ಈಗಾಗಲೇ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಕಾಶ್ಮೀರ ಪರದೇಶಿ ಇದೇ ಮೊದಲು ಕನ್ನಡಕ್ಕೆ ಎಂಟ್ರಿ ಆಗುತ್ತಿದ್ದಾರೆ. ಟಿ ಸಿರೀಸ್‌ ಹಾಗೂ ಲಹರಿ ನಿರ್ಮಾಣದ ಅದ್ಧೂರಿ ವೆಚ್ಚದ ದ್ವಿಭಾಷಾ ಚಿತ್ರಕ್ಕೆ ನಾಯಕಿ ಆಗಿದ್ದಾರೆ.

ನಿಖಿಲ್ ಕುಮಾರಸ್ವಾಮಿಗೆ ಹೊಸ ನಾಯಕಿ, ಎಲ್ಲಿಂದ ಬಂದ ಸುಂದರಿ?

‘ಚಿತ್ರಕ್ಕೆ ಹೊಸಬರನ್ನೇ ನಾಯಕಿ ಆಗಿ ಆಯ್ಕೆ ಮಾಡಿಕೊಳ್ಳಬೇಕೆನ್ನುವುದು ನಿರ್ದೇಶಕರ ಅಭಿಪ್ರಾಯವಾಗಿತ್ತು. ಅದಕ್ಕೆ ತಕ್ಕಂತೆ ನಾಯಕಿ ಆಯ್ಕೆಯ ಜವಾಬ್ದಾರಿಯನ್ನು ಅವರಿಗೇ ಬಿಡಲಾಗಿತ್ತು. ಆ ಪ್ರಕಾರ ಈಗ ಕಾಶ್ಮೀರ ಪರದೇಶಿ ಆಯ್ಕೆ ಆಗಿದ್ದಾರೆ. ಅವರ ಹಿನ್ನೆಲೆ ತಿಳಿದಾಗ ಅವರೇ ಸೂಕ್ತ ಎಂದೆನಿಸುತ್ತಿದೆ’ ಎನ್ನುವುದು ನಿರ್ಮಾಪಕ ಲಹರಿ ವೇಲು ಹೇಳುವ ಮಾತು.

ಟಾಲಿವುಡ್‌ ಮೂಲಕ ಬೆಳ್ಳಿತೆರೆಗೆ ಎಂಟ್ರಿ

ಕಾಶ್ಮೀರ ಪರದೇಶಿ ಮೂಲತಃ ಮರಾಠಿ. ಹುಟ್ಟಿಬೆಳೆದಿದ್ದು ಪುಣೆಯಲ್ಲಿ. ಮುಂಬೈನಲ್ಲಿ ಫ್ಯಾಷನ್‌ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದಾರೆ. ಮಾಡೆಲಿಂಗ್‌ ಮೂಲಕ ಸಿನಿ ಜಗತ್ತಿಗೆ ಬಂದಿದ್ದು. ಹಾಗೆಯೇ ರಂಗಭೂಮಿಯ ಹಿನ್ನೆಲೆಯೂ ಇದೆ. ನಾಗಶೌರ್ಯ ಅಭಿನಯದ ‘ನರ್ತನ್‌ ಶಾಲಾ’ ತೆಲುಗು ಚಿತ್ರದೊಂದಿಗೆ ನಟಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟವರು. ಅಲ್ಲಿಂದ ಬಾಲಿವುಡ್‌ನಲ್ಲೂ ಅಕ್ಷಯ್‌ ಕುಮಾರ್‌ ಅಭಿನಯದ ‘ಮಿಷನ್‌ ಮಂಗಲ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.