Asianet Suvarna News Asianet Suvarna News

'ಇದೇ ಬಾತ್ ರೂಂ ಅಂದುಕೋ': ನಟಿ ಕೆತಿಕಾಗೆ ಪ್ರಭಾಸ್ ಟಾಂಗ್

ಚಿತ್ರದ ನಾಯಕಿ ಕೆತಿಕಾ, ನಾನು ಒಳ್ಳೆಯ ಗಾಯಕಿ ಎಂದು ಪ್ರಭಾಸ್‌ಗೆ ಹೇಳುತ್ತಾರೆ. ಅದಕ್ಕೆ ಪ್ರಭಾಸ್, ಸರಿ ಇವಾಗ ಒಂದು ಹಾಡು ಹೇಳಿ ಎಂದು ಕೆತಿಕಾ ಅವರನ್ನು ಕೇಳುತ್ತಾರೆ. ಅದಕ್ಕೆ ಕೆತಿಕಾ ನಾನು ಬಾತ್‌ರೂಂ ಸಿಂಗರ್‌ ಎನ್ನುತ್ತಾರೆ.

Telugu Actor Prabhas Super Punch On Heroine Ketika Sharma Singing
Author
Bangalore, First Published Oct 28, 2021, 9:10 PM IST
  • Facebook
  • Twitter
  • Whatsapp

ನಿರ್ದೇಶಕ ಪೂರಿ ಜಗನ್ನಾಥ್ (Puri Jagannadh) ಪುತ್ರ ಆಕಾಶ್ ಪುರಿ ಅಭಿನಯದ  'ರೊಮ್ಯಾಂಟಿಕ್' (Romantic) ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು,  ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯಕ್ರಮಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿ ನಡೆಸುತ್ತಿದೆ. ಚಿತ್ರದ ಪ್ರಮೋಷನ್‌ಗೆ ಟಾಲಿವುಡ್‌ನ ಖ್ಯಾತ ನಟ, ನಟಿಯರು ಸೇರಿದಂತೆ ಸ್ಟಾರ್‌ ನಿರ್ದೇಶಕರು ಸಹ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ರೆಬೆಲ್ ಸ್ಟಾರ್ ಪ್ರಭಾಸ್‌ (Prabhas) ಅವರು ಸಿನಿಮಾ ಪ್ರಚಾರದ ನಿಮಿತ್ತ ಚಿತ್ರದ ನಾಯಕ ಆಕಾಶ್‌ ಪುರಿ (Akash Puri) ಹಾಗೂ ನಾಯಕಿ ಕೆತಿಕಾ ಶರ್ಮಾ (Ketika Sharma) ಅವರ ಸಂದರ್ಶನ ನಡೆಸಿದ್ದರು. ಈ ವೇಳೆ ಹಾಸ್ಯ ಪ್ರಸಂಗವೊಂದು ನಡೆದಿದೆ. 

ಹೌದು! ಚಿತ್ರದ ನಾಯಕಿ ಕೆತಿಕಾ, ನಾನು ಒಳ್ಳೆಯ ಗಾಯಕಿ ಎಂದು ಪ್ರಭಾಸ್‌ಗೆ ಹೇಳುತ್ತಾರೆ. ಅದಕ್ಕೆ ಪ್ರಭಾಸ್, ಸರಿ ಇವಾಗ ಒಂದು ಹಾಡು ಹೇಳಿ ಎಂದು ಕೆತಿಕಾ ಅವರನ್ನು ಕೇಳುತ್ತಾರೆ. ಅದಕ್ಕೆ ಕೆತಿಕಾ ನಾನು ಬಾತ್‌ರೂಂ ಸಿಂಗರ್‌ (BathRoom Singer) ಎನ್ನುತ್ತಾರೆ. ಕೆತಿಕಾ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದ ಆಕಾಶ್‌ ಪುರಿ 'ಇದನ್ನೆ ಬಾತ್ ರೂಂ ಎಂದು ತಿಳಿದುಕೋ, ಇಲ್ಲಿ ಯಾರೂ ಇಲ್ಲ. ಪ್ರಭಾಸ್ ಮತ್ತು ನಾನು ಕೂಡ ಇಲ್ಲ ಎಂದುಕೊಂಡು ಹಾಡು ಎನ್ನುತ್ತಾರೆ. ತಕ್ಷಣ ಪ್ರತಿಕ್ರಿಯೆ ನೀಡುವ ಪ್ರಭಾಸ್, ಈ ಹುಡುಗಿ ಬಾತ್ ರೂಂನಲ್ಲಿ ನಾನೇಕೆ ಇರುತ್ತೇನೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸುತ್ತಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ (Viral) ಆಗಿದ್ದು, ಪ್ರಭಾಸ್‌ ಚುರುಕುತನಕ್ಕೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
 


'ರೊಮ್ಯಾಂಟಿಕ್'  ಚಿತ್ರದ  ಟ್ರೈಲರ್‌ನ್ನು (Trailer)ಪ್ರಭಾಸ್ ಅವರೇ ಬಿಡುಗಡೆ ಮಾಡಿದ್ದರು. ಚಿತ್ರಕ್ಕೆ ಕಥೆ, ಚಿತ್ರಕಥೆ ಸೇರಿದಂತೆ ಸಂಭಾಷಣೆಯನ್ನು ಪೂರಿ ಜಗನ್ನಾಥ್ ಅವರೇ ಬರೆದಿದ್ದಾರೆ. ಅನಿಲ್ ಪಾದೂರಿ (Anil Paduri) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರವು ರೊಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ಕಥೆಯನ್ನು ಹೊಂದಿದೆ. ಟ್ರೈಲರ್‌ನಲ್ಲಿ ಆಕಾಶ್ ಪೂರಿ ಮತ್ತು ಕೆತಿಕಾ ಶರ್ಮಾ ರೊಮ್ಯಾಂಟಿಕ್ ವರ್ಕೌಟ್ ಆಗಿದ್ದು, ಹಸಿಬಿಸಿ ದೃಶ್ಯಗಳಲ್ಲಿ ಬೋಲ್ಡ್‌ ಆಗಿ ನಟಿಸಿರುವುದು ಪಡ್ಡೆ ಹುಡುಗರ ಮೈಬಿಸಿಯೇರಿಸಿದೆ. ಲಿಪ್‌ಲಾಕ್ ಸೀನ್‌ಗಳಲ್ಲೂ ಇವರಿಬ್ಬರ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿರುವುದನ್ನು ಕಾಣಬಹುದಾಗಿದೆ. ಇನ್ನು ಪೊಲೀಸ್ ಕಾಪ್ ಪಾತ್ರದಲ್ಲಿ ರಮ್ಯಾಕೃಷ್ಣ (RamyaKrishna) ಕಾಣಿಸಿಕೊಂಡಿದ್ದಾರೆ. 

ಪಡ್ಡೆ ಹುಡುಗರ ಮೈಬಿಸಿಯೇರಿಸಿದ 'ರೊಮ್ಯಾಂಟಿಕ್' ಟ್ರೈಲರ್

ಇನ್ನು ನಟ ಆಕಾಶ್ ಪೂರಿ, ಭಾಸ್ಕರ್ ಎಂಬ ಲವರ್ ಬಾಯ್‌ ಆಗಿ ಕಾಣಿಸಿಕೊಂಡಿದ್ದು, ಮಾಯಾ ಎಂಬ ಪಾತ್ರದಲ್ಲಿ ನಟಿ ಕೆತಿಕಾ ಶರ್ಮಾ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿರುವುದು ವಿಶೇಷವಾಗಿದ್ದು, ಜೊತೆಗೆ ಮಂದಿರ ಬೇಡಿ, ಮಕರಂದ್ ದೇಶಪಾಂಡೆ, ದಿವ್ಯದರ್ಶಿನಿ ಸೇರಿದಂತೆ ಅನೇಕರು ಚಿತ್ರದ ತಾರಾಬಳಗದಲ್ಲಿದ್ದಾರೆ.  ಪೂರಿ ಕನೆಕ್ಟ್ಸ್ ಬ್ಯಾನರ್‌ನಲ್ಲಿ 'ರೊಮ್ಯಾಂಟಿಕ್' ಚಿತ್ರವನ್ನು ನಿರ್ಮಿಸಲಾಗಿದ್ದು, ಚಾರ್ಮಿ ಕೌರ್ ಸಹ ಚಿತ್ರಕ್ಕೆ ನಿರ್ಮಾಣ ಮಾಡಿದ್ದಾರೆ. ಸುನೀಲ್ ಕಶ್ಯಪ್ ಸಂಗೀತ ಸಂಯೋಜನೆ, ನರೇಶ್ ಕ್ಯಾಮೆರಾ ಕೈಚಳಕವಿರುವ ಈ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ  ಪ್ರಮಾಣ ಸಿಕ್ಕಿದೆ. ಚಿತ್ರವು ಇದೇ ಅಕ್ಟೋಬರ್ 29ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. 

'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ ರಿವೀಲ್

ಈ 'ರೊಮ್ಯಾಂಟಿಕ್' ಚಿತ್ರವನ್ನು ಪೂರಿ ಜಗನ್ನಾಥ್ ತಮ್ಮ ಮಗನನ್ನು ಟಾಲಿವುಡ್‌ನಲ್ಲಿ (Tollywood) ಭದ್ರವಾಗಿ ನೆಲೆಯೂರಿಸಲು ನಿರ್ಮಿಸುತ್ತಿದ್ದಾರೆ. ಪೂರಿ ಜಗನ್ನಾಥ್ 'ಲೈಗರ್' (Liger) ಎಂಬ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ (Vijay DevaraKonda) ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. 

Follow Us:
Download App:
  • android
  • ios