Asianet Suvarna News Asianet Suvarna News

ಕನ್ನಡ ಚಿತ್ರರಂಗದ ಆ ದಿನಗಳು ಮತ್ತೆ ಮರುಕಳಿಸಿದೆ; ಕಾಂತಾರ ಬಗ್ಗೆ ಕಮಲ್ ಹಾಸನ್ ಮೆಚ್ಚುಗೆ

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ ನಟ ಕಾಮಲ್ ಹಾಸನ್ ಕನ್ನಡ ಚಿತ್ರರಂಗದ ಆ ದಿನಗಳು ಮತ್ತೆ ಮರುಕಳಿಸಿದೆ ಎಂದು ಹೇಳಿದರು. 

those days are returning Kamal Haasan lauds Rishab Shetty's Kantara sgk
Author
First Published Dec 13, 2022, 1:05 PM IST

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಯಾರಿಗೆ ಇಷ್ಟವಾಗಿಲ್ಲ. ಬಹುತೇಕರು ಕಾಂತಾರ ನೋಡಿ ಮೆಚ್ಚಿಕೊಂಡಿದ್ದಾರೆ, ಹಾಡಿ ಹೊಗಳಿದ್ದಾರೆ. ದೊಡ್ಡ ಕಲಾವಿದರು ಕೂಡ ಕಾಂತಾರ ಚಿತ್ರಕ್ಕೆ ಫಿದಾ ಆಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಪ್ರಭಾಸ್, ಅನುಷ್ಕಾ ಶೆಟ್ಟಿ ಸೇರಿದಂತೆ ಅನೇಕರು ಕಾಂತಾರ ನೋಡಿ ಇಷ್ಟಪಟ್ಟಿದ್ದಾರೆ. ಬಾಲಿವುಡ್‌ನ ಅನೇಕ ಕಲಾವಿದರೂ ಸಹ ಕಾಂತಾರ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಕಮಲ್ ಹಾಸನ್ ಹೇಳಿರುವ ಮಾತುಗಳು ಕನ್ನಡಿಗರಿಗೆ ಹೆಮ್ಮೆ ಎನಿಸಿದೆ. ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತಿ ಕಮಲ್ ಹಾಸನ್ ಕನ್ನಡ ಸಿನಿಮಾವನ್ನು ಹೊಗಳಿದ್ದಾರೆ. ಕನ್ನಡ ಚಿತ್ರರಂಗದ ಆ ದಿನಗಳು ಮತ್ತೆ ಮರುಕಳಿಸಿದೆ ಎಂದು ಹೇಳಿದ್ದಾರೆ. 

ಫಿಲ್ಮ್ ಕಂಪ್ಯಾನಿಯನ್‌ ಜೊತೆ ಮಾತನಾಡಿದ ಕಮಲ್ ಹಾಸನ್ ಕಾಂತಾರ ಚಿತ್ರದ ಬಗ್ಗೆ ಹೇಳಿದ್ದಾರೆ. ಈ ವರ್ಷ ಅತೀ ಹೆಚ್ಚು ಸದ್ದು ಮಾಡಿದ ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದು. ಕಡಿಮೆ ಬಜೆಟ್ ನಲ್ಲಿ ಬಂದ ಕಾಂತಾರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮೊತ್ತದ ಕಮಾಯಿ ಮಾಡಿದೆ. 2022ರ ಸಿನಿಮಾದ ಬಗ್ಗೆ ಮಾತನಾಡಿದ ಕಮಲ್ ಹಾಸನ್ ಕಾಂತಾರ ಹೆಸರು ತೆಗೆದುಕೊಂಡರು. 'ಕಾಂತಾರ ಒಂದು ಉತ್ತಮ ಉದಾಹರಣೆಯಾಗಿದೆ. ನಾನು ಕೂಡ ಕರ್ನಾಟಕ ಚಿತ್ರರಂಗಕ್ಕೆ ಸೇರಿದವನಾಗಿದ್ದರಿಂದ ಖುಷಿಯಾಗುತ್ತದೆ. ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಜನರು ವಿಭಿನ್ನವಾಗಿ ಯೋಚಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ವಂಶವೃಕ್ಷ, ಒಂದಾನೊಂದು ಕಾಲದಲ್ಲಿ ಮತ್ತು ಕಾಡು ಮುಂತಾದ ಚಿತ್ರಗಳನ್ನು ನೀಡಿದ ನಾಡು ಕರ್ನಾಟಕ. ಕನ್ನಡ ಚಿತ್ರರಂಗದ ಆ ದಿನಗಳು ಮತ್ತೆ ಮರುಕಳಿಸಿದೆ ಎಂದು ನನಗೆ ಅನಿಸುತ್ತದೆ' ಎಂದು ಕಮಲ್ ಹಾಸನ್ ಹೇಳಿದ್ದಾರೆ. 

ಕಾಂತಾರ ನೋಡಿ ತುಂಬಾ ಕಲಿತೆ; ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್

ಇನ್ನೂ ಇದೇ ವೇಳೆ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಕೂಡ ಮಾತನಾಡಿ ಕಾಂತಾರ ಸಿನಿಮಾವನ್ನು ಹೊಗಳಿದರು. ಕಮಲ್ ಹಾಸನ್ ಮತ್ತು ಪೃಥ್ವಿರಾಜ್ ಮಾತನಾಡಿರುವ ವಿಡಿಯೋವನ್ನು ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

ಕಾಂತಾರ ಬಗ್ಗೆ

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ಮಿಂತಿದ್ದಾರೆ. ಕಿಶೋರ್ ಕುಮಾರ್, ಅಚ್ಯುತ್ ಸೇರಿದಂತೆ ಅನೇಕರು ಕಲಾವಿದರು ಬಣ್ಣ ಹಚ್ಚಿದ್ದಾರೆ. ಅನೇರ ರಂಗಭೂಮಿ ಕಲಾವಿದರು ನಟಿಸಿರುವುದು ವಿಶೇಷ. ಹೊಂಬಾಳೆ ಫಿಲ್ಸ್ಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದೆ. 

ಕಾಂತಾರ 2 ಮಾಡುವ ಮೊದಲು ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಲು ದೈವ ಹೇಳಿದೆ; ದೈವ ನರ್ತಕ

ಕಾಂತಾರ-2

ಕಾಂತಾರ ಸಕ್ಸಸ್ ಆದ ಬಳಿಕ ಕಾಂತಾರ ಪಾರ್ಟ್-2ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ರಿಷಬ್ ಮತ್ತು ತಂಡ. ಈಗಾಗಲೇ ಪಂಜುರ್ಲಿ ಬಳಿ ಅನುಮತಿ ಕೂಡ ಕೇಳಿರುವ ರಿಷಬ್ ಶೆಟ್ಟಿ ಮುಂದಿನ ವರ್ಷದಿಂದ ಪಾರ್ಟ್-2 ಪ್ರಾರಂಭಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಮುಂದಿನ ವರ್ಷಾರಂಭದಲ್ಲಿ ಕಾಂತಾರ ಚಿತ್ರೀಕರಣ ಪ್ರಾರಂಭವಾಗಲಿದ್ದು 2024 ಫೆಬ್ರವರಿಗೆ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. ಮೊದಲ ಭಾಗ ನೋಡಿದ ಪ್ರೇಕ್ಷಕರಿಗೆ ಪಾರ್ಟ್-2 ಮೇಲಿನ ಕುತೂಹಲ ಹೆಚ್ಚಾಗಿದೆ. 

Follow Us:
Download App:
  • android
  • ios