ಸ್ಟಾರ್‌ ಸಿನಿಮಾಗಳಿಗೆ ನಿರ್ಮಾಪಕರೇ ಇಲ್ಲ: ಇವೆಲ್ಲಾ ಸರಿ ಹೋಗುವುದು ಯಾವಾಗ?

ಆ ದೊಡ್ಡ ನಿರ್ಮಾಪಕರು ಈಗ ಎಲ್ಲಿದ್ದಾರೆ ಎಂದು ನೋಡಿದರೆ ಯಾರೂ ಸಿನಿಮಾ ಬಗ್ಗೆ ಮಾತನಾಡುತ್ತಲೇ ಇಲ್ಲ. ಕೆಲವರಂತೂ ಘೋಷಣೆ ಆಗಿರುವ ಸಿನಿಮಾಗಳನ್ನೂ ನಿಲ್ಲಿಸಿರುವ ಸುದ್ದಿ ಬರುತ್ತಿದೆ.
 

There Are No Producers for Star Movies in Sandalwood Heres the Reason gvd

1. ಬಿಗ್ ಬಜೆಟ್ ಸಿನಿಮಾ ವಿತರಣೆಗೆ ವಿತರಕರು ಮುಂದೆ ಬರುತ್ತಿಲ್ಲ.

2. ಶಕ್ತ ನಿರ್ಮಾಣ ಸಂಸ್ಥೆಗಳು ಸಿನಿಮಾ ನಿರ್ಮಾಣ ಮಾಡುತ್ತಿಲ್ಲ.

3. ಎಷ್ಟೇ ದೊಡ್ಡ ಹಿಟ್ ಸಿನಿಮಾ ಆದರೂ ರಿಲೀಸ್‌ಗೆ ಮೊದಲು ವ್ಯಾಪಾರ ಆಗುತ್ತಿಲ್ಲ.

4. ದೊಡ್ಡ ಹಿಟ್ ಕೊಟ್ಟವರ ಸಂಭಾವನೆ ಕೇಳಿ ನಿರ್ಮಾಪಕರು ಹೆಜ್ಜೆ ಮುಂದೆಯೇ ಇಡುತ್ತಿಲ್ಲ.

- ಹೀಗೆ ಲಿಸ್ಟ್‌ ಮುಂದುವರಿಯುತ್ತಾ ಹೋಗುತ್ತದೆ. ಸಹೃದಯ ಪ್ರೇಕ್ಷಕರು ರಿಲೀಸ್‌ ಆಗಲಿರುವ ಹೊಸ ಸಿನಿಮಾಗಳ ಪಟ್ಟಿ ನೋಡಿ. ಒಂದೆರಡು ಹೆಸರು ಬಿಟ್ಟರೆ ಬೇರೆ ನೆನಪಾಗುವುದಿಲ್ಲ. ಯಾಕೆಂದರೆ ಅಂಥಾ ದೊಡ್ಡ ಸಿನಿಮಾಗಳೇ ಇಲ್ಲ. ಅದಕ್ಕೆ ಕಾರಣ ಹೀರೋಗಳ ದೊಡ್ಡ ಬಜೆಟ್‌ನ ಸಿನಿಮಾ ನಿರ್ಮಾಣಕ್ಕೆ ಉಂಟಾಗಿರುವ ಭಯ. ವರ್ಷದ ಹಿಂದೆ ಥಿಯೇಟರ್‌ ಉಳಿಸಿಕೊಳ್ಳಬೇಕು ಎಂಬ ಕೂಗು ಎದ್ದಿತ್ತು. ಈಗ ಚಿತ್ರರಂಗ ಉಳಿಸಿಕೊಳ್ಳಬೇಕು, ನಿರ್ಮಾಪಕರನ್ನು ಉಳಿಸಬೇಕು ಎಂಬ ಕೂಗು ಏಳಬೇಕಾದ ಸಂದರ್ಭ ಒದಗಿಬಂದಿದೆ. ಮೊದಲು ನಿರ್ಮಾಪಕರು ಸೋತರೂ ಗೆದ್ದರೂ ಸಿನಿಮಾ ಮಾಡುತ್ತಲೇ ಇದ್ದರು. 

ಜೀವನಕ್ಕೆ ತೊಂದರೆ ಆಗದಂತೆ ಅಪ್ಪ ವ್ಯವಸ್ಥೆ ಮಾಡಿದ್ದಾರೆ: ಕಾಶಿನಾಥ್‌ ಪುತ್ರ ಅಭಿಮನ್ಯು

ಆ ದೊಡ್ಡ ನಿರ್ಮಾಪಕರು ಈಗ ಎಲ್ಲಿದ್ದಾರೆ ಎಂದು ನೋಡಿದರೆ ಯಾರೂ ಸಿನಿಮಾ ಬಗ್ಗೆ ಮಾತನಾಡುತ್ತಲೇ ಇಲ್ಲ. ಕೆಲವರಂತೂ ಘೋಷಣೆ ಆಗಿರುವ ಸಿನಿಮಾಗಳನ್ನೂ ನಿಲ್ಲಿಸಿರುವ ಸುದ್ದಿ ಬರುತ್ತಿದೆ. ಅದಕ್ಕೆ ಕಾರಣ ಆರ್ಥಿಕವಾಗಿ ದೊಡ್ಡ ಮಟ್ಟಿನಲ್ಲಿ ಸೋಲುವ ಆತಂಕ. ಈಗ ಸಿನಿಮಾ ಜಗತ್ತಿನಲ್ಲಿ ಬರೀ ಕೋಟಿ ಲೆಕ್ಕ. ಒಬ್ಬ ಹೀರೋ ಸಿನಿಮಾ ಮಾಡಬೇಕೆಂದರೆ ಕನಿಷ್ಠ 20 ಕೋಟಿ ರೂಪಾಯಿಗಿಂತ ಕಡಿಮೆ ಇದ್ದರೆ ಸಾಕಾಗುವುದಿಲ್ಲ. ಆದರೆ ಆ ಇಪ್ಪತ್ತು ಕೋಟಿ ವಾಪಸ್‌ ಬರುವ ಯಾವುದೇ ಭರವಸೆ ಇಲ್ಲ. ಸಿನಿಮಾ ರಿಲೀಸ್‌ಗೆ ಮೊದಲು ಯಾವ ಟಿವಿಯವರು, ಯಾವ ಓಟಿಟಿಯವರೂ ಸಿನಿಮಾ ಖರೀದಿ ಮಾಡುತ್ತಿಲ್ಲ. 

ದೊಡ್ಡ ಸಿನಿಮಾಗಳು ಎಷ್ಟರ ಮಟ್ಟಿಗೆ ವಿತರಕರಿಗೆ ಹೊಡೆತ ಕೊಡುತ್ತಿವೆ ಎಂದರೆ ಕೆಲವು ದೊಡ್ಡ ಹೊಸ ಸಿನಿಮಾಗಳಿಗೆ ವಿತರಕರೇ ಸಿಗುತ್ತಿಲ್ಲ. ತಾವೇ ಮುನ್ನುಗ್ಗಿ ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಿದರೂ ಜನ ಬರುತ್ತಾರೆ ಎಂಬ ಖಾತ್ರಿ ಇಲ್ಲ. ಹಾಗಾಗಿಯೇ ದೊಡ್ಡ ದೊಡ್ಡ ನಿರ್ಮಾಪಕರೇ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದಲ್ಲಿ, ಅಭಿಷೇಕ್‌ ಅಂಬರೀಶ್‌ ನಟನೆಯಲ್ಲಿ ಹೊಸ ಸಿನಿಮಾ ಘೋಷಣೆಯಾಗಿತ್ತು. ಆದರೆ ಅದಿನ್ನೂ ಆರಂಭವೇ ಆಗಿಲ್ಲ. ಗಾಂಧಿನಗರದ ಮೂಲಗಳ ಪ್ರಕಾರ ಆ ಸಿನಿಮಾ ನಿಂತಿದೆ. 

ಸಿನಿಮಾ ಸೆಟ್‌ನಲ್ಲಿ ನಿರ್ದೇಶಕರು ಹೇಳಿದ್ರೂ ಈ ಸ್ಟಾರ್‌ ನಟಿಗೆ ಕಿರಿಕಿರಿ ಕೊಟ್ಟಿದ್ರಂತೆ ನಟ ಮಹೇಶ್ ಬಾಬು!

ಪ್ರೇಮ್‌ ನಿರ್ದೇಶನ ಮಾಡಬೇಕಿದ್ದ, ದರ್ಶನ್‌ ನಟಿಸಬೇಕಿದ್ದ ಸಿನಿಮಾವನ್ನು ಕೂಡ ಆರಂಭವಾಗುವ ಮೊದಲೇ ನಿಲ್ಲಿಸಲಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಹೊಂಬಾಳೆ ಫಿಲ್ಮ್ಸ್‌ ಕೂಡ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಕಳೆದ ವರ್ಷ ಘೋಷಣೆಯಾಗಿದ್ದ ಕೆಆರ್‌ಜಿ ನಿರ್ಮಾಣದ, ಸುದೀಪ್ ನಿರ್ದೇಶನದ ಸಿನಿಮಾದ ಸುದ್ದಿಯೂ ಇಲ್ಲ. ಅದರ ಬೆನ್ನಲ್ಲಿ ‘ಉತ್ತರಕಾಂಡ’ ಸಿನಿಮಾ ಕೂಡ ತಡವಾಗುತ್ತಿದೆಯಂತೆ. ಹಲವಾರು ಹೀರೋಗಳು ಕ್ಯಾಮೆರಾ ಮುಂದೆ ಹೋಗಲು ಒಳ್ಳೆಯ ಸಂದರ್ಭಕ್ಕಾಗಿ ಕಾಯುತ್ತಲೇ ಇದ್ದಾರೆ. ಆದರೆ ಒ‍ಳ್ಳೆಯ ಸಂದರ್ಭ ಬರುವುದು ಯಾವಾಗ? ಇವೆಲ್ಲಾ ಸರಿ ಹೋಗುವುದು ಯಾವಾಗ? ಸದ್ಯಕ್ಕಂತೂ ಈ ಭಯ, ಆತಂಕ, ಸಂಕಷ್ಟ ಮುಂದುವರಿಯುತ್ತದೆ.

Latest Videos
Follow Us:
Download App:
  • android
  • ios