ಕಣ್ಣೆದುರೇ ಸಾವಿದ್ದರೂ ಇಂಥ ತುಂಟ ನಗು ಸಾಧ್ಯವೆ? ಅಪರ್ಣಾರನ್ನು ಬಿ.ಆರ್.​ಛಾಯಾ ಭೇಟಿಯಾದ ಸಮಯದ ವಿಡಿಯೋ...

ಕ್ಯಾನ್ಸರ್​ನಿಂದ ಹಾಸಿಗೆ ಹಿಡಿದಿದ್ದ ಅಪರ್ಣಾ ಅವರನ್ನು ಗಾಯಕಿಯರಾದ ಬಿ.ಆರ್​.ಛಾಯಾ  ಮತ್ತು ಸುನಿತಾ ಭೇಟಿಯಾಗಲು ಹೋದಾಗಿನ ವಿಡಿಯೋ ವೈರಲ್​ ಆಗ್ತಿದೆ...
 

The video of singer BR Chaya gone viral who visited Aparna when bedridden due to cancer suc

ಸಾವು ಶಬ್ದ ಕೇಳಿದರೆನೇ ಅದೇನೋ ಭಯ. ಆ ಭಯ ಜನಸಾಮಾನ್ಯರು ಯಾರನ್ನೂ ಬಿಡುವುದಿಲ್ಲ. ನಿನ್ನ ಆಯಸ್ಸು ಇಂತಿಷ್ಟೇ ಎಂದು ಮೊದಲೇ ಗೊತ್ತಾದರಂತೂ ಆಯಸ್ಸು ಮುಗಿಯುವ ಮುನ್ನವೇ ಕೊರಗಿ ಸಾಯಬಹುದು. ಆದರೆ ನಿನ್ನೆ ಎಲ್ಲರನ್ನೂ ಬಿಟ್ಟು ಅಗಲಿದ ಕರುನಾಡ ಕಣ್ಮಣಿ ಅಪರ್ಣಾ ವಸ್ತಾರೆ ವಿಷಯದಲ್ಲಿ ಹಾಗೆ ಆಗಲೇ ಇಲ್ಲ. ಶ್ವಾಸಕೋಶದ ಕ್ಯಾನ್ಸರ್​ನಿಂದ ಸಾವು ಸಮೀಪವೇ ಇದೆ ಎನ್ನುವುದು ಇವರಿಗೆ ತಿಳಿದಿತ್ತು. ಈ ವಿಷಯವನ್ನು ಖುದ್ದು ಅವರ ಪತಿ ಕೂಡ ಹೇಳಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಅವರು ನಡೆಸಿದ ಹೋರಾಟದ ಬಗ್ಗೆಯೂ ಪತಿ ನಾಗರಾಜ್​ ಅವರೂ ತಿಳಿಸಿದ್ದಾರೆ. ಒಂದೂವರೆ ವರ್ಷ ಆಕೆ ಬದುಕಿದ್ದೇ ಹೆಚ್ಚು ಎಂದಿದ್ದಾರೆ. ಅಂದರೆ ಆಗಲೇ ಅಪರ್ಣಾ ಅವರಿಗೂ ತಿಳಿದಿತ್ತು. ಅದರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್​ ಎಂದರೆ ಉಳಿದವುಗಳಿಗಿಂತಲೂ ತುಸು ಹೆಚ್ಚೇ ಜೀವಕ್ಕೆ ಅಪಾಯಕಾರಿಯೂ ಹೌದು. ಇದೇನೂ ಅಪರ್ಣಾ ಅವರಿಗೆ ತಿಳಿಯದದ್ದೇನಲ್ಲ. ಆದರೆ ಅಪರ್ಣಾ ಸಾವಿನ ಬಗ್ಗೆ ಚಿಂತಿಸಲೇ ಇಲ್ವಾ? ಸಾವು ಕಣ್ಣೆದುರು ಇದ್ದರೂ ಇಂಥ ನಗು ಯಾರಿಂದಾದರೂ ಸಾಧ್ಯವೇ ಎನ್ನುವಂಥ ವಿಡಿಯೋ ಒಂದನ್ನು ಖ್ಯಾತ ಗಾಯಕಿ ಬಿ.ಆರ್​.ಛಾಯಾ ಅವರು ಹಂಚಿಕೊಂಡಿದ್ದು, ಅದೀಗ ವೈರಲ್​  ಆಗುತ್ತಿದೆ.

 ಛಾಯಾ ಮತ್ತು ಇನ್ನೋರ್ವ ಗಾಯಕಿ ಸುನಿತಾ ಅವರು ಕ್ಯಾನ್ಸರ್​ನಿಂದ ಹಾಸಿಗೆ ಹಿಡಿದಿದ್ದ ಅಪರ್ಣಾ ಅವರನ್ನು ನೋಡಲು ಹೋದ ಸಮಯ. ಕಿಮೋಥೆರಪಿಯಿಂದ ಅಪರ್ಣಾ ಅವರ ಕೂದನ್ನು ಕತ್ತರಿಸಲಾಗಿತ್ತು. ಅವರು ಹಾಸಿಗೆಯ ಮೇಲೆ ಇದ್ದರು. ಆದರೂ ಅದೇ ನಗು, ಅದೇ ತುಂಟಾಟ. ತಮ್ಮ ಹೊಸ ಹೇರ್​ಸ್ಟೈಲ್​ ತೋರಿಸಿ ಅಪರ್ಣಾ ಹೇಗಿದೆ ಎಂದು ನಕ್ಕಿದ್ದಾರೆ. ಅದಕ್ಕೆ ಛಾಯಾ ಮತ್ತು ಸುನಿತಾ ಅವರು ನೀನು ಬಿಡಮ್ಮಾ, ಸ್ವೀಟ್​ 16 ಎಂದು ಹೇಳಿದ್ದಾರೆ. ನಿಜ ನಿಜ ನಾನು ಸ್ವೀಟ್​ ಸಿಕ್ಸ್​ಟೀನೇ... ಎಂದಾಗ ಛಾಯಾ ಅವರು ಹುಚ್ಚು ಕೋಳಿ ಮನಸ್ಸು ಅದು ಹದಿನಾರರ ವಯಸ್ಸು ಹಾಡು ಹಾಡಿದ್ದಾರೆ. ಆಗ ಅಪರ್ಣಾ ತಮ್ಮ ಎಂದಿನ ನಗುವಿನಿಂದ ದೊಡ್ಡ ಸ್ಮೈಲ್​ ಕೊಟ್ಟು ವಾವ್ಹ್​ ಎಂದಿದ್ದಾರೆ. ಇದೇ ವೇಳೆ ಛಾಯಾ ಮತ್ತು ಸುನಿತಾ ಹಲವು ಹಾಡುಗಳನ್ನು ಹೇಳುವ ಮೂಲಕ ಅಪರ್ಣಾ ಅವರ ಜೊತೆಗೂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದೆ.

ಕನ್ನಡಕ್ಕೆ ಎಂದೆಂದಿಗೂ ನೀವೇ ಮಹಾ ನಿರೂಪಕಿ: ಅಪರ್ಣಾಗೆ ಅನುಶ್ರೀ ಕಂಬನಿ

ಈ ವಿಡಿಯೋ ನೋಡಿದರೆ, ನಿಜಕ್ಕೂ ಅಪರ್ಣಾ ಇಷ್ಟು ಸ್ಟ್ರಾಂಗ್​ ಇದ್ರಾ? ತಮ್ಮ ಸಾವು ಸಮೀಪದಲ್ಲಿಯೇ ಇದ್ದರೂ ಯಾರಿಗಾದರೂ ಇಷ್ಟೊಂದು ಖುಷಿಯಿಂದ, ನೋವನ್ನು ಮರೆತು ನಗುವಿಂದ ಇರಲು ಸಾಧ್ಯವೆ ಎನ್ನುವ ಪ್ರಶ್ನೆ ಮೂಡದೇ ಇರಲು ಸಾಧ್ಯವಿಲ್ಲ. ಇದೇ ವೇಳೆ ಇವರ ಇನ್ನೊಂದು ವಿಡಿಯೋ ಕೂಡ ವೈರಲ್​ ಆಗುತ್ತಿದ್ದು, ಅದರಲ್ಲಿ ಅಪರ್ಣಾ, ಜೀವನದಲ್ಲಿ ನೋವು ಇರುವುದು ಸಹಜ. ಅದನ್ನು ಮರೆತು ಬದುಕಬೇಕು ಎಂದು ಹೇಳಿದ್ದಾರೆ. 

ಅಪರ್ಣಾ ಕುರಿತು ಅವರ ಪತಿ ನಾಗರಾಜ್​, ವೈಯಕ್ತಿವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನು ಬಿಳ್ಕೊಡಲಿಕ್ಕೆ ಇಷ್ಟಪಡ್ತೀನಿ. ಹಾಗಂತ ಆಕೆ ನನಗೆ ಸೇರೋಕೆ ಮುಂಚೆನೇ ಹೆಚ್ಚಾಗಿ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ‌ ಎಲ್ಲವನ್ನೂ ಹೇಳುವಂತೆ ತಿಳಿಸಿದ್ದಳು. ಎರಡು ವರ್ಷಗಳ ಹಿಂದೆ ಜುಲೈನಲ್ಲಿ ಶ್ವಾಸಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಇನ್ನೂ ಆರು ತಿಂಗಳು ಬದುಕಬಹುದು ಅಂತಾ ಹೇಳಿದ್ರು. ಅವರ ಛಲಗಾತಿ ನಾನು ಬದುಕ್ತಿನಿ ಅಂತಾ ಹೇಳ್ತಿದ್ಳು. ಅಲ್ಲಿಂದ ಜನವರಿತನಕ ಶಕ್ತಿಮೀರಿ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ಳು. ಫೆಬ್ರವರಿಯಿಂದ ಕೈಚೆಲ್ಲಿದಳು. ಕ್ಯಾನ್ಸರ್ ಅಂತಾ ಗೊತ್ತಿದ್ದರೂ ಅವಳು  ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ಳು. ನಿಜಕ್ಕೂ ಅವಳು ಧೀರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ನಾವಿಬ್ಬರೂ ಸೋತಿದ್ದೀವಿ. ಬರೋ ಅಕ್ಟೋಬರ್ ಗೆ ಅವಳಿಗೆ 58 ವರ್ಷ ತುಂಬ್ತಿತ್ತು ಕಣ್ಣೀರಾಗಿದ್ದಾರೆ. 

ತುಂಬಾ ಬೇಗ ಹೊರಟ್ ಬಿಟ್ರಿ; ಮಜಾ ಟಾಕೀಸ್ ವರು ಇಲ್ಲದೆ ರಾಣಿ ಹೇಗಿರ್ತಾಳೆ?

 

 
 
 
 
 
 
 
 
 
 
 
 
 
 
 

A post shared by B.R. Chaya (@brchaya2)

Latest Videos
Follow Us:
Download App:
  • android
  • ios