ಅಡುಗೆ ಮಾಡುತ್ತಿದ್ದೇನೆ, ಕತೆ ಬರೆಯುತ್ತಿದ್ದೇನೆ; ಮಾನ್ವಿತಾ ಕಾಮತ್ ಲಾಕ್‌ಡೌನ್ ಡೈರಿ
ಲಾಕ್‌ಡೌನ್‌ಗೂ ಮೊದಲು ಕನ್ನಡ, ತೆಲುಗು ಚಿತ್ರಗಳು, ಆ್ಯಡ್ ಶೂಟ್ ಅಂತ ಬ್ಯುಸಿಯಾಗಿದ್ದರು ಮಾನ್ವಿತಾ ಕಾಮತ್. ಆದರೆ ಲಾಕ್‌ಡೌನ್ ಲೈಫ್‌ನಲ್ಲಿ ಅವರು ಧ್ಯಾನಸ್ಥರಾಗಿದ್ದಾರೆ. ಮೌನವಾಗಿರುವುದೇ ಪ್ರಿಯವಾಗತೊಡಗಿದೆ. ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್‌ಸ್ ಜೊತೆಗಿನ ಸಂವಾದದಲ್ಲಿ ಅವರು ತೆರೆದಿಟ್ಟ ಹತ್ತು ವಿಚಾರಗಳು ಇಲ್ಲಿವೆ.
1. ಲಾಕ್‌ಡೌನ್‌ನಲ್ಲಿ ಕತೆಗಳ ಕುಕ್ಕಿಂಗು, ಫುಡ್ ಕುಕ್ಕಿಂಗು ಜೊತೆ ಜೊತೆಗೇ ಸಾಗುತ್ತಿದೆ. ಇದರ ಜೊತೆಗೆ ನನ್ನ ಪ್ರೀತಿ ಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳೋದು ಈ ವಿರಾಮದ ಒಂದು ಭಾಗ.
2. ಮೌನ, ಅದರಲ್ಲಿರುವ ಶಾಂತಿ ಬಹಳ ಇಷ್ಟವಾಗುತ್ತಿದೆ. ದಿನದ ಬಹುಭಾಗ ಮೌನದಲ್ಲೇ ಕಳೆದುಹೋಗುತ್ತಿದೆ. ಮನಸ್ಸು ಧ್ಯಾನಸ್ಥವಾಗುತ್ತಿದೆ. ಇಂಥದ್ದೊಂದು ಬದಲಾವಣೆ ಮನಸ್ಸಿಗೆ ಹೆಚ್ಚು ಹತ್ತಿರವಾಗುತ್ತಿದೆ.
ಸ್ಕ್ರಿಪ್ಟ್ ರೈಟರ್ ಆದ ಮಾನ್ವಿತಾ ಹರೀಶ್; ವಿಭಿನ್ನವಾಗಿ ರೆಡಿಯಾಗಿವೆ ಎರಡು ಕಥೆಗಳು!
3. ಈ ಟೈಮ್‌ನಲ್ಲಿ ಫಿಟ್‌ನೆಸ್ ಮೇಂಟೇನ್ ಮಾಡೋದು ಹೇಗೆ ಅಂದ್ರೆ ಚೆನ್ನಾಗಿ ಉಸಿರಾಡಿ ಅಷ್ಟೇ. ಉಸಿರನ್ನು ದೀರ್ಘವಾಗಿ ಒಳಗೆಳೆದುಕೊಳ್ಳಿ. ದೀರ್ಘವಾಗಿ ಹೊರಗೆ ಬಿಡಿ. ಯೋಗ ಪ್ರಾಣಾಯಾಮ ಸಾಧ್ಯ ಆದ್ರೆ ಮಾಡಿ.
4. ಈ ಹಿಂದೆ ಸಿನಿಮಾವೊಂದನ್ನು ಡೈರೆಕ್ಷನ್ ಮಾಡುವ ಆಸೆಯಿದೆ ಎಂದು ಹೇಳಿದ್ದೆ. ಆ ಕನಸು ಇನ್ನೂ ಇದೆ. ಆದರೆ ಆ ಪ್ರಾಜೆಕ್‌ಟ್ ಒಂದಿಷ್ಟು ರೀಸರ್ಚ್ ಹಾಗೂ ಸಮಯ ಬೇಡುತ್ತದೆ. ಸದ್ಯಕ್ಕೆ ನಾನು ನಟನೆಯ ಬಗ್ಗೆ ಮಾತ್ರ ಚಿಂತಿಸುತ್ತಿದ್ದೇನೆ. ಮುಂದೆ ಈ ಎರಡೂ ಕೆಲಸಗಳನ್ನೂ ಒಟ್ಟೊಟ್ಟಿಗೆ ನಿರ್ವಹಿಸುವ ಯೋಚನೆ ಇದೆ.
5. ‘ಎಡಕಲು ಗುಡ್ಡದ ಮೇಲೆ’ ನನ್ನ ಫೇವರಿಟ್ ಸಿನಿಮಾ. ಪುಟ್ಟಣ್ಣ ಕಣಗಾಲ್ ಅವರ ಎಲ್ಲ ಸಿನಿಮಾಗಳೂ ಇಷ್ಟ. ಅಪ್ಪಟ ಸಿನಿಮಾ ಪ್ರೇಮಿಯಾದ ನನಗೆ ಅವರ ಚಿತ್ರಗಳು ಬಹಳ ಇಷ್ಟವಾಗುತ್ತವೆ.
ತಂದೆ ಜೊತೆ ಒಂದು ಫೋಟೋ ಇಲ್ಲ; ಕಣ್ಣೀರಿಟ್ಟ ಮಾನ್ವಿತಾಗೆ ಸಿಗ್ತು ಬಿಗ್ ಸರ್ಪ್ರೈಸ್!
6. ಬೆಂಗಳೂರಿನಲ್ಲಿ ನನ್ನ ಫೇವರಿಟ್ ಜಾಗ ರಂಗ ಶಂಕರ. ಅಲ್ಲಿ ನಾಟಕ ನೋಡೋದು, ಆ ಬಗ್ಗೆ ಚರ್ಚಿಸೋದು ಒಳ್ಳೆಯ ಅನುಭವ.
7. ನಾನೀಗ ಒಂದು ವಾರ್ ಸ್ಟೋರಿ ಓದುತ್ತಿದ್ದೇನೆ. ಬಹಳ ಗಾಢವಾಗಿ ಓದಿಸಿಕೊಳ್ಳುವ ಈ ಪುಸ್ತಕ ಎರಡನೇ ಮಹಾಯುದ್ಧದಲ್ಲಿ ಬದುಕುಳಿದ ವ್ಯಕ್ತಿಯ ಕತೆ. ಪ್ರೀತಿ, ಅಪಾಯ, ಭಯ ಮತ್ತು ಭರವಸೆ ಈ ಕತೆಯ ಜೀವಾಳ.