Asianet Suvarna News Asianet Suvarna News

ಹೇಮಾ ರಿಪೋರ್ಟ್‌ ಬಿರುಗಾಳಿಗೆ ತತ್ತರಿಸಿದ ಮಲಯಾಳಂ ಸಿನಿರಂಗ; ಕತ್ತಲ ಜಗತ್ತು ಬೆತ್ತಲಾಯ್ತಾ?

ಡೈರೆಕ್ಟರ್, ಪ್ರೊಡ್ಯೂಸರ್, ಆಕ್ಟರ್.. ಎಲ್ಲರೂ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ವಿಜೇತರೇ. ಸಿನಿಮಾಗಳಲ್ಲಿ ಸೀನ್ ಓಪನ್ ಆದ್ರೆ, ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಭಾಷಣ ಹೊಡೆಯೋರೇ. ಆದರೆ.. ಕ್ಯಾಮೆರಾ ಆಫ್ ಆದ್ರೆ ಸಾಕು.. ಎಲ್ಲರೂ ಕಾಮುಕರೇ. ಇದು ಮಲಯಾಳಂ ಚಿತ್ರರಂಗದ ಕರಾಳ ಮುಖವೇ..?

Malayalam cinema industry faces hema report effects and many changes srb
Author
First Published Aug 28, 2024, 12:12 PM IST | Last Updated Aug 28, 2024, 12:20 PM IST

ಏನಾಗಿದೆ ಮಲಯಾಳಂ (Malayalam) ಚಿತ್ರರಂಗಕ್ಕೆ? ಸದ್ಯದ ಬೆಳವಣಿಗೆ, ಪರಿಸ್ಥಿತಿ ನೋಡಿದ್ರೆ ಯಾರಿಗಾದರೂ ಈ ಪ್ರಶ್ನೆ ಬರಲಾರದೇ ಇರದು. ಅಲ್ಲಿ ಸದ್ಯ ಸಾಕಷ್ಟು ಅನಿರೀಕ್ಷಿತ ಬೆಳವಣಿಗಳು ನಡೆದಿವೆ. ಅನೇಕ ಸ್ಟಾರ್ ಹೀರೋಗಳು, ಡೈರೆಕ್ಟರ್‌ಗಳ ಕತ್ತಲೆ ಜಗತ್ತಿನ ಕರ್ಮಕಾಂಡಗಳು ಬಯಲಾಗಿವೆ. ಈ ಸಡನ್ ಸುದ್ದಿ, ಅನಿರೀಕ್ಷಿತ ಬೆಳವಣಿಗೆ ಹಲವರನ್ನು ಕಂಗೆಡಿಸಿದ್ದರೆ ಹಲವರಿಗೆ ಹಾಲು ಕುಡಿದಷ್ಟು ಸಂತೋಷವಾಗಿದೆ.

'AMMA ಅಧ್ಯಕ್ಷ ಸ್ಥಾನಕ್ಕೆ ಮೋಹನ್‌ಲಾಲ್ (Mohanlal) ರಾಜೀನಾಮೆ, ನಟಿಯರು ಬಾಯ್ಬಿಟ ಸ್ಟಾರ್ ಹೀರೋ, ಡೈರೆಕ್ಟರ್ಗಳ ಹೆಸರುಗಳು,  ನಟ,ನಿರ್ಮಾಪಕ ಸಿದ್ದಿಖಿ ಮೇಲೆ ನಟಿ ರೇವತಿ ಸಂಪತ್ ಆರೋಪ, ಸಿದ್ದಿಖಿ ಅಂಕಲ್ ಅಂತಾ ಕರೆಯುತ್ತಿದ್ದ ರೇವತಿ ಸಂಪತ್, ನಟ ಜಯಸೂರ್ಯ ವಿರುದ್ಧ ನಟಿ ಮಿನು ಮುನೀರ್ ಆರೋಪ, ಹಿಂದಿನಿಂದ ಬಂದು ತಬ್ಬಿಕೊಂಡಿದ್ದನಂತೆ ಜಯಸೂರ್ಯ, ನಟಿ ಸರಿತಾ ಮಾಜಿ ಪತಿ ಮುಕೇಶ್ ಮೇಲೂ ನಟಿ ಆರೋಪ, ನಟ, ನಿರ್ದೇಶಕ, ನಿರ್ಮಾಪಕ ರಂಜಿತ್ ಅಂತ ಕೆಲಸ ಮಾಡಿದ್ರಾ?, ಅಯ್ಯಪ್ಪುನಂ ಕೋಶಿಯಂ ಖ್ಯಾತಿಯ ನಿರ್ದೇಶಕ ರಂಜಿತ್' ಇವೆಲ್ಲವೂ ಸದ್ಯದ ಮಲಯಳಂ ಸಿನಿಮಾ ಜಗತ್ತಿನ ಕರ್ಮಕಾಂಡಗಳು!

ವಿಷ್ಣುವರ್ಧನ್ 'ವೀರಪ್ಪ ನಾಯ್ಕ' ಚಿತ್ರದಲ್ಲಿ ನಟ ದರ್ಶನ್ ನಟಿಸಬೇಕಿತ್ತು, ಯಾಕೆ ಆಗ್ಲಿಲ್ಲ ಅಂದ್ರೆ.. !

ಡೈರೆಕ್ಟರ್, ಪ್ರೊಡ್ಯೂಸರ್, ಆಕ್ಟರ್.. ಎಲ್ಲರೂ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ವಿಜೇತರೇ. ಸಿನಿಮಾಗಳಲ್ಲಿ ಸೀನ್ ಓಪನ್ ಆದ್ರೆ, ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಭಾಷಣ ಹೊಡೆಯೋರೇ. ಆದರೆ.. ಕ್ಯಾಮೆರಾ ಆಫ್ ಆದ್ರೆ ಸಾಕು.. ಎಲ್ಲರೂ ಕಾಮುಕರೇ. ಇದು ಮಲಯಾಳಂ ಚಿತ್ರರಂಗದ ಕರಾಳ ಮುಖವೇ?. ಕಾಮುಕರ ಕಪಿಮುಷ್ಠಿಯಲ್ಲಿದೆ ಅನ್ನೋದಕ್ಕೆ ಪದೇ ಪದೇ ಸಾಕ್ಷಿಗಳು ಸಿಗ್ತಾ ಇದೆ. ಮಾಲಿವುಡ್ ಬೆತ್ತಲಾಗಿದೆ ಎನ್ನಬುದೇ?

ಮಲಯಾಳಂ ಸಿನಿಮಾ ಅಂದ್ರೆ.. ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಅನ್ನೋ ಕಾಲನೂ ಇತ್ತು. ಈಗ ಮಲಯಾಳಂ ಇಂಡಸ್ಟ್ರಿ ಚೇಂಜ್ ಆಗಿದೆ. ಒಳ್ಳೊಳ್ಳೆ ಸಿನಿಮಾ ಮಾಡ್ತಾರಪ್ಪ ಅಂತ ಇಡೀ ಭಾರತ ಹೆಮ್ಮೆಯಿಂದ ನೋಡ್ತಿರೋವಾಗ್ಲೇ, ಆ ಸಿನಿಮಾ ಮಾಡ್ತಿರೋ ಜನ ಈ ಮಟ್ಟಿಗೆ ಹೊಲಸೆದ್ ಹೋಗಿದ್ದಾರಾ ಅನ್ನೋ ಡೌಟೂ ಬರ್ತಾ ಇದೆ.. ಒಬ್ಬೊಬ್ಬ ನಟ, ನಿರ್ದೇಶಕ, ನಿರ್ಮಾಪಕ ಹೆಸರು ಬಂದ್ ಕೂಡ್ಲೇ, ಮಲಯಾಳಂ ಇಂಡಸ್ಟ್ರಿ ಶಾಕ್ ಆಗಿದೆ.

ಆ ನಿರ್ದೇಶಕನ ಕಥೆ ಇನ್ನೂ ಭಯಂಕರ. ಮೂರ್ ಮೂರು ರಾಷ್ಟ್ರಪ್ರಶಸ್ತಿ ತಗೊಂಡಿರೋ ಆ ನಿರ್ದೇಶಕನ ಬಗ್ಗೆ ಇದ್ದ ಗೌರವ ಎಲ್ಲ ಮಣ್ಣುಪಾಲಾಗಿ ಹೋಗಿದೆ. ಆ ಡೈರೆಕ್ಟರ್ ಕಥೆ ಏನಂದ್ರೆ, 'ಅಂಕಲ್' ಅಂತಾ ಕರೆಸಿಕೊಂಡ ಸೀನಿಯರ್ ನಟ ಆ ನಟಿ ಮೇಲೆ ದೌರ್ಜನ್ಯ ಎಸಗಿದ್ದ. ಈ ನಟ ಸಿನಿಮಾ ಓಪನಿಂಗ್ ಸೀನ್ನಿಂದ ಕೊನೆ ತನ್ಕಾನೂ ಸ್ವಾಭಿಮಾನದ ಕಥೆ ಹೇಳ್ತಿದ್ದ. ಅಯ್ಯಪ್ಪನುಂ ಕೋಶಿಯಂ ಸಿನಿಮಾ ನೆನಪಿರ್ಬೇಕಲ್ವಾ? ಆ ಸಿನಿಮಾ ಡೈರೆಕ್ಟರ್ ರಂಜಿತ್, ಹೀರೋಯಿನ್ ಜೊತೆ ಮಾನ ಮರ್ಯಾದೆ ಬಿಟ್ಟು ನಡ್ಕೊಂಡಿದ್ನಂತೆ. 

ಎಲ್ಲ ಓಕೆ, ಹೇಮಾ ಕಮಿಟಿಯ ವರದಿಯಲ್ಲಿರೋ ಹೆಸರುಗಳನ್ನ ಕೋಡ್ ವರ್ಡುಗಳಲ್ಲಿ ನಿಗೂಢವಾಗಿ ಇಟ್ಟಿರೋದ್ಯಾಕೆ..? 
ರಿಪೋರ್ಟ್ ಇದೆ. ಹೇಳಿರೋದು ನ್ಯಾಯಮೂರ್ತಿಗಳ ಎದುರಿಗೆ. ಆದರೆ, ಬಹಿರಂಗವಾಗಿರೋ ರಿಪೋರ್ಟಿನಲ್ಲಿ ಎಲ್ಲರ ಹೆಸರೂ ನಿಗೂಢವಾಗಿಯೇ ಇದೆ. ಅತ್ಯಾಚಾರ, ಕಿರುಕುಳ, ದೌರ್ಜನ್ಯ.. ಎಲ್ಲ ಆಗಿದೆ. ಆದರೆ.. ಹೆಸರು ಮಾತ್ರ ಕೋಡ್ ವರ್ಡುಗಳಲ್ಲಿದ್ಯಂತೆ. ಯಾಕೆ.. ಅನ್ನೋ ಪ್ರಶ್ನೆ ಎತ್ತಿರೋದು ನಟ ನಿರ್ಮಾಪಕ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್. 

ಗೂನು ಬೆನ್ನಿನ ನಟಿಯೆಂದು ಅಣಕ ಮಾಡಿದ್ದವರ ಎದುರೇ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಕಲ್ಪನಾ?

ಮಲಯಾಳಂ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಬೆತ್ತಲಾದರೆ ಮಾತ್ರ ಚಿತ್ರರಂಗದಲ್ಲಿ ಬೆಲೆನಾ..? ಆರೋಪದ ಸೀರಿಯಸ್‌ನೆಸ್ ಕೇರಳ ಸರ್ಕಾರಕ್ಕೆ ಈಗ ಅರ್ಥ ಆಗಿದೆ. ಒಬ್ಬ ನಟಿಯನ್ನ ಕಿಡ್ನಾಪ್ ಮಾಡಿ ಕಿರುಕುಳ ನೀಡಿದಾಗಲೇ ಸೀರಿಯಸ್ಸಾಗಿದ್ದರೆ, ಇಡೀ ಚಿತ್ರರಂಗ ಮರ್ಯಾದೆ ಕಳ್ಕೊಳ್ಳೋ ಪರಿಸ್ಥಿತಿ ಬರ್ತಾ ಇರಲಿಲ್ಲವೇನೋ..!

Latest Videos
Follow Us:
Download App:
  • android
  • ios