Asianet Suvarna News Asianet Suvarna News

ನಟ ರವಿಚಂದ್ರನ್ ತೆಲುಗು ಮೆಗಾ ಸ್ಟಾರ್‌ಗೆ ದೇವನಹಳ್ಳಿಯಲ್ಲಿ ಜಮೀನು ಕೊಟ್ಟಿರೋದು ನಿಜವೇ?

ಕನ್ನಡದ ನಟ-ನಿರ್ದೇಶಕ ರವಿಚಂದ್ರನ್ ಅವರಿಗೆ ಕ್ರೇಜಿ ಸ್ಟಾರ್ ಎಂಬ ಅಲಂಕಾರ ಸುಮ್ಮನೇ ಬಂದಿದ್ದಲ್ಲ. ಅವರು ಬಹಳಷ್ಟು ಹುಚ್ಚು ಸಾಹಸಗಳನ್ನು ಮಾಡಿದ್ದಾರೆ. ಬಜೆಟ್, ಮೇಕಿಂಗ್ ಹಾಗು ಕಲಾವಿದರ ಆಯ್ಕೆಯಲ್ಲಿ ರವಿಚಂದ್ರನ್ ಅವರು ಬಹಳಷ್ಟು ವಿಶೇಷತೆಗಳನ್ನು..

Kannada actor Ravichandran gifted 3 acres of land to Telugu mega star chiranjeevi gossip srb
Author
First Published Aug 28, 2024, 1:21 PM IST | Last Updated Aug 28, 2024, 1:21 PM IST

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಖ್ಯಾತಿಯ ನಟ ಚಿರಂಜೀವಿ (Chiranjeevi) ಅವರು ಕನ್ನಡದ ಒಂದು ಸಿನಿಮಾದಲ್ಲಿ 'ಅತಿಥಿ' ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಗೊತ್ತಿದೆ. ಕನ್ನಡದ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅಭಿನಯದ 'ಸಿಪಾಯಿ' ಚಿತ್ರದಲ್ಲಿ ನಟ ಚಿರಂಜೀವಿ ಅವರು 'ಮೇಜರ್ ಚಂದ್ರಕಾಂತ್' ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಆಗಿನ ಕಾಲದಲ್ಲಿ ಚಿರಂಜೀವಿ ತೆಲುಗಿನ ಸ್ಟಾರ್ ನಟರಾಗಿದ್ದು, ಅವರು ಕನ್ನಡದ ಚಿತ್ರದಲ್ಲಿ ನಟಿಸಿರುವುದೇ ಗ್ರೇಟ್ ಎಂಬಂತಾಗಿತ್ತು. 

ಆದರೆ, ಅವರು ಆ ಪಾತ್ರವನ್ನು ಸ್ನೇಹಪೂರ್ವಕವಾಗಿ ಮಾಡಿದ್ದು, ಯಾವುದೇ ಸಂಭಾವನೆ ತೆಗೆದುಕೊಂಡಿರಲಿಲ್ಲ ಎಂದು ಅಂದು ಸುದ್ದಿಯಾಗಿತ್ತು. ನಟ ಚಿರಂಜೀವಿ ಅವರು ಕನ್ನಡದ ನಟ ರವಿಚಂದ್ರನ್ ಅವರ ಸ್ನೇಹಕ್ಕೋಸ್ಕರ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು' ಎನ್ನಲಾಗಿದೆ. ಆದರೆ, ಅವರು ಸಂಭಾವನೆಯನ್ನು ತೆಗೆದುಕೊಳ್ಳದಿದ್ದರೂ ನಟ ರವಿಚಂದ್ರನ್ ಅವರನ್ನು ಬರಿಗೈಲಿ ಕಳಿಸಿಲ್ಲ ಎಂದೂ ಕೆಲವರು ಅಂದು ಹೇಳಿದ್ದರು. ಹಾಗಿದ್ದರೆ ಕ್ರೇಜಿಸ್ಟಾರ್ ಅವರು ಚಿರಂಜೀವಿಗೆ ಏನು ಕೊಟ್ಟಿದ್ರು ಎಂದು ಸುದ್ದಿಯಾಗಿತ್ತು?

ಹೇಮಾ ರಿಪೋರ್ಟ್‌ ಬಿರುಗಾಳಿಗೆ ತತ್ತರಿಸಿದ ಮಲಯಾಳಂ ಸಿನಿರಂಗ; ಕತ್ತಲ ಜಗತ್ತು ಬೆತ್ತಲಾಯ್ತಾ?

ಅಂದಿನ ಗಾಸಿಪ್ ನಂಬುವುದಾದರೆ, ಕನ್ನಡದ ನಟ ರವಿಚಂದ್ರನ್ ಅವರು ಸಂಭಾವನೆ ತಿರಸ್ಕರಿಸಿದ ತೆಲುಗು ನಟ ಚಿರಂಜೀವಿಗೆ ಬೆಂಗಳೂರಿನ ದೇವನಹಳ್ಳಿ ಬಳಿ ಮೂರು ಎಕರೆ ಜಮೀನು ಕೊಟ್ಟಿದ್ದರು. ಅಲ್ಲಿ ಚಿರಂಜೀವಿ ಅವರು ಫಾರಂ ಹೌಸ್ ಕಟ್ಟಿಕೊಂಡಿದ್ದಾರೆ. ಈಗಲೂ ಅವರು ಅಲ್ಲಿಗೆ ಆಗಾಗ ಬಂದು ಹೋಗುತ್ತಾ ಇರುತ್ತಾರೆ ಎನ್ನಲಾಗಿದೆ. ಚಿರಂಜೀವಿ ಫಾರ್ಮ್‌ಹೌಸ್ ಇರೋದು ಹೌದು, ಅವರು ಬರೋದೂ ಹೌದು, ಆದರೆ ಅದು ರವಿಚಂದ್ರನ್ ಕೊಟ್ಟಿದ್ದು ಅನ್ನೋದಕ್ಕೆ ಸಾಕ್ಷಿ ಏನಿದೆ?

ಹೌದು, ಅದು ಕೇವಲ ಗಾಸಿಪ್, ಅಂದರೆ ಗಾಳಿ ಸುದ್ದಿ. ಏಕೆಂದರೆ, ಇಲ್ಲಿಯವರೆಗೆ ನಟ ರವಿಚಂದ್ರನ್ ಅವರು ಎಲ್ಲಿಯೂ ಕೂಡ ನಾನು ನಟ ಚಿರಂಜೀವಿಗೆ ದೇವನಹಳ್ಳಿ ಬಳಿ ಮೂರು ಎಕರೆ ಜಮೀನು ಕೊಟ್ಟಿದ್ದೇನೆ ಎಂದು ಅಧಿಕೃತವಾಗಿ ಹೇಳಿಲ್ಲವಂತೆ. ಹಾಗೇ, ನಟ ಚಿರಂಜೀವಿ ಕೂಡ ಎಲ್ಲಿಯೂ ಅದು ರವಿಚಂದ್ರನ್ ಕೊಟ್ಟ ಜಮೀನು ಎಂದು ಎಲ್ಲೂ ಹೇಳಿಕೊಂಡಿಲ್ಲವಂತೆ. ಹೀಗಾಗಿ ಈ ಸಂಗತಿ ಅಂದು ಹಾಗು ಇಂದು ಹರಿದಾಡುತ್ತಿದ್ದರೂ ಅದನ್ನು ಕೇವಲ ವದಂತಿ ಎಂದೇ ಹೇಳಬಹುದು!

ವಿಷ್ಣುವರ್ಧನ್ 'ವೀರಪ್ಪ ನಾಯ್ಕ' ಚಿತ್ರದಲ್ಲಿ ನಟ ದರ್ಶನ್ ನಟಿಸಬೇಕಿತ್ತು, ಯಾಕೆ ಆಗ್ಲಿಲ್ಲ ಅಂದ್ರೆ.. !

ಅಂದಹಾಗೆ, ಕನ್ನಡದ ನಟ-ನಿರ್ದೇಶಕ ರವಿಚಂದ್ರನ್ ಅವರಿಗೆ ಕ್ರೇಜಿ ಸ್ಟಾರ್ ಎಂಬ ಅಲಂಕಾರ ಸುಮ್ಮನೇ ಬಂದಿದ್ದಲ್ಲ. ಅವರು ಬಹಳಷ್ಟು ಹುಚ್ಚು ಸಾಹಸಗಳನ್ನು ಮಾಡಿದ್ದಾರೆ. ಬಜೆಟ್, ಮೇಕಿಂಗ್ ಹಾಗು ಕಲಾವಿದರ ಆಯ್ಕೆಯಲ್ಲಿ ರವಿಚಂದ್ರನ್ ಅವರು ಬಹಳಷ್ಟು ವಿಶೇಷತೆಗಳನ್ನು ಮರೆದಿದ್ದಾರೆ. ಅಂದಿನ ಕಾಲದ ತೆಲುಗು ಸೂಪರ್ ಸ್ಟಾರ್‌ಗಳಾದ ಚಿರಂಜೀವಿ-ಸೌಂದರ್ಯ ಜೋಡಿಯನ್ನು ಕನ್ನಡಕ್ಕೆ ತಮ್ಮ ಸಿಪಾಯಿ ಚಿತ್ರಕ್ಕೆ ಕರೆತಂದಿದ್ದು ಕೂಡ ಅಂತಹ ವಿಶೇಷಗಳಲ್ಲಿ ಒಂದು..!

Latest Videos
Follow Us:
Download App:
  • android
  • ios