ಅಗತ್ಯ ಇಲ್ಲ ಎಂದಿದ್ದಾರೆ. ಚಾರ್ಲಿ ಮತ್ತು ಲಕ್ಕಿ ಮ್ಯಾನ್ ಬಳಿಕ ನನಗೆ ತುಂಬಾ ಪ್ರಾಜೆಕ್ಟ್​ ಬಂದ್ವು. ಆದ್ರೆ ಯಾವುದೇ ಪ್ರಾಜೆಕ್ಟ್​ ಒಪ್ಪಿಕೊಳ್ಳುವ ಮೊದಲು ತುಂಬಾ ಯೋಚನೆ ಮಾಡುವವಳು ನಾನು. ನನಗೆ ಇಷ್ಟವಾದರೆ ಮಾತ್ರ ಅದನ್ನು ಮಾಡುತ್ತೇನೆ. ಅದಕ್ಕಾಗಿ ಯಾವುದೇ ಸಿನಿಮಾ ಸದ್ಯ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ. 

ಬಿಗ್​ಬಾಸ್​ ಸಂಗೀತಾ ಶೃಂಗೇರಿ ಲುಕ್ಕೇ ಚೇಂಜು! ನಿಜಕ್ಕೂ ಈಕೆ ನಮ್​ ಸಂಗೂನಾ ಕೇಳಿದ ಫ್ಯಾನ್ಸ್​

 ಅದೇ ವೇಳೆ, ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟಿದ್ದಾರೆ ಸಂಗೀತಾ ಶೃಂಗೇರಿ. ಹುಟ್ಟುಹಬ್ಬದ ದಿನವೇ ಇದನ್ನು ಹೇಳೋಣ ಎಂದುಕೊಂಡಿದ್ದೆ. ಆದರೆ ಶೀಘ್ರದಲ್ಲಿಯೇ ಈ ವಿಷಯವನ್ನು ಹೇಳುತ್ತೇನೆ ಎನ್ನುತ್ತಲೇ ಸದ್ಯ ಎರಡು ಪ್ರಾಜೆಕ್ಟ್​ಗಳಲ್ಲಿ ಕೆಲಸ ಶುರು ಮಾಡುವ ಯೋಚನೆ ಇದೆ. ನೀವು ನೋಡ್ತಿರೋ ಹಾಗೆ ಸುಮಾರಷ್ಟು ಮೂವೀಸ್ ಬರ್ತಾನೆ ಇರ್ತವೆ. ಆದ್ರೆ ಚಾರ್ಲಿ, ಲಕ್ಕಿಮ್ಯಾನ್​ನಂಥ ಚಿತ್ರಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ಹುಟ್ಟುಹಬ್ಬದಂದೇ ಈ ವಿಷಯ ಹೇಳೋಣ ಎಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಶೀಘ್ರದಲ್ಲಿಯೇ ಈ ಬಗ್ಗೆ ಹೇಳುತ್ತೇನೆ ಎಂದಿದ್ದಾರೆ ಸಂಗೀತಾ. 

ನಾನು ಮಾಡುವಂಥ ಪ್ರತಿ ಸ್ಕ್ರಿಪ್ಟ್ ಕೂಡ ಜನಕ್ಕೆ ಇಷ್ಟವಾಗಬೇಕು. ಅವರಿಗೆ ನ್ಯಾಯ ಕೊಡಬೇಕು. ಸಿಕ್ಕ ಪ್ರಾಜೆಕ್ಟ್​ ಎಲ್ಲಾ ಮಾಡುತ್ತಾ ಹೋಗಿದ್ದರೆ ಈಗಾಗಲೇ ಸುಮಾರು ಆಗುತ್ತಿತ್ತು. ಆದರೆ ನನ್ನ ಕರಿಯರ್​, ನನ್ನ ಉದ್ಯೋಗದ ಬಗ್ಗೆ ನನಗೆ ತುಂಬಾ ಗೌರವ ಇದೆ. ಆದ್ದರಿಂದ ಅಂಥ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತೇನೆ ಎಂದಿರುವ ಸಂಗೀತಾ, ಪಾತ್ರಗಳು ನನಗೆ ತುಂಬಾ ಖುಷಿ ಕೊಡಬೇಕು, ಅವುಗಳನ್ನು ಮಾತ್ರ ಆಯ್ಕೆ ಮಾಡುತ್ತೇನೆ. ಒಂದೆರಡು ಪ್ರಾಜೆಕ್ಟ್​ ಮಾತುಕತೆ ನಡೀತಾ ಇವೆ. ಇನ್ನು ನಾನು ಆಕ್ಸೆಪ್ಟ್ ಮಾಡಿಲ್ಲ ಎಂದಿದ್ದಾರೆ. ಸದ್ಯ ತುಂಬಾ ಬಿಜಿ ಇದ್ದೇನೆ. ಫಿಟ್ನೆಸ್ ಜರ್ನಿ ಶುರುವಾಗಿದೆ. ನಾನು ಗೇಮಿಂಗ್ ಕೂಡ ಮಾಡ್ತಾ ಇದೀನಿ. ಅದಾದ ಮೇಲೆ ನನ್ನ ಕ್ರಿಸ್ಟಲ್ಸ್ಬಿಸಿನೆಸ್ ಕೂಡ ಸ್ಟಾರ್ಟ್ ಮಾಡಿದ್ದೀನಿ. ಅವುಗಳ ನಡುವೆ ಇಷ್ಟವಾದ ಸಿನಿಮಾ ಬಂದರೆ ಮಾಡುತ್ತೇನೆ ಎಂದಿದ್ದಾರೆ. 

ಹೆಬ್ಬಾವು, ಇಗ್ವಾನಾ ಜೊತೆ ಬಿಗ್​ಬಾಸ್​ ಸಂಗೀತಾ ಶೃಂಗೇರಿ ಸರಸ- ವಿಡಿಯೋ ವೈರಲ್​- ಬೆಚ್ಚಿ ಬಿದ್ದ ಅಭಿಮಾನಿಗಳು!

YouTube video player