ಬೆಂಗಳೂರು (ಮಾ. 06): ‘ಉಪೇಂದ್ರ ನನ್ನ ಹೊಟ್ಟೆಮೇಲೆ ಜೋರಾಗಿ ಒದ್ದರು. ಅವರು ಹಾಗೆ ಒದ್ದ ರಭಸಕ್ಕೆ ಸ್ವಲ್ಪ ದೂರ ಹೋಗಿ ಬಿದ್ದೆ. ನನ್ನ ತಲೆ ಮೇಲಿದ್ದ ವಿಗ್‌ ಕೂಡ ಜಾರಿ ಬಿತ್ತು. ಹೌದು, ಈಗ ಮಾಧ್ಯಮಗಳಲ್ಲಿ ಈಗ ಈ ಘಟನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆ ಘಟನೆ ಅಂದು ನಡೆದಿದ್ದು ನಿಜ.’

ಭದ್ರಾವತಿ ಹುಡುಗಿ ಆಶಾಭಟ್‌ ಬಾಲಿವುಡ್‌ಗೆ

- ಹೀಗೆ ಹೇಳಿದ್ದು ಶಿವಪಾರ್ವತಿ. ತೆಲುಗು ಕಿರುತೆರೆಯ ಬಹು ಬೇಡಿಕೆಯ ನಟಿ. ಬೆಳ್ಳಿತೆರೆಯಿಂದ ಬಂದ ಈ ನಟಿ ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸ್ಟಾರ್‌ ನಟಿಯರ ಸಾಲಿನದ್ದವರು. ಆ ನಂತರ ಕ್ಯಾರೆಕ್ಟರ್‌ ಆರ್ಟಿಸ್ಟ್‌ ಆಗಿಯೂ ನೂರಾರು ಸಿನಿಮಾಗಳಲ್ಲಿ ನಟಿಸಿದವರು. ಈಗ ಕಿರುತೆರೆಯಲ್ಲಿ ಇವರದ್ದೇ ಹವಾ. ದಕ್ಷಿಣಾ ಭಾರತೀಯ ಚಿತ್ರರಂಗಕ್ಕೆ ಈಕೆಯದ್ದು ಚಿರಪರಿಚಿತ ಮುಖ. ಇಂಥ ನಟಿ ಉಪೇಂದ್ರ ಚಿತ್ರದ ಚಿತ್ರೀಕರಣದಲ್ಲಿ ನಡೆದ ಘಟನೆಯ ಬಗ್ಗೆ ರಿಯಾಲಿಟಿ ಶೋ ಒಂದರಲ್ಲಿ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆ ಭಾರಿ ವೈರಲ್‌ ಆಗಿದೆ. ಶಿವಪಾರ್ವತಿಯ ಮಾತುಗಳು ಇಲ್ಲಿವೆ.

’ಕುರುಕ್ಷೇತ್ರ’ ರಿಲೀಸ್‌ಗೆ ಡೇಟ್ ಪಕ್ಕಾ!

ಅದು ‘ರಾ’ ಸಿನಿಮಾ

ಈ ಘಟನೆ ನಡೆದಿದ್ದು ‘ರಾ’ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ. ಒಂದು ಸಲ ಕ್ಯಾರೆಕ್ಟರ್‌ಗೆ ಫಿಕ್ಸ್‌ ಆದರೆ, ಉಪೇಂದ್ರ ಅದರಲ್ಲೇ ಮುಳುಗಿ ಬಿಡುತ್ತಾರೆ. ಯಾವ ಮಟ್ಟಿಗೆ ಅಂದರೆ ಅವರ ಈ ಇನ್ವಾಲ್‌ಮೆಂಟ್‌ ತಡೆದುಕೊಳ್ಳುವ ಶಕ್ತಿ ಎದುರಿಗಿದ್ದ ಕಲಾವಿದರಿಗೆ ಇರಬೇಕು. ಹಾಗೆ ತಮ್ಮ ಪಾತ್ರದಲ್ಲಿ ಇನ್ವಾಲ್‌ ಆಗಿ ಎಕ್ಸೈಟ್‌ಮೆಂಟ್‌ನಲ್ಲಿ ಕ್ಯಾಮೆರಾ ಮುಂದೆ ನಿಂತಿದ್ದರು ಅನಿಸುತ್ತದೆ. ಆ ದೃಶ್ಯದಲ್ಲಿ ಉಪೇಂದ್ರ ನನಗೆ ಬೈಯ್ದು, ಗದರಿ ಹೊಡೆಯಬೇಕು. ಈ ದೃಶ್ಯ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುತ್ತದೆ. ನನ್ನ ಉಪೇಂದ್ರ ಕಾಲಿನಿಂದ ಜೋರಾಗಿ ಒದ್ದಿದ್ದು ಇದೇ ದೃಶ್ಯದಲ್ಲಿ.

ಒದ್ದಿದ್ದು ಯಾಕೆ?

ನಿಜ ಹೇಳಬೇಕು ಅಂದರೆ ನನ್ನ ಪಾತ್ರವೇ ಹಾಗಿರುತ್ತದೆ. ನನ್ನ ಮಗಳಿಗೆ ನಾನೇ ಅನ್ಯಾಯ ಮಾಡುವ ಪಾತ್ರ ನನ್ನದು. ಇಂಥ ಪಾತ್ರದಲ್ಲಿ ಕಾಣಿಸಿಕೊಂಡ ನನಗೆ ಉಪ್ಪಿ ಬುದ್ಧಿವಾದ ಹೇಳಬೇಕು. ಒಂದಿಷ್ಟುಡೈಲಾಗ್‌ ಹೇಳುತ್ತಲೇ ಜೋರಾಗಿ ಕಾಲಿನಿಂದ ನನ್ನ ಹೊಟ್ಟೆಮೇಲೆ ಒದ್ದು ಬಿಟ್ಟರು. ಅವರು ಹಾಗೆ ಒದ್ದ ರಭಸಕ್ಕೆ ನಾನು ಸ್ವಲ್ಪ ದೂರದಲ್ಲಿ ಹೋಗಿ ಬಿದ್ದೆ. ನಾನು ಹಾಕಿಕೊಂಡಿದ್ದ ವಿಗ್‌ ಕೂಡ ಬಿದ್ದು ಹೋಯಿತು. ನಿಜ ಹೇಳಬೇಕು ಅಂದರೆ ತಕ್ಷಣ ಆ ಘಟನೆ ನಾನು ಸಿಕ್ಕಾಪಟ್ಟೆಡಿಸ್ಟರ್ಬ್‌ ಆದೆ. ಹಾಗೆ ದೃಶ್ಯವನ್ನು ನಿಲ್ಲಿಸುವ ಹಾಗಿರಲಿಲ್ಲ. ನಾನು ರಿಯಲ್ಲಾಗಿ ದಿಗಿಲುಗೊಂಡು ರಿಯಾಕ್ಷನ್‌ ಕೊಟ್ಟೆ.

ತಾಪ್ಸಿ ಪನ್ನುಗೆ ಈ ’ಖಾನ್’ ಜೊತೆ ಡೇಟಿಂಗ್ ಹೋಗ್ಬೇಕಂತೆ!

ನನ್ನಲ್ಲಿ ಕ್ಷಮೆ ಕೇಳಿದರು

ಉಪೇಂದ್ರ ಅವರು ಬೇಕು ಅಂತಲೇ ಏನೂ ಹೊಡೆದಿಲ್ಲ. ಅದು ದೃಶ್ಯಕ್ಕೆ ಆ ರೀತಿ ಬೇಕಿತ್ತು. ಈ ದೃಶ್ಯದ ಚಿತ್ರೀಕರಣ ಮುಗಿದ ಮೇಲೆ ಉಪೇಂದ್ರ ಅವರೇ ನನ್ನ ಬಳಿ ನೇರವಾಗಿ ಬಂದು ‘ಏನಾದರು ಪೆಟ್ಟಾಯಿತೇ, ದಯವಿಟ್ಟು ಕ್ಷಮಿಸಿ’ ಎಂದು ನನ್ನಲ್ಲಿ ಕ್ಷಮೆ ಕೇಳಿದರು. ಅವರು ಕ್ಷಮೆ ಕೇಳಿದ ಮೇಲೆ ನಾನೂ ನಿಟ್ಟುಸಿರುವ ಬಿಟ್ಟೆ.

‘ಅಯ್ಯೋ ಪರ್ವಾಗಿಲ್ಲ ಬಾಬು. ನೀವು ಬೇಕು ಅಂತ ಏನೂ ಮಾಡಿಲ್ಲ ಬಿಡಿ’ ಅಂತ ಆ ಘಟನೆಯನ್ನು ಅಲ್ಲಿಗೆ ಮರೆತು ಬಿಟ್ಟೆ. ಆದರೆ, ಈಗ ಮಾಧ್ಯಮಗಳಲ್ಲಿ ಬರುತ್ತಿರುವಂತೆ ನಾನು ಕೋಮಾಗೆ ಹೋಗುವಂತೆ ಕನ್ನಡದ ನಟಿ ಉಪೇಂದ್ರ ಅವರು ನಟಿಗೆ ಕಾಲಿನಿಂದ ಒದ್ದರು ಎಂಬುದು ಸುಳ್ಳು ಸುದ್ದಿ.

ಉಪೇಂದ್ರ ಒಳ್ಳೆಯವರಾ?

ನಿಜ ಹೇಳಬೇಕು ಅಂದರೆ ಉಪೇಂದ್ರ ಅವರು ವೈಯಕ್ತಿಕವಾಗಿ ತುಂಬಾ ಒಳ್ಳೆಯವರು. ಸೆಟ್‌ಗೆ ಬಂದು ಮೇಕಪ್‌ ಹಾಕಿಕೊಂಡು ತನ್ನ ಕೆಲಸ ತಾನು ಮಾಡಿಕೊಂಡು ಹೋಗುತ್ತಾರೆ. ಶೂಟಿಂಗ್‌ ಮುಗಿದ ಮೇಲೆ ಎಲ್ಲರಿಗೂ ವಿಷ್‌ ಮಾಡಿ ಹೊರಡುತ್ತಿದ್ದರು. ಸಮಾಜದ ಮತ್ತೊಂದು ಮುಖವನ್ನು ಪರಿಶೀಲಿಸುವ ವ್ಯಕ್ತಿ ಅವರು. ಆ ಕಾರಣಕ್ಕೆ ‘ರಾ’ ಚಿತ್ರದಲ್ಲಿ ಅಂಥ ಅಂಶಗಳನ್ನೇ ಅವರು ಇಟ್ಟಿದ್ದರು. ಪಕ್ಕಾ ವೃತ್ತಿಪರ ನಟ ಮತ್ತು ನಿರ್ದೇಶಕ.

ಆಲೋಚಿಸುವ ಅಂಶಗಳು

ಹಾಗೆ ನೋಡಿದರೆ ತಮ್ಮ ಸಿನಿಮಾಗಳಲ್ಲಿ ಉಪೇಂದ್ರ ಹೇಳುವ ಅಂಶಗಳನ್ನು ಪ್ರತಿಯೊಬ್ಬರು ಗಂಭೀರವಾಗಿ ತೆಗೆದುಕೊಳ್ಳಬೇಕು. ಮೈ ಕಾಣುವಂತೆ ಬಟ್ಟೆಹಾಕಿಕೊಳ್ಳುವುದು, ಕಿಟಿಕಿಗಳಂತೆ ಡಿಸೈನ್‌ ಮಾಡಿಕೊಂಡು ಜಾಗೀಟ್‌ ಹೊಲಿಸಿಕೊಳ್ಳುವುದು ಯಾರನ್ನ ಮೆಚ್ಚಿಸುವುದಕ್ಕೆ? ದೇಹ ತೋರಿಸಿ ಹೆಣ್ಣು ಮಕ್ಕಳು ಬೇರೆಯವರನ್ನು ಮೆಚ್ಚಿಸುವ ಅಗತ್ಯವಿದೆಯೇ?

ಯಾರನ್ನೋ ಆಕರ್ಷಿಸುವುದಕ್ಕೋ, ಮೆಚ್ಚಿಸುವುದಕ್ಕೋ ಸ್ಲೀವ್‌ಲೆಸ್‌ ಉಡುಪುಗಳನ್ನು ಧರಿಸುವ ಅಗತ್ಯವಿಲ್ಲ. ನೀವು ನಿಮಗಾಗಿ ಬದುಕಬೇಕು. ನಿಮ್ಮ ಬದುಕು, ನಿಮ್ಮ ಜೀವನ ಶೈಲಿ ಮತ್ತೊಬ್ಬರಿಗೆ ಸ್ಫೂರ್ತಿಯಾಗಿರಬೇಕು ಎನ್ನುವುದು ಉಪೇಂದ್ರ ಅವರ ಅಭಿಪ್ರಾಯ. ಅದನ್ನೇ ಅವರು ‘ರಾ’ ಚಿತ್ರದಲ್ಲೂ ತೋರಿಸಿದ್ದು. ಉಪೇಂದ್ರ ಅವರು ಹೇಳುವ ಇಂಥ ಅಂಶಗಳನ್ನು ಈ ಜನರೇಷನ್‌ ಕೂಡ ಯೋಚಿಸಬೇಕಿದೆ.