Asianet Suvarna News Asianet Suvarna News

'ಭೈರತಿ ರಣಗಲ್' ಶಿವಣ್ಣ ಭೇಟಿಯಾದ ಟಾಲಿವುಡ್ ನಟ ನಾನಿ; ಸ್ಟಾರ್ಸ್ ಫ್ಯಾನ್ಸ್‌ಗಳಲ್ಲಿ ಕುತೂಹಲ!

ಇತ್ತೀಚೆಗೆ, ಕನ್ನಡ, ತೆಲುಗು ಚಿತ್ರರಂಗಗಳು ಎಂಬ ಭೇದಭಾವ ಹೊರಟು ಹೋಗಿದೆ. ಇಂದು ಎಲ್ಲಾ ನಟರು ಭಾರತೀಯ ಚಿತ್ರರಂಗ ಒಂದು ಎಂಬ ಭಾವನೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಕನ್ನಡ ನಟ ಉಪೇಂದ್ರ ತಮಿಳು ಸಿನಿಮಾದಲ್ಲಿ ನಟ ರಜನಿಕಾಂತ್ ಜತೆ 'ಕೂಲಿ' ಚಿತ್ರದಲ್ಲಿ ಪಾತ್ರವೊಂದರಲ್ಲಿ ನಟಿಸಲಿದ್ದಾರೆ..

Telugu actor nani meets kannada actor shiva rajkumar in bengaluru recently srb
Author
First Published Aug 28, 2024, 2:08 PM IST | Last Updated Aug 28, 2024, 2:10 PM IST

ತೆಲುಗು ಸ್ಟಾರ್ ನಟ 'ಈಗ' ಖ್ಯಾತಿಯ ನಾನಿ (Nani) ಕನ್ನಡದ ನಟ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shiva Rajkumar) ಅವರನ್ನು ಭೆಟಿಯಾಗಿದ್ದಾರೆ. ಬೆಂಗಳೂರಿನಲ್ಲಿ 'ಭೈರತಿ ರಣಗಲ್' ಸಿನಿಮಾದ ನಟ ಶಿವಣ್ಣ ಅವರನ್ನು ಟಾಲಿವುಡ್ ನಟ ನಾನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರಿಬ್ಬರ ಭೇಟಿ ಸ್ಯಾಂಡಲ್‌ವುಡ್ ಹಾಗು ಟಾಲಿವುಡ್‌ ಸಿನಿಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ. ಅವರಿಬ್ಬರೂ ಸದ್ಯವೇ ಹೊಸ ಚಿತ್ರದಲ್ಲಿ ಒಟ್ಟಿಗೇ ನಟಿಸಬಹುದು ಎನ್ನಲಾಗುತ್ತಿದೆ.

ಕಾರಣ, ಇತ್ತೀಚೆಗೆ, ಕನ್ನಡ, ತೆಲುಗು ಚಿತ್ರರಂಗಗಳು ಎಂಬ ಭೇದಭಾವ ಹೊರಟು ಹೋಗಿದೆ. ಇಂದು ಎಲ್ಲಾ ನಟರು ಭಾರತೀಯ ಚಿತ್ರರಂಗ ಒಂದು ಎಂಬ ಭಾವನೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಕನ್ನಡ ನಟ ಉಪೇಂದ್ರ ತಮಿಳು ಸಿನಿಮಾದಲ್ಲಿ ನಟ ರಜನಿಕಾಂತ್ ಜತೆ 'ಕೂಲಿ' ಚಿತ್ರದಲ್ಲಿ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಅಷ್ಟೇ ಅಲ್ಲ, ಕನ್ನಡದ ನಟಿ ರಚಿತಾ ರಾಮ್ ಸಹ ರಜನಿಕಾಂತ್ ಅವರ 'ಕೂಲಿ' ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದ ಆಚೆ ಪರಭಾಷೆಯಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. 

ನಟ ರವಿಚಂದ್ರನ್ ತೆಲುಗು ಮೆಗಾ ಸ್ಟಾರ್‌ಗೆ ದೇವನಹಳ್ಳಿಯಲ್ಲಿ ಜಮೀನು ಕೊಟ್ಟಿರೋದು ನಿಜವೇ?

ಈ ಮೊದಲು ಭಾರತೀಯ ಚಿತ್ರರಂಗದಲ್ಲಿ ನಾರ್ತ್ ಹಾಗು ಸೌತ್ ಎಂಬ ಭೇದಭಾವ ಇತ್ತು. ಆದರೆ, ಈಗ ಇಡೀ ಭಾರತೀಯ ಚಿತ್ರರಂಗ ಒಂದು ಎಂಬಂತೆ, ಬಾಲಿವುಡ್ ಹಾಗು ದಕ್ಷಿಣ ಭಾರತದ ಎಲ್ಲಾ ನಟನಟಿಯರು ತಮ್ಮ ತಮ್ಮ ಭಾಷೆಗಳ ಚಿತ್ರರಂಗದಲ್ಲಿ ಮಾತ್ರವಲ್ಲ, ಪರಭಾಷೆ ಸಿನಿಮಾಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ಕನ್ನಡದ ಕೆಜಿಎಫ್ ಹಾಗು ಹಿಂದಿಯ ಹಲವು ಚಿತ್ರಗಳಲ್ಲಿ ಇಂತಹ ಬೆಳವಣಿಗೆ ಕಾಣಬಹುದು. ಇದೀಗ, ರಜನಿಕಾಂತ್ ಚಿತ್ರ ಕೂಲಿ ಕೂಡ ಈ ಮಾತಿಗೆ ಸಾಕ್ಷಿಯಾಗಿದೆ. 

ಶಿವರಾಜ್‌ಕುಮಾರ್ ನಟನೆಯ ಕನ್ನಡದ ಭೈರತಿ ರಣಗಲ್ ಚಿತ್ರವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಕಾಣಲಿದೆ. ಈಗಾಗಲೇ ನಟ ಶಿವಣ್ಣ ಅವರು ಕನ್ನಡವನ್ನು ಮೀರಿ ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಅಲ್ಲಿಯೂ ತಮ್ಮ ಮಾರ್ಕೆಟ್ ವಿಸ್ತರಿಸಿಕೊಂಡಿದ್ದಾರೆ. ಇದೀಗ, ಭೈರತಿ ರಣಗಲ್ ಮೂಲಕ ಶಿವಣ್ಣ ಇಡೀ ಇಂಡಿಯಾ ಗಮನ ಸೆಳೆಯಲಿದ್ದಾರೆ ಎನ್ನಲಾಗುತ್ತಿದೆ. ಬಿಡುಗಡೆ ಬಳಿಕ ಭೈರತಿ ರಣಗಲ್ ಇತಿಹಾಸ ಸೃಷ್ಟಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. 

ಹೇಮಾ ರಿಪೋರ್ಟ್‌ ಬಿರುಗಾಳಿಗೆ ತತ್ತರಿಸಿದ ಮಲಯಾಳಂ ಸಿನಿರಂಗ; ಕತ್ತಲ ಜಗತ್ತು ಬೆತ್ತಲಾಯ್ತಾ?

ಒಟ್ಟಿನಲ್ಲಿ, ಇದೀಗ ತೆಲುಗು ನಟ ನಾನಿ ಕನ್ನಡದ ಶಿವಣ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಹೋಗಿದ್ದಾರೆ. ಅವರಿಬ್ಬರ ಮಾತುಕತೆ ಡೀಟೇಲ್ಸ್  ಸದ್ಯಕ್ಕೆ ಲಭ್ಯವಿಲ್ಲವಾದರೂ ಅವರೇನೂ ಕ್ರಿಕೆಟ್‌ ಆಡುವ ಬಗ್ಗೆ ಮಾತುಕತೆ ನಡೆಸಿಲ್ಲ. ಹೀಗಾಗಿ, ಸಹಜವಾಗಿಯೇ ಮುಂಬರುವ ದಿನಗಳಲ್ಲಿ ನಟ ನಾನಿ ಹಾಗು ಶಿವಣ್ಣ ಒಟ್ಟಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಈ ಸುದ್ದಿ ಅಧೀಕೃತವಾಗಿ ಬರಬೇಕಷ್ಟೇ!

Latest Videos
Follow Us:
Download App:
  • android
  • ios