ತೆಲುಗು ಸ್ಟಾರ್ ಜೂ.ಎನ್ ಟಿ ಆರ್ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಜೂಎನ್ ಟಿ ಆರ್ ವಿಶ್ ಕನ್ನಡಿಗರ ಹೃದಯ ಗೆದ್ದಿದೆ. 

ನವೆಂಬರ್​ ಕನ್ನಡಿಗರಿಗೆ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಎಲ್ಲಿ ನೋಡಿದ್ರು ಕೆಂಪು-ಹಳದಿ ಧ್ವಜ ರಾರಾಜಿಸುತ್ತದೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಇಡೀ ಕರ್ನಾಟಕ ಸಜ್ಜಾಗಿದೆ. ಈ ಬಾರಿಯ ರಾಜ್ಯೋತ್ಸವ ಸಂಭ್ರಮ ಅಪ್ಪು ಅಭಿಮಾನಿಗಳಿಗೆ ಹೆಚ್ಚು ವಿಶೇಷವಾಗಿರಲಿದೆ. ನವೆಂಬರ್​ 1ರಂದು ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸ್ಟಾರ್​ ನಟರಾದ ಜೂನಿಯರ್​ ಎನ್​ಟಿಆರ್​ ಹಾಗೂ ರಜನಿಕಾಂತ್​ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಈ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಹಾಜರಾಗುತ್ತಿರುವ ಜೂ.ಎನ್ ಟಿ ಆರ್ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಜೂಎನ್ ಟಿ ಆರ್ ವಿಶ್ ಕನ್ನಡಿಗರ ಹೃದಯ ಗೆದ್ದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂದಹಾಗೆ ಪುನೀತ್​ ರಾಜ್​ಕುಮಾರ್​ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಕಡೆಯಿಂದ ಜೂ.ಎನ್ ಟಿ ಆರ್ ಆಹ್ವಾನ ಕಳಿಸಲಾಗಿತ್ತು. ಅದನ್ನು ಸ್ವೀಕರಿಸಿರುವ ಅವರು ಅಧಿಕೃತವಾಗಿ ಪತ್ರ ಮೂಲಕ ತಮ್ಮ ಉತ್ತರ ತಿಳಿಸಿದ್ದಾರೆ. ಈ ಸಮಾರಂಭಕ್ಕೆ ತಾವು ಬರುವುದು ಖಚಿತ ಎಂದು ಅವರು ಹೇಳಿದ್ದಾರೆ. ಜೂ.ಎನ್ ಟಿ ಆರ್ ಪತ್ರದಲ್ಲಿ ಸಮಾರಂಭಕ್ಕೆ ಹಾಜರಾಗುವ ಬಗ್ಗೆ ತಿಳಿಸುವ ಜೊತೆಗೆ ರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ. 

Puneeth Rajkumar; Jr NTR ಮನೆಯಲ್ಲಿ ಅಪ್ಪು ಫೋಟೋ, ಗೆಳೆಯನಿಗೆ ತೆಲುಗು ಸ್ಟಾರ್ ವಿಶೇಷ ಗೌರವ

‘ಅಪ್ಪು ಅವರಿಗೆ ಈ ಗೌರವ ಸಲ್ಲುತ್ತಿರುವಾಗ ನಾನು ಅಲ್ಲಿ ಇರುವುದು ನನ್ನ ಪಾಲಿಗೆ ಹೆಮ್ಮೆಯ ಕ್ಷಣ ಮಾತ್ರವಲ್ಲದೇ ಅದು ನನ್ನ ಕರ್ತವ್ಯ ಕೂಡ ಹೌದು. ಕರ್ನಾಟಕ ಸರ್ಕಾರ ಆಯೋಜಿಸಿರುವ ಆ ಸಮಾರಂಭದಲ್ಲಿ ನನ್ನ ಉಪಸ್ಥಿತಿ ಇರುತ್ತದೆ ಎಂಬುದನ್ನು ಈ ಮೂಲಕ ಖಚಿತ ಪಡಿಸುತ್ತೇನೆ. ಇದೇ ಸಂದರ್ಭದಲ್ಲಿ ನಾನು ಕರುನಾಡಿನ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ತಿಳಿಸುತ್ತೇನೆ’ ಎಂದು ಜೂನಿಯರ್​ ಎನ್​ಟಿಆರ್​ ಪತ್ರ ಬರೆದಿದ್ದಾರೆ.

ಅಂದಹಾಗೆ ಜೂನಿಯರ್​ ಎನ್​ಟಿಆರ್​ ಅವರ ತಾಯಿ ಕರ್ನಾಟಕದ ಕುಂದಾಪುರದವರು. ಹಾಗಾಗಿ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ. ಅನೇಕ ವೇದಿಕೆಗಳಲ್ಲಿ ಅವರು ಈ ವಿಚಾರವನ್ನು ಹೇಲಿಕೊಂಡಿದ್ದಾರೆ. ಅಲ್ಲದೆ ಜೂ.ಎನ್ ಟಿ ಆರ್ ಕನ್ನಡವನ್ನು ಚೆನ್ನಾಗಿಯೇ ಮಾತನಾಡುತ್ತಾರೆ. ಅನೇಕ ಬಾರಿ ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಇದೀಗ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ಕನ್ನಡಿಗರಿಗೂ ಸಂತಸದ ವಿಚಾರವಾಗಿದೆ. 

ಪ್ರಶಾಂತ್‌ ನೀಲ್ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಹೀರೋನಾ? ವಿಲನ್ನಾ?

ಜೂ.ಎನ್ ಟಿ ಆರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಆರ್ ಆರ್ ಆರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ. ನಟ ರಾಮ್ ಚರಣ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇನ್ನು ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಯೂ ಜೀ.ಎನ್ ಟಿ ಆರ್ ಸಿನಿಮಾ ಮಾಡುತ್ತಿದ್ದಾರೆ. ಇಬ್ಬರ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.