- Home
- Entertainment
- Sandalwood
- ದರ್ಶನ್ ಅಬ್ಬರಕ್ಕೆ ಬಾಕ್ಸಾಫೀಸ್ ಶೇಕ್.. The Devil First Day Collection ಇಷ್ಟೊಂದು ಕೋಟಿನಾ?
ದರ್ಶನ್ ಅಬ್ಬರಕ್ಕೆ ಬಾಕ್ಸಾಫೀಸ್ ಶೇಕ್.. The Devil First Day Collection ಇಷ್ಟೊಂದು ಕೋಟಿನಾ?
ಸುಮಾರು 2 ಲಕ್ಷ 80 ಸಾವಿರಕ್ಕೂ ಹೆಚ್ಚು ಟಿಕೆಟ್ ಮುಂಗಡ ಬುಕಿಂಗ್ ಆಗಿದ್ದು, ದಿ ಡೆವಿಲ್ ರಿಲೀಸ್‌ಗೂ ಮೊದಲೇ ಸುಮಾರು 8 ಕೋಟಿ ರು.ಗೂ ಅಧಿಕ ಮೊತ್ತ ಬಾಚಿಕೊಂಡಿದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಬುಕಿಂಗ್ ತೆರೆಯೋದು ವಿಳಂಬವಾಗಿದೆ.

ಥೀಯೆಟರ್‌ಗಳಲ್ಲಿ ಜಾತ್ರೆ
ದರ್ಶನ್ ‘ದಿ ಡೆವಿಲ್’ ಸಿನಿಮಾಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಬೆಳಗ್ಗೆ 6 ಗಂಟೆ 5ನಿಮಿಷದಿಂದಲೇ ಆರಂಭವಾದ ಶೋಗಳು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಆಗಿದ್ದವು. ಹಲವು ಥೀಯೆಟರ್‌ಗಳಲ್ಲಿ ಫ್ಯಾನ್ಸ್ ಜಾತ್ರೆಯೇ ನೆರೆದಿತ್ತು.
ಅಭಿಮಾನಿಗಳ ಜೊತೆಗೆ ಸಿನಿಮಾ ವೀಕ್ಷಣೆ
ಮುಖ್ಯ ಥೀಯೆಟರ್ ಆದ ನರ್ತಕಿಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್, ಸ್ನೇಹಿತ ಧನ್ವೀರ್, ನಾಯಕಿ ರಚನಾ ರೈ ಸೇರಿದಂತೆ ಚಿತ್ರತಂಡ ಅಭಿಮಾನಿಗಳ ಜೊತೆಗೆ ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು. ರಚಿತಾ ರಾಮ್ ಸಹ ಸಿನಿಮಾ ವೀಕ್ಷಿಸಿ ಬೆಂಬಲ ಸೂಚಿಸಿದ್ದಾರೆ.
ಮೊದಲ ದಿನದ ಅಂದಾಜು ಗಳಿಕೆ
ಸುಮಾರು 2 ಲಕ್ಷ 80 ಸಾವಿರಕ್ಕೂ ಹೆಚ್ಚು ಟಿಕೆಟ್ ಮುಂಗಡ ಬುಕಿಂಗ್ ಆಗಿದ್ದು, ಸಿನಿಮಾ ರಿಲೀಸ್‌ಗೂ ಮೊದಲೇ ಸುಮಾರು 8 ಕೋಟಿ ರು.ಗೂ ಅಧಿಕ ಮೊತ್ತ ಬಾಚಿಕೊಂಡಿದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಬುಕಿಂಗ್ ತೆರೆಯೋದು ವಿಳಂಬವಾಗಿದ್ದು, ಕಲೆಕ್ಷನ್ ಮೇಲೆ ಪರಿಣಾಮ ಬೀರಿದಂತಿದೆ. ಮೊದಲ ದಿನ ಸಿನಿಮಾ 20 ಕೋಟಿ ರು.ಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
ರೇಟಿಂಗ್, ವಿಮರ್ಶೆಗೆ ತಡೆ
ಬುಕ್ ಮೈ ಶೋದಲ್ಲಿ ‘ದಿ ಡೆವಿಲ್’ ಸಿನಿಮಾದ ರೇಟಿಂಗ್, ವಿಮರ್ಶೆಗೆ ಚಿತ್ರತಂಡ ಕೋರ್ಟ್‌ನಿಂದ ತಡೆಯಾಜ್ಞೆ ತಂದಿತ್ತು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಬೆಳಗ್ಗಿನಿಂದಲೇ ಪ್ರತಿಕ್ರಿಯೆ ಹರಿದುಬಂದಿದೆ. ಇಲ್ಲೂ ದರ್ಶನ್ ಫ್ಯಾನ್ಸ್ ನೆಚ್ಚಿನ ನಾಯಕನ ಪರವಾಗಿ ಟ್ವೀಟ್ ಮಾಡಿ, ‘ನಾವು ಗೆದ್ದೆವು’ ಎಂಬರ್ಥದಲ್ಲಿ ಬರೆದುಕೊಂಡರೆ, ಒಂದಿಷ್ಟು ಮಂದಿ ಸಿನಿಮಾದ ಕಥೆ, ಕ್ಲೈಮ್ಯಾಕ್ಸ್ ಕುರಿತು ನಿರಾಸೆ ವ್ಯಕ್ತಪಡಿಸಿದ್ದಾರೆ.
ದರ್ಶನ್ ರಾಜಕೀಯಕ್ಕೆ ಬರುತ್ತಾರ?
ಈ ಸಿನಿಮಾದಲ್ಲಿ ದರ್ಶನ್ ಜನಾನುರಾಗಿ ರಾಜಕೀಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರು ಜೈಲಿನಿಂದ ಹೊರಬಂದ ಮೇಲೆ ರಾಜಕೀಯ ಸೇರುತ್ತಾರಾ ಎಂಬ ಪ್ರಶ್ನೆ ಹುಟ್ಟಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದರ್ಶನ್ ಸಹೋದರ ದಿನಕರ್ ತೂಗುದೀಪ್, ‘ದರ್ಶನ್ ಹುಟ್ಟಿರುವುದೇ ಕಲಾಸೇವೆಗೆ’ ಎನ್ನುವ ಮೂಲಕ ತೆರೆ ಎಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

